MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ವಿಶ್ವಕ್ಕೆ ತೊಗಲುಗೊಂಬೆಯಾಟ ಪರಿಚಯಿಸಿದ 96 ವರ್ಷದ ಕೊಪ್ಪಳದ ಭೀಮವ್ವಳಿಗೆ ಪದ್ಮಶ್ರೀ ಗರಿ!

ವಿಶ್ವಕ್ಕೆ ತೊಗಲುಗೊಂಬೆಯಾಟ ಪರಿಚಯಿಸಿದ 96 ವರ್ಷದ ಕೊಪ್ಪಳದ ಭೀಮವ್ವಳಿಗೆ ಪದ್ಮಶ್ರೀ ಗರಿ!

ಕೊಪ್ಪಳ ಜಿಲ್ಲೆ ಕಲೆ‌,ಸಾಹಿತ್ಯ,ಸಂಗೀತ, ಸಂಸ್ಕೃತಿ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದ ಜಿಲ್ಲೆ.‌ಇಂತಹ ಪ್ರಸಿದ್ಧಿ ಪಡೆದ ಜಿಲ್ಲೆಗೆ ಇದೀಗ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

2 Min read
Author : Ravi Janekal
Published : Jan 26 2025, 12:01 AM IST
Share this Photo Gallery
  • FB
  • TW
  • Linkdin
  • Whatsapp
14
ಪದ್ಮಶ್ರೀ ಪ್ರಶಸ್ತಿ: ಭೀಮವ್ವ ಶಿಳ್ಳೇಕ್ಯಾತರ್

ಪದ್ಮಶ್ರೀ ಪ್ರಶಸ್ತಿ: ಭೀಮವ್ವ ಶಿಳ್ಳೇಕ್ಯಾತರ್

ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಇವರ ಹೆಸರನ್ನು ನೀವು ಕೇಳದೇ ಇರಲಾರರಿ. ತೊಗಲುಗೊಂಬೆಯಾಟ ಪ್ರದರ್ಶನ‌ ಮಾಡುವುದರಲ್ಲಿ ಇವರದ್ದು ವಿಶೇಷ ಸಾಧನೆ.‌ಹೀಗೆ ತೊಗಲುಗೊಂಬೆಯಾಟ ದಲ್ಲಿ ಸಾಧನೆ ಮಾಡಿದ 96 ವರ್ಷದ ಭೀಮವ್ವ ಶೀಳ್ಳೇಕ್ಯಾತರ್ ಗೆ ಇದೀಗ ದೇಶದ ಅತ್ಯುನತ ಪ್ರಶಸ್ತಿತಾದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 

ಯಾರು ಈ ಭೀಮವ್ವ ಶಿಳ್ಳೇಕ್ಯಾತರ್?

ಭೀಮವ್ವ ಶಿಳ್ಳೇಕ್ಯಾತರ್, ಮೈಲತಃ ರ್ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದವರಾದರು.
 1929 ರಲ್ಲಿ ಜನಿಸಿದರು.‌ಸದ್ಯ ತೊಗಲುಗೊಂಬೆಯಾಟದಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನ ಪಡೆದಿದ್ದಾರೆ.ತಮ್ಮ 14ನೇ ವಯಸ್ಸಿನಿಂದ ಇಲ್ಲಿಯ ವರೆಗೂ ತೊಗಲು ಗೊಂಬೆಯಾಟವನ್ನ ಕುಲ ಕಸುಬಾಗಿ ಮಾಡುತ್ತಾ ಇದನ್ನೇ ವೃತ್ತಿಯನ್ನಾಗಿಸಿಕೊಂಡು ಕಲೆಯಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ,
 

24
ಪದ್ಮಶ್ರೀ ಪ್ರಶಸ್ತಿ: ಭೀಮವ್ವ ಶಿಳ್ಳೇಕ್ಯಾತರ್

ಪದ್ಮಶ್ರೀ ಪ್ರಶಸ್ತಿ: ಭೀಮವ್ವ ಶಿಳ್ಳೇಕ್ಯಾತರ್

ವಿದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶನ

ತೊಗಲುಗೊಂಬೆಯಾಟ ಗ್ರಾಮೀಣ ಪ್ರದೇಶದ ಕಲೆಯಾದರೂ ಸಹ  ವಿದೇಶದಲ್ಲಿಯೂ ಸಹ ಈ‌‌‌ ಕಲೆ‌ ಪ್ರದರ್ಶನಗೊಂಡಿದೆ.‌ ಅಮೇರಿಕ, ಪ್ಯಾರಿಸ್, ಇಟಲಿ,ಇರಾನ್ ಮತ್ತು ಇರಾಕ್,ಸ್ವಿಟ್ಜರ್ಲೆಂಡ್‌‌, ಹಾಲೆಂಡ್ ಮುಂತಾದ ದೇಶಗಳಲ್ಲಿ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳನ್ನ ,ಹಾಗೂ ಪ್ರಸ್ತುತ ವಿದ್ಯಮಾನಗಳನ್ನ ಭೀಮವ್ವ ಶಿಳ್ಳೇಕ್ಯಾತರ್ ತೊಗಲುಗೊಂಬೆಯಾಟದ ಮೂಲಕ  ಪ್ರದರ್ಶನ ನೀಡಿ ನಾಡಿನ ಕಲೆ,ಸಂಸ್ಕೃತಿ,ಪರಂಪರೆಯನ್ನ ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಭೀಮವ್ವ ಶಿಳ್ಳೇಕ್ಯಾತರ್ ಅವರಿಗೆ ಪ್ರಶಸ್ತಿಗಳ ಸುರಿಮಳೆ

