ಡಿಸಿಎಂ ಡಿಕೆಶಿ ಫೋಟೋವನ್ನು ಮೆಹಂದಿ ಹಾಕಿಸಿಕೊಂಡ ಮುಸ್ಲಿಂ ಮಹಿಳೆ, ಕನಕೋತ್ಸವ ಸಂಭ್ರಮ
ಡಿಸಿಎಂ ಡಿಕೆಶಿ ಫೋಟೋವನ್ನು ಮೆಹಂದಿ ಹಾಕಿಸಿಕೊಂಡ ಮುಸ್ಲಿಂ ಮಹಿಳೆ, ಇದೀಗ ಈ ಫೋಟೋಗಳು ಭಾರಿ ಸದ್ದು ಮಾಡುತ್ತಿದೆ. ಖುದ್ದು ಡಿಕೆ ಶಿವಕುಮಾರ್ ಈ ಫೋಟೋ ಹಂಚಿಕೊಂಡಿದ್ದಾರೆ. ಏನಿದು ಕನಕೋತ್ಸವ ಸಂಭ್ರಮ?

ಕನಕೋತ್ಸವದ ಮಹೆಂದಿ ಸದ್ದು
ಕನಕೋತ್ಸವ ಸಂಭ್ರಮದ ಮೆರೆಗು ರಾಜ್ಯದೆಲ್ಲೆಡೆ ಪಸರಿಸಿದೆ ಅದ್ಧೂರಿ ಹಾಗೂ ಇತಿಹಾಸದ ವೈಭದಂತೆ ಆಯೋಜನೆಗೊಂಡ ಕನಕೋತ್ಸವದಲ್ಲಿ ರಂಗೋಲಿಿ ಹಾಗೂ ಮೆಹಂದಿ ಸ್ಪರ್ಧೆ ಎಲ್ಲರ ಗಮನಸೆಳೆದಿತ್ತು. ಕನಕೋತ್ಸವ ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆಯಲ್ಲಿ ಹಲವರು ಪಾಲ್ಗೊಂಡಿದ್ದರು. ಅತ್ಯಾಕರ್ಷಕ ರಂಗೋಲಿ ಹಾಗೂ ಮಹೆಂದಿ ಡಿಸೈನ್ ಎಲ್ಲರ ಗಮನಸೆಳೆದಿತ್ತು. ಇದರಲ್ಲಿ ಮುಸ್ಲಿಮ್ ಮಹಿಳೆಯ ಕೈಯಲ್ಲಿನ ಮಹೆಂದಿ ಇದೀಗ ಭಾರಿ ಸದ್ದು ಮಾಡುತ್ತಿದೆ.
ಡಿಕೆ ಶಿವಕುಮಾರ್ ಬಾವಚಿತ್ರ ಮಹೆಂದಿ
ಮಹೆಂದಿ ಸ್ಪರ್ಧೆಯಲ್ಲಿ ಮುಸ್ಲಿಮ್ ಮಹಿಳೆ ತನ್ನ ಕೈಯಲ್ಲಿ ಡಿಸಿಎಂ ಡಿಕೆ ಶಿವುಕಮಾರ್ ಫೋಟೋ ಬಿಡಿಸಿದ್ದರು. ಇದು ಎಲ್ಲರ ಗಮನಸೆಳೆದಿತ್ತು. ಮುಸ್ಲಿಮ್ ಮಹಿಳೆ ಕೈಯಲ್ಲಿ ತಮ್ಮ ಭಾವಚಿತ್ರದ ಮೆಹಂದಿ ನೋಡಿ ಡಿಕೆ ಶಿವಕುಮಾರ್ ಸಂತಸ ಪಟ್ಟಿದ್ದಾರೆ. ಮಹಿಳೆ ಫೋಟೋ ಕ್ಲಕ್ಕಿಸಿದ್ದಾರೆ. ಡಿಕೆ ಶಿವಕುಮಾರ್ ಜೊತೆ ಡಿಕೆ ಸುರೇಶ್ ಬಾವಚಿತ್ರವನ್ನು ಮಹೆಂದಿ ಹಾಕಿದ್ದಾರೆ.
ಸಂಭ್ರಮ ಹಂಚಿಕೊಂಡ ಡಿಕೆ ಶಿವಕುಮಾರ್
ಕನಕೋತ್ಸವದ ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆ ಹಾಗೂ ಪ್ರಶಸ್ತಿ ವಿತರಣೆ ಕುರಿತು ಡಿಕೆ ಶಿವಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಡಿಕೆ ಶಿವಕುಮಾರ್ ಪತ್ನಿ ಉಷಾ ಸೇರಿದಂತೆ ಕುಟುಂಬಸ್ಥರು ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ್ದಾರೆ.
ಕನಕೋತ್ಸವದಲ್ಲಿ ರಂಗೋಲಿ ಹಾಗೂ ಮೆಹೆಂದಿಯ ರಂಗು
ಕನಕಪುರದ ಕನಕೋತ್ಸವದಲ್ಲಿ ರಂಗೋಲಿ ಹಾಗೂ ಮೆಹೆಂದಿ ಸ್ಪರ್ಧೆಯು ಹಬ್ಬದ ಸಂಭ್ರಮವನ್ನುಂಟು ಮಾಡಿದೆ. ಇಂದು ನನ್ನ ಧರ್ಮಪತ್ನಿ ಉಷಾ ಹಾಗೂ ಸಹೋದರಿ ಮಂಜುಳಾ ಅವರು ರಂಗೋಲಿ ಮತ್ತು ಮೆಹೆಂದಿ ಸ್ಪರ್ಧೆಯನ್ನು ವೀಕ್ಷಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಿದ್ದಾರೆ. ಭಕ್ತಿ, ಪರಂಪರೆ, ಸಾಮಾಜಿಕ ಸಂದೇಶಗಳನ್ನು ಒಳಗೊಂಡ ರಂಗೋಲಿ ಹಾಗೂ ಮೆಹೆಂದಿ ಚಿತ್ರಗಳು ಎಲ್ಲರ ಗಮನ ಸೆಳೆದವು ಎಂದು ಡಿಕೆ ಶಿವಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಕನಕೋತ್ಸವ ಸಂಭ್ರಮ
ಕನಕೋತ್ಸವ ಕಾರ್ಯಕ್ರಮದ ಫೋಟೋಗಳು, ವಿಡಿಯೋಗಳು ಭಾರಿ ವೈರಲ್ ಆಗಿದೆ. ಅದ್ಧೂರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಜನಸಾಗರವೇ ಹರಿದು ಬಂದಿತ್ತು. ಕನಕೋತ್ಸವ ಸಂಭ್ರಮದಲ್ಲಿ ಜನ ಮಿಂದೆದ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

