ಯಾದಗಿರಿ: ನಡುರಸ್ತೆಯಲ್ಲೇ ನೂರಾರು ಕಾಂಡೋಮ್ ಬಾಕ್ಸ್‌ಗಳು ಪತ್ತೆ!
ಕೇಂದ್ರ ಸರ್ಕಾರದಿಂದ ಸಾರ್ವಜನಿಕ ಆಸ್ಪತ್ರೆಗಳಿಗೆ ವಿತರಣೆಯಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೂರಾರು ಕಾಂಡೋಮ್ಸ್ ಪಾಕೆಗಳಿರುವ ಬಾಕ್ಸ್ ಗಳು ರಸ್ತೆಯಲ್ಲಿಬ ಬಿಟ್ಟುಹೋಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಕೇಂದ್ರ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗೆ ವಿತರಣೆಯಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನಿರೋಧ (ಕಾಂಡೋಮ್) ಪಾಕೆಟ್‌ಗಳಿರುವ ನೂರಾರು ಬಾಕ್ಸ್‌ಗಳು ನಡು ರಸ್ತೆಯಲ್ಲಿಟ್ಟು ಪರಾರಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಸಮೀಪದ ಇಬ್ರಾಹಿಂಪುರ ಕ್ರಾಸ್ ರಸ್ತೆಯಲ್ಲಿ ನಡೆದಿದೆ.
2026 ಅವಧಿವರೆಗೆ ಇರುವ ನಿರೋಧ ಪಾಕೆಟ್‌ಗಳು. ಯಾವ ಕಾರಣಕ್ಕೆ ನಿರೋಧ ಪಾಕೆಟ್ ಗಳು ತುಂಬಿರುವ ಬಾಕ್ಸ್‌ಗಳನ್ನು ರಸ್ತೆಯಲ್ಲಿ ಇಡಲಾಗಿದೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ. ನಿರೋಧ ಪಾಕೆಟ್ ಎಲ್ಲಿಗೆ ಸಾಗಿಸಲಾಗುತ್ತಿತ್ತು. ಯಾವ ಆಸ್ಪತ್ರೆಗೆ ತಲುಪಬೇಕಿತ್ತು ತಿಳಿದಿಲ್ಲ.
ಸಾರ್ವಜನಿಕರಿಗೆ ಹಂಚುವುದಕ್ಕೆ ಮುಜುಗರಿಂದ ರಸ್ತೆಯಲ್ಲೇ ಬಿಟ್ಟುಹೋಗಿದ್ದಾರೆ. ಅಥವಾ ಇನ್ನೇನಾದರೂ ಕಾರಣಗಳಿವೆಯಾ? ರಸ್ತೆಯ ಮೇಲೆ ದೊಡ್ಡ ದೊಡ್ಡ ಬಾಕ್ಸ್‌ಗಳಲ್ಲಿರುವ ಕಾಂಡೋಮ್‌ಗಳು. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆಯಾಗಬೇಕಿದ್ದ ಕಾಂಡೋಮ್‌ಗಳು ಹೀಗೆ ರಸ್ತೆಯ ಮೇಲೆ ಬಿಸಾಡಿ ಹೋಗಿರುವುದು ಅಚ್ಚರಿ ಮೂಡಿಸಿದೆ. ಕಾಂಡೋಮ್ ಬಾಕ್ಸ್‌ಗಳ ಬಿಟ್ಟುಹೋಗಿರುವ ಸಾರ್ವಜನಿಕರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ ವಿಡಿಯೋ.