ಭೀಮವ್ವ ಶಿಳ್ಳೇಕ್ಯಾತರ್ ಅವರ ಸಾಧನೆಯನ್ನ ಕಂಡು ಸರ್ಕಾರವು ಅನೇಕ ಪ್ರಶಸ್ತಿ ನೀಡಿ ಗೌರವಿಸಿದೆ .1993ರಲ್ಲಿ ತೆಹರಾನ್ ದೇಶದ ಬೊಂಬೆ ಉತ್ಸವ ಪ್ರಶಸ್ತಿ,63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಪ್ರಶಸ್ತಿ, 2005-06 ನೇ ಸಾಲಿನಲ್ಲಿ ಜಾನಪದ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ,2010 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ,2020-21ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿ,2022ರಲ್ಲಿ ಹಿರಿಯ ನಾಗರೀಕ ಪ್ರಶಸ್ತಿ ಹೀಗೆ   ಸರ್ಕಾರ ಸಂಘ  ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು  ಲಭಿಸಿವೆ.
 

34
ಪದ್ಮಶ್ರೀ ಪ್ರಶಸ್ತಿ: ಭೀಮವ್ವ ಶಿಳ್ಳೇಕ್ಯಾತರ್

ಪದ್ಮಶ್ರೀ ಪ್ರಶಸ್ತಿ: ಭೀಮವ್ವ ಶಿಳ್ಳೇಕ್ಯಾತರ್

ಕೊನೆಗೂ ಲಭಿಸಿತು ದೇಶದ ಅತ್ಯುನ್ನತ ಪ್ರಶಸ್ತಿ

ಇನ್ನು 96 ವರ್ಷದ ಭೀಮವ್ವ ಶಿಳ್ಳೇಕ್ಯಾತರ್ ಅವರಿಗೆ ಈಗಾಗಲೇ ಅನೇಕ ಪ್ರಶಸ್ತಿಗಳು ಲಭಿಸಿದ್ದವು.‌ಇದರ ಮಧ್ಯೆ ಭೀಮವ್ವ ಅವರಿಗೆ ಕೇಂದ್ರ ಸರಕಾರ ಕಲಾ ವಿಭಾಗದಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ‌ ತೊಗಲುಗೊಂಬೆಯಾಟ ಪ್ರದರ್ಶನ ಹಾಗೂ ಭೀಮವ್ವ ಶಿಳ್ಳೇಕ್ಯಾತರ್ ಅವರಿಗೆ ಗೌರವ ನೀಡಿದೆ.

44
ಪದ್ಮಶ್ರೀ ಪ್ರಶಸ್ತಿ: ಭೀಮವ್ವ ಶಿಳ್ಳೇಕ್ಯಾತರ್

ಪದ್ಮಶ್ರೀ ಪ್ರಶಸ್ತಿ: ಭೀಮವ್ವ ಶಿಳ್ಳೇಕ್ಯಾತರ್

ಒಟ್ಟಿನಲ್ಲಿ ತಮ್ಮ‌ ಇಡೀ ಜೀವನವನ್ನೇ ತೊಗಲುಗೊಂಬೆಯಾಟದ ಪ್ರದರ್ಶನಕ್ಕೆ ಮೀಸಲಾಗಿಟ್ಟಿದ್ದ ಭೀಮವ್ವ ಶಿಳ್ಳೇಕ್ಯಾತರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು ನಿಜಕ್ಕೂ‌ ಅಭಿನಂದನೀಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕೊಪ್ಪಳ

Latest Videos
Recommended Stories
Recommended image1
ರಾಯರ ಸನ್ನಿಧಿಯಲ್ಲಿ ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ಕಿಡಿ: ದೇಶದಲ್ಲೇ ನಂಬರ್ 1 ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ!
Recommended image2
Karnataka Rains: ಬಂಗಾಳಕೊಲ್ಲಿ ವಾಯುಭಾರ ಕುಸಿತ; ಉತ್ತರಕನ್ನಡದಲ್ಲಿ ಗುಡುಗು ಸಹಿತ ಮಳೆ, ಕಾಫಿನಾಡಲ್ಲೂ ವರ್ಷಧಾರೆ!
Recommended image3
ರೈಲ್ವೆ ರಕ್ಷಣೆ ತರಬೇತಿ ಕಲಿಯಲು ಬೆಂಗಳೂರಿನ ಭಾರತೀಯ ರೈಲ್ವೆ ವಿಭಾಗಕ್ಕೆ ಬಂದ ತಾಂಜೇನಿಯಾ ಸಿಬ್ಬಂದಿಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved