MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಮೇಘಾಲಯದಲ್ಲಿ ಕರ್ನಾಟಕ ಮಾಧ್ಯಮ ತಂಡ: ನೈಸರ್ಗಿಕ ಸೇತುವೆ ನಿರ್ಮಾತೃ ಶ್ರೀ ಹ್ಯಾಲಿ ವಾರ್ ಜೊತೆ ಸಂವಾದ.

ಮೇಘಾಲಯದಲ್ಲಿ ಕರ್ನಾಟಕ ಮಾಧ್ಯಮ ತಂಡ: ನೈಸರ್ಗಿಕ ಸೇತುವೆ ನಿರ್ಮಾತೃ ಶ್ರೀ ಹ್ಯಾಲಿ ವಾರ್ ಜೊತೆ ಸಂವಾದ.

ಮೇಘಾಲಯದ ದುರ್ಗಮ ಸೀಜ್ ಗ್ರಾಮದಲ್ಲಿ ಮರದ ಬೇರುಗಳಿಂದ ನೈಸರ್ಗಿಕ ಸೇತುವೆ ನಿರ್ಮಿಸಿ ಪದ್ಮಶ್ರೀ ಪುರಸ್ಕೃತ ಹ್ಯಾಲಿ ವಾರ್ ಅವರ ಸಾಧನೆಯನ್ನು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ತಂಡ ವೀಕ್ಷಿಸಿತು. ಪ್ರಕೃತಿಯ ಒಡನಾಟದಿಂದ 70 ಅಡಿ ಉದ್ದದ ಬೇರಿನ ಸೇತುವೆ ನಿರ್ಮಿಸಿರುವ ಅವರ ಜೀವನಗಾಥೆ ಇಲ್ಲಿದೆ. 

2 Min read
Author : Ravi Janekal
Published : Feb 06 2026, 04:44 PM IST
Share this Photo Gallery
  • FB
  • TW
  • Linkdin
  • Whatsapp
13
ಮರದ ಬೇರುಗಳಲ್ಲೇ ನೈಸರ್ಗಿಕ ಸೇತುವೆ ನಿರ್ಮಿಸಿದ ಮೇಘಾಲಯದ ಸಾಧಕ ಹ್ಯಾಲಿ ವಾರ್!
Image Credit : Asianet News

ಮರದ ಬೇರುಗಳಲ್ಲೇ ನೈಸರ್ಗಿಕ ಸೇತುವೆ ನಿರ್ಮಿಸಿದ ಮೇಘಾಲಯದ ಸಾಧಕ ಹ್ಯಾಲಿ ವಾರ್!

ಮೇಘಾಲಯದ ಪಶ್ಚಿಮ ಖಾಸಿ ಜಿಲ್ಲೆಯ ದುರ್ಗಮ ಪ್ರದೇಶದಲ್ಲಿರುವ ಸೀಜ್ ಗ್ರಾಮದ ಉಮಕಾರ್ ನೈಸರ್ಗಿಕ ಸೇತುವೆ ನಿರ್ಮಾತೃ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ಹ್ಯಾಲಿ ವಾರ್ ಅವರೊಂದಿಗೆ ಕರ್ನಾಟಕದ ಮಾಧ್ಯಮ ತಂಡವು ಸಂವಾದ ನಡೆಸಿತು.

ಭಾರತ ಸರ್ಕಾರದ ಬೆಂಗಳೂರಿನ ವಾರ್ತಾ ಶಾಖೆ ಆಯೋಜಿಸಿರುವ ಮೇಘಾಲಯ ಅಧ್ಯಯನ ಪ್ರವಾಸದ 5ನೇ ದಿನವಾದ ಇಂದು, ಮಾಧ್ಯಮ ಪ್ರತಿನಿಧಿಗಳು ಶ್ರೀ ಹ್ಯಾರಿ ವಾರ್ ಅವರ ಜೀವನ, ಸಾಧನೆಗಳ ಕುರಿತು ಮಾಹಿತಿ ಪಡೆದುಕೊಂಡರು.

23
50 ವರ್ಷಗಳ ತಪಸ್ಸಿನಿಂದ ಮೂಡಿದ 70 ಅಡಿ ಉದ್ದದ ಜೀವಂತ ಸೇತುವೆ!
Image Credit : Asianet News

50 ವರ್ಷಗಳ ತಪಸ್ಸಿನಿಂದ ಮೂಡಿದ 70 ಅಡಿ ಉದ್ದದ ಜೀವಂತ ಸೇತುವೆ!

ಶ್ರೀ ಹ್ಯಾಲಿ ವಾರ್ ಅವರು ಶಾಲಾ ಶಿಕ್ಷಣ ಪಡೆಯದಿದ್ದರೂ, ಪ್ರಕೃತಿಯೊಂದಿಗೆ ಗಾಢ ಒಡನಾಟ ಹೊಂದಿದ್ದಾರೆ. ಸುಮಾರು ತಮ್ಮ ಹತ್ತನೇ ವಯಸ್ಸಿನಲ್ಲೇ ನೈಸರ್ಗಿಕ ಸೇತುವೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದ ಅವರಿಗೆ ಈಗ ಸುಮಾರು 69ರ ಪ್ರಾಯ. ಈ ವಯಸ್ಸಿನಲ್ಲೂ ತುಂಬು ಉತ್ಸಾಹದಿಂದ ಪರಿಸರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮರದ ಬೇರುಗಳಿಂದಲೇ ಸುಮಾರು 70 ಅಡಿ ಉದ್ದದ ಸೇತುವೆಯನ್ನು ಕಳೆದ 50 ವರ್ಷಗಳಿಂದ ನಿರ್ಮಿಸಿ, ಅದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ.

“ಚಿಕ್ಕವಯಸ್ಸಿನಲ್ಲೇ ನಾನು ತಂದೆ ಮತ್ತು ತಾತನೊಂದಿಗೆ ಮರದ ಬೇರುಗಳನ್ನು ಸೇತುವೆಯನ್ನಾಗಿ ಪರಿವರ್ತಿಸಲು ತೆರಳುತ್ತಿದ್ದೆ. ಕಾಲಾಂತರದಲ್ಲಿ ಈ ವಿಶಿಷ್ಟ ಕಲೆಯನ್ನು ಕರಗತ ಮಾಡಿಕೊಂಡೆ. ಇದುವರೆಗೂ ಮೂರು ನೈಸರ್ಗಿಕವಾಗಿ ಜೀವ ಹೊಂದಿರುವ ಬೇರುಗಳ ಸೇತುವೆ ನಿರ್ಮಿಸಿದೆ” ಎಂದು ಶ್ರೀ ಹ್ಯಾಲಿ ವಾರ್ ತಿಳಿಸಿದರು.

ಶ್ರೀ ವಾರ್ ಅವರ ಪುತ್ರ ಶ್ರೀ ವಿಲ್ಲಿಂಗ್‍ ಸನ್ ಅವರು ತಮ್ಮ ತಂದೆಯ ಕುರಿತು ಮಾತನಾಡಿ, ತಂದೆಯ ಕಾರ್ಯ ನಮಗೆ ಬಾಲ್ಯದಿಂದಲೂ ಪ್ರೇರಣೆಯಾಗಿದೆ. ನಾನು ಸಹ ಅವರ ರೀತಿಯಲ್ಲೇ ಸೇತುವೆ ಕಟ್ಟುಯ ಕಾಯಕದಲ್ಲಿ

ತೊಡಗಿಸಿಕೊಂಡಿದ್ದೇನೆ. ಮೇಘಾಲಯದ ಈ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತದೆ. ಮಳೆಗಾಲ ಹಾಗೂ ತುರ್ತು ಸಂದರ್ಭಗಳಲ್ಲಿ ನಾವು ನಿರ್ಮಿಸಿದ ಬೇರಿನ ಸೇತುವೆಗಳು ಜನರ ಸಂಚಾರಕ್ಕೆ ಅನುಕೂಲವಾಗಿದೆ. ಇದು ಮುಖ್ಯವಾಗಿ ನಮ್ಮ ಗ್ರಾಮದಿಂದ ಪಕ್ಕದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸಾಧನವಾಗಿದೆ” ಎಂದು ತಿಳಿಸಿದರು.

Related Articles

Related image1
ದೇಶದ ಅತ್ಯಂತ ಹಳೆಯ ಅಸ್ಸಾ ರೈಫಲ್ಸ್ ಕೇಂದ್ರಕ್ಕೆ ಕರ್ನಾಟಕ ಮಾಧ್ಯಮ ತಂಡದಿಂದ ಭೇಟಿ
Related image2
ಮೇಘಾಲಯದ ಪ್ರಖ್ಯಾತ 'ಉಮ್ದೆನ್ ಡಿವಾನ್' ಗ್ರಾಮಕ್ಕೆ ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ತಂಡ ಭೇಟಿ
33
ಹ್ಯಾಲಿ ವಾರ್,ಅವರ ಕುಟುಂಬಕ್ಕೆ ಗೌರವ
Image Credit : Asianet News

ಹ್ಯಾಲಿ ವಾರ್,ಅವರ ಕುಟುಂಬಕ್ಕೆ ಗೌರವ

ಇದೇ ಸಂದರ್ಭದಲ್ಲಿ ಬೆಂಗಳೂರಿನ ವಾರ್ತಾ ಶಾಖೆ ಹಾಗೂ ಕರ್ನಾಟಕ ಮಾಧ್ಯಮ ಪ್ರತಿನಿಧಿಗಳಿಂದ ಶ್ರೀ ಹ್ಯಾಲಿ ವಾರ್, ಅವರ ಪತ್ನಿ ಶ್ರೀಮತಿ ಫಿಲಾರಿಸ್‍ ಖೈಲೆಪ್‍ ಹಾಗೂ ಪುತ್ರ ಶ್ರೀ ವಿಲ್ಲಿಂಗ್ ಅವರನ್ನು ಸನ್ಮಾನಿಸಲಾಯಿತು.

ಕಡಿದಾದ ಬೆಟ್ಟದ ಸಾಲುಗಳ ನಡುವೆ ಇರುವ ಸೀಜ್ ಗ್ರಾಮದ ಪಕೃತಿ ಸೌದರ್ಯ ಹಾಗು ಬೇರಿನ ಸೇತುವೆಯ ಸಾಹಸಮಯ ಸೌಂದರ್ಯವನ್ನು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳು ಕಣ್ತುಂಬಿಕೊಂಡರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕರ್ನಾಟಕ ಸುದ್ದಿ
ಮೇಘಾಲಯ

Latest Videos
Recommended Stories
Recommended image1
ಲಕ್ಕುಂಡಿ ಅಭಿವೃದ್ಧಿಗೆ ಎಚ್‌ಕೆ ಪಾಟೀಲ್ ಚಾಲನೆ; ರಾಜಕೀಯ ವೈಷಮ್ಯ ಮರೆತು ಸಚಿವರಿಗೆ ಸಾಥ್ ನೀಡಿದ ಬಿಜೆಪಿ ನಾಯಕರು
Recommended image2
5 ವರ್ಷವೂ ನಮ್ಮ ತಂದೆಯವರೇ ಸಿಎಂ: ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ!
Recommended image3
ಅಮೆರಿಕಾಗೆ ಹೊರಟಿದ್ದ ಹುಬ್ಬಳ್ಳಿ ಮಹಿಳೆಯ ಕೋಟಿಗಟ್ಟಲೆ ಚಿನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಬಳಿಕ ಮಾಯ!
Related Stories
Recommended image1
ದೇಶದ ಅತ್ಯಂತ ಹಳೆಯ ಅಸ್ಸಾ ರೈಫಲ್ಸ್ ಕೇಂದ್ರಕ್ಕೆ ಕರ್ನಾಟಕ ಮಾಧ್ಯಮ ತಂಡದಿಂದ ಭೇಟಿ
Recommended image2
ಮೇಘಾಲಯದ ಪ್ರಖ್ಯಾತ 'ಉಮ್ದೆನ್ ಡಿವಾನ್' ಗ್ರಾಮಕ್ಕೆ ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ತಂಡ ಭೇಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved