MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಕೊಡಗಿನಲ್ಲಿ ತಣ್ಣಗಾಗದ ವಸ್ತ್ರ ಸಂಹಿತೆ ದಂಗಲ್ ಕಿಚ್ಚು; ಎರಡು ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ನಿಂದನೆ

ಕೊಡಗಿನಲ್ಲಿ ತಣ್ಣಗಾಗದ ವಸ್ತ್ರ ಸಂಹಿತೆ ದಂಗಲ್ ಕಿಚ್ಚು; ಎರಡು ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ನಿಂದನೆ

 ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ದೇವಾಲಯದಲ್ಲಿ ಶುರುವಾದ ವಸ್ತ್ರ ಸಂಹಿತೆ ಕಿತ್ತಾಟದ ಕಾವು ಇನ್ನೂ ತಣ್ಣಗಾಗದೆ ಬೂದಿಮುಚ್ಚಿದ ಕೆಂಡದಂತಾಗಿದೆ. - ವರದಿ :ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

2 Min read
Suvarna News
Published : Jan 02 2025, 10:16 PM IST
Share this Photo Gallery
  • FB
  • TW
  • Linkdin
  • Whatsapp
13

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ದೇವಾಲಯದಲ್ಲಿ ಶುರುವಾದ ವಸ್ತ್ರ ಸಂಹಿತೆ ಕಿತ್ತಾಟದ ಕಾವು ಇನ್ನೂ ತಣ್ಣಗಾಗದೆ ಬೂದಿಮುಚ್ಚಿದ ಕೆಂಡದಂತೆ ಇದೆ. ಸಮಿತಿ ಸ್ಥಾಪನೆಗಾಗಿ ಸಮಿತಿಯೊಂದನ್ನು ರಚಿಸಿ ಅದನ್ನು ಸರಿಪಡಿಸುವ ಯತ್ನವನ್ನು ಜಿಲ್ಲಾಡಳಿತ ಮಾಡುತ್ತಿದೆ. ಇದೀಗ ಕೊಡವ ಹಾಗೂ ಅರೆಭಾಷೆ ಗೌಡ ಎರಡು ಸಮುದಾಯಗಳ ನಡುವೆ ಜಾತಿ ನಿಂದನೆ, ಮಕ್ಕಳು ಮಹಿಳೆಯರ ನಿಂದನೆ ಮಾಡುವ ಹಂತಕ್ಕೆ ತಲುಪಿದ್ದು ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವಿನ ಶಾಂತಿ ಸಹಬಾಳ್ವೆ ಎನ್ನುವುದು ವೈಷಮ್ಯಕ್ಕೆ ತಿರುಗಿದೆ. 

ಹೌದು ಕೊಡವ ಸಮುದಾಯದವರನ್ನು, ಅವರ ಆಚಾರ ವಿಚಾರಗಳನ್ನು ಹಾಗೂ ಅವರ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ನಿಂದಿಸಲಾಗುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಕೊಡವ ಸಮುದಾಯದ ಕೆಲ ಯುವಕರು ಅರೆಭಾಷೆ ಗೌಡ ಸಮುದಾಯದ ಜನರನ್ನು, ಅವರ ಆಚಾರ, ವಿಚಾರಗಳನ್ನು, ಅವರ ಹೆಣ್ಣುಮಕ್ಕಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೀನಾಯವಾಗಿ ನಿಂದಿಸಲಾಗುತ್ತಿದೆ. ಹೀಗಾಗಿ ಪರಸ್ಪರರ ವಿರುದ್ಧ ಎರಡು ಸಮುದಾಯಗಳಿಂದಲೂ ಪೊಲೀಸರಿಗೆ ದೂರು ನೀಡಲಾಗಿದೆ. ಕಟ್ಟೆಮಾಡುವಿನ ಮಹಾಮೃತ್ಯುಂಜಯ ದೇವಾಲಯಕ್ಕೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಗೆಯಾದ ಕುಪ್ಯೆಚಾಲೆ ತೊಟ್ಟು ಬಂದಿದ್ದನ್ನು ದೇವಾಲಯ ಸಮಿತಿಯು ತಡೆದಿತ್ತು.

ಬಳಿಕ ಅದು ಕೊಡವ ಮತ್ತು ಅರೆಭಾಷೆ ಗೌಡ ಸಮುದಾಯಗಳ ನಡುವಿನ ಗಲಾಟೆಯಾಗಿ ಬಲಾಗಿತ್ತು. ಅದಾದ ಬಳಿಕ ಕುಶಾಲನಗರದ ಅನುದೀಪ್ ಎಂಬ ಹಾಗೂ ಅಯ್ಯಪ್ಪ ಎಂಬ ವ್ಯಕ್ತಿಗಳಿಬ್ಬರೂ ಕೊಡವ ಹಾಗೂ ಅರೆಭಾಷೆ ಗೌಡ ಸಮುದಾಯಗಳ ವಿರುದ್ಧ ಪರಸ್ಪರ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿ ಸಮಾಜಿಕ ಜಾಲತಾಣಗಳಲ್ಲಿ ಮೆಸೇಜ್ಗಳನ್ನು ಹರಿಬಿಟ್ಟಿದ್ದರು. 

23

ಸದ್ಯ ಇವರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ಜನವರಿ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆದರೆ ಇದು ಅಷ್ಟಕ್ಕೇ ನಿಂತಿಲ್ಲ, ಬದಲಾಗಿ ಮತ್ತಷ್ಟು ಜನರು ಎರಡು ಸಮುದಾಯಗಳ ವಿರುದ್ಧ ಪರಸ್ಪರ ಕೀಳು ಭಾಷೆಗಳನ್ನು ಬಳಸಿ ನಿಂದಿಸಿ ಆಡಿಯೋ ಮೆಸೇಜ್ಗಳನ್ನು ಹಾಕುತ್ತಲೇ ಇದ್ದಾರೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವಿನ ಸಾಮರಸ್ಯ ದಿನದಿಂದ ದಿನಕ್ಕೆ ಮತ್ತಷ್ಟು ಹಾಳಾಗುತ್ತಲೇ ಇದೆ. ಡಿಸೆಂಬರ್ 28 ರಂದು ಗಲಾಟೆ ನಡೆದ ಬಳಿಕ 30 ರಂದು ಜಿಲ್ಲಾಡಳಿತ ದೇವಾಲಯದ ಸುತ್ತ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿತ್ತು. ಜೊತೆಗೆ ಅಂದೇ ಎರಡು ಸಮುದಾಯಗಳ ಕರೆದು ಜಿಲ್ಲಾಡಳಿತ ಶಾಂತಿ ಸಭೆ ನಡೆಸಿ ಗೊಂದಲ ನಿವಾರಣೆಗೆ ಪ್ರಯತ್ನಿಸಿತ್ತು.

ಇದೀಗ ಮತ್ತೆ ಎರಡು ಸಮುದಾಯಗಳ ನಡುವೆ ಇಂತಹದ್ದೇ ಸಾಮಾಜಿಕ ಜಾಲತಾಣದ ಸಮರ ಮುಂದುವರೆದಿದ್ದು ಬುಧವಾರವೂ ಕೂಡ ಅರೆಭಾಷೆ ಗೌಡ ಸಮುದಾಯದ ಜನರು ಸಾಮಾಜಿಕ ಜಾಲತಾಣಗಳಲ್ಲಿ ನಿಂತಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

33

ನೂರಾರು ಸಂಖ್ಯೆಯಲ್ಲಿ ಎಸ್ಪಿ ಕಚೇರಿ ಎದುರು ಜಮಾಯಿಸಿದ ಅರೆಭಾಷೆ ಗೌಡ ಸಮುದಾಯದ ಜನರು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹೀಗೆ ಇದು ಮುಂದುವರಿಯುತ್ತಲೇ ಇರುವುದರಿಂದ ಐದು ದಿನಗಳ ಕಾಲ ಸಮಯಾವಕಾಶ ನೀಡಿ ಒಂದು ನಿರ್ಧಾರಕ್ಕೆ ಬರುವಂತೆ ಎರಡು ಸಮುದಾಯಗಳಿಗೆ ಸೂಚಿಸಿದ್ದ ಜಿಲ್ಲಾಡಳಿತ ಸಾಮಾಜಿಕ ಜಾಲತಾಣದಲ್ಲಿ ಎರಡು ಸಮುದಾಯಗಳು ಪರಸ್ಪರ ನಿಂದಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನವರಿ 2 ರಂದು ಕೊನೆಗೊಳ್ಳಬೇಕಾಗಿದ್ದ ನಿಷೇಧಾಜ್ಞೆಯನ್ನು 7 ನೇ ತಾರೀಖಿನವರೆಗೆ ವಿಸ್ತರಣೆ ಮಾಡಿದೆ.

ಈ ಕುರಿತು ಮಾತನಾಡಿರುವ ಕೊಡಗು ಎಸ್ಪಿ ರಾಮರಾಜನ್ ಕೆ. ಅವರು ಇರಡು ಸಮುದಾಯಗಳನ್ನು ಇದನ್ನು ನಿಲ್ಲಿಸಬೇಕು. ಯಾರೆ ಆದರೂ ಈ ರೀತಿ ನಿಂದಿಸುವ ಕೆಲಸ ಮಾಡಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ. ಜೊತೆಗೆ ಎರಡು ಸಮುದಾಯಗಳ ಮುಖಂಡರು ಯಾರೋ ಕಿಡಿಗೇಡಿಗಳು ಮಾಡುವ ತಪ್ಪಿಗೆ ಇಡೀ ಸಮುದಾಯಗಳ ತೊಂದರೆ ಅನುಭವಿಸುವಂತೆ ಆಗಿವೆ. ಇದನ್ನು ಬಿಡಬೇಕು, ಇಲ್ಲದಿದ್ದರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

About the Author

SN
Suvarna News
ಕೊಡಗು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved