MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • News
  • State
  • ದುಬೈನಿಂದ ಬೆಂಗಳೂರಿಗೆ 3.5 ಕೆಜಿ ಗೋಲ್ಡ್ ಸ್ಮಗ್ಲಿಂಗ್; ಚೆಕಿಂಗ್ ವೇಳೆ ಸಹ ಪ್ರಯಾಣಿಕನ ಬ್ಯಾಗ್‌ಗೆ ಹಾಕಿದ!

ದುಬೈನಿಂದ ಬೆಂಗಳೂರಿಗೆ 3.5 ಕೆಜಿ ಗೋಲ್ಡ್ ಸ್ಮಗ್ಲಿಂಗ್; ಚೆಕಿಂಗ್ ವೇಳೆ ಸಹ ಪ್ರಯಾಣಿಕನ ಬ್ಯಾಗ್‌ಗೆ ಹಾಕಿದ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 3.5 ಕೆಜಿ ಚಿನ್ನ ಪತ್ತೆ. ಸಹಪ್ರಯಾಣಿಕನ ಟ್ರಾಲಿ ಬ್ಯಾಗ್‌ನಲ್ಲಿ ಚಿನ್ನ ಇಟ್ಟು ಪರಾರಿಯಾದ ವ್ಯಕ್ತಿ. ಸಿಸಿಟಿವಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು.

1 Min read
Author : Sathish Kumar KH
| Updated : Jul 25 2025, 02:45 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಬೆಂಗಳೂರು (ಜು.25): ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.5 ಕೆಜಿ ಚಿನ್ನ ಪತ್ತೆಯಾಗಿರುವ ಘಟನೆ ಸಂಚಲನ ಮೂಡಿಸಿದೆ. ಕಸ್ಟಮ್ಸ್ ಅಧಿಕಾರಿಗಳ ಗಮನಕ್ಕೆ ಬೀಳದಂತೆ ಚಿನ್ನವನ್ನು ಸಾಗಿಸಲು ಸ್ಮಗ್ಲರ್ ನಡೆಸಿದ್ದ ವ್ಯಕ್ತಿಯು ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ವಿಮಾನದಲ್ಲಿ ಪ್ರಯಾಣಿಸಿದ್ದ ಭೂಪನೊಬ್ಬ, ತನ್ನ ಬಳಿ ಇದ್ದ 3.5 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆಂಬ ಭಯದಿಂದ ತನ್ನ ಟ್ರಾಲಿ ಬ್ಯಾಗ್‌ನಿಂದ ಸಹ ಪ್ರಯಾಣಿಕನ ಟ್ರಾಲಿ ಬ್ಯಾಗ್‌ಗೆ ಹಾಕಿದ್ದಾನೆ. ಬೇರೊಬ್ಬ ಪ್ರಯಾಣಿಕನ ಲಗೇಜ್ ಟ್ರಾಲಿಗೆ ಚಿನ್ನದ ಗಟ್ಟಿಗಳನ್ನು ಹಾಕಿದ ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.

Related Articles

Related image1
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ; ಐಟಿ ಇಲಾಖೆ ಮೂರು ದಿನಗಳ ವಿಚಾರಣೆಗೆ ಕೋರ್ಟ್ ಅನುಮತಿ
Related image2
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ಏರ್ಪೋರ್ಟ್‌ ಸಿಸಿಟೀವಿ ದೃಶ್ಯಾವಳಿ ಸಂಗ್ರಹಿಸಿಡಲು ಹೈಕೋರ್ಟ್ ಸೂಚನೆ
36
Image Credit : Asianet News

ಚಿನ್ನವನ್ನು ಇಟ್ಟಿದ್ದ ಟ್ರಾಲಿ ಬ್ಯಾಗ್ ತಳ್ಳಿಕೊಂಡು ಆಗಮಿಸುತ್ತಿದ್ದ ಕೋ-ಪ್ಯಾಸೆಂಜರ್, ಟ್ರಾಲಿಯಿಂದ ಯಾವುದೋ ಬ್ಯಾಗ್ ಜಾರಿ ಬಿದ್ದುದನ್ನು ಗಮನಿಸುತ್ತಲೇ ಅದರಲ್ಲಿ ತುಂಬಿದ ಚಿನ್ನದ ಬಿಸ್ಕೆಟ್‌ಗಳನ್ನು ಕಂಡು ಬೆಚ್ಚಿ ಬೀಳುತ್ತಾನೆ. ಕೂಡಲೇ ಆತ ಖುದ್ದಾಗಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾನೆ.

46
Image Credit : Asianet News

ಅಧಿಕಾರಿಗಳು ತಕ್ಷಣವೇ ಪರಿಶೀಲನೆ ನಡೆಸಿ, ಬರೋಬ್ಬರಿ 3.5 ಕೆಜಿ ಚಿನ್ನದ ಬಿಸ್ಕೆಟ್‌ಗಳು ಪತ್ತೆಹಚ್ಚಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಯಾರೋ ಪ್ಯಾಸೆಂಜರ್‌ಗೆ ತಾನೇ ಸೇರಿದದಂತೆ ತೋರಿಸಲು ಪ್ರಯತ್ನಿಸಿ ಇಟ್ಟು ಹೋಗಿದ್ದಾನೆ ಎಂದು ಹೇಳಿದ್ದಾರೆ.

56
Image Credit : Asianet News

ಈ ವಿಚಾರವಾಗಿ ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಯಿತೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ದುಬೈನಿಂದ ಬಂದಿದ್ದ ಪ್ರಯಾಣಿಕರ ವಿವರಗಳನ್ನು ಪರಿಶೀಲಿಸುತ್ತಿದ್ದು, ಚಿನ್ನ ಬಿಟ್ಟು ಎಸ್ಕೇಪ್ ಆದ ವ್ಯಕ್ತಿಯ ಕುರಿತು ಶಂಕೆ ವ್ಯಕ್ತವಾಗಿದ್ದು ತನಿಖೆ ಮುಂದುವರಿದಿದೆ.

66
Image Credit : Asianet News

ಈ ವೇಳೆ ಕಸ್ಟಮ್ಸ್ ಇಲಾಖೆ ಚಿನ್ನವನ್ನು ವಶಪಡಿಸಿಕೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ತೀವ್ರಗೊಳಿಸಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ಮಗ್ಲಿಂಗ್‌ಗಳ ವಿರುದ್ಧ ಈ ರೀತಿಯ ಕ್ರಮವು ಭದ್ರತೆಯ ದೃಷ್ಟಿಯಿಂದ ಪ್ರಶಂಸನೀಯವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಚಿನ್ನ ಕಳ್ಳಸಾಗಣೆ
ಬೆಂಗಳೂರು ವಿಮಾನ ನಿಲ್ದಾಣ

Latest Videos
Recommended Stories
Recommended image1
ಆದಾಯದಲ್ಲಿ ನೈಋತ್ಯ ರೈಲ್ವೆಗೆ ಗೋಲ್ಡನ್ ಆಗಸ್ಟ್: ₹805.70 ಕೋಟಿ ಮಾಸಿಕ ಆದಾಯ ಗಳಿಸಿ ಹೊಸ ದಾಖಲೆ!
Recommended image2
ಕನ್ನಡದಲ್ಲಿ ನಟಿಸಿದ್ದ ಈ ವ್ಯಕ್ತಿ, ಇಂದು ಹೈಕೋರ್ಟ್ ಜಡ್ಜ್! ಒಂದೇ ದಿನ 555 ಕೇಸ್ ವಿಚಾರಣೆ, ನ್ಯಾ.ನಾಗಪ್ರಸನ್ನ ದಾಖಲೆ
Recommended image3
ದಕ್ಷಿಣ ಭಾರತದಾದ್ಯಾಂತ ಇಡಿ ಬೃಹತ್ ಬೇಟೆ: ಕರ್ನಾಟಕ ಸೇರಿ 4 ರಾಜ್ಯಗಳ 30 ಕಡೆ ಏಕಕಾಲಕ್ಕೆ ದಾಳಿ, ಬೆಂಗಳೂರಲ್ಲೂ ರೇಡ್!
Related Stories
Recommended image1
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ; ಐಟಿ ಇಲಾಖೆ ಮೂರು ದಿನಗಳ ವಿಚಾರಣೆಗೆ ಕೋರ್ಟ್ ಅನುಮತಿ
Recommended image2
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ಏರ್ಪೋರ್ಟ್‌ ಸಿಸಿಟೀವಿ ದೃಶ್ಯಾವಳಿ ಸಂಗ್ರಹಿಸಿಡಲು ಹೈಕೋರ್ಟ್ ಸೂಚನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved