MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • News
  • State
  • ಬಸ್ ದರದ ಮಾಹಿತಿ ನೀಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯೋರಿಗೆ ಗುಡ್‌ನ್ಯೂಸ್ ನೀಡಿದ ಸಿಎಂ

ಬಸ್ ದರದ ಮಾಹಿತಿ ನೀಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯೋರಿಗೆ ಗುಡ್‌ನ್ಯೂಸ್ ನೀಡಿದ ಸಿಎಂ

ಸಂಪುಟ ಸಭೆಯಲ್ಲಿ ಹೊಸ ಬಸ್‌ಗಳ ಖರೀದಿ, 'ಪ್ರಜಾಸೇವೆ' ಎಂಬ ಹೊಸ ಇಲಾಖೆ ಸ್ಥಾಪನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಇದೇ ವೇಳೆ ಬಸ್ ದರ ಏರಿಕೆ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾರೆ.

2 Min read
Author : Mahmad Rafik
Published : Jun 20 2026, 02:22 PM IST
Share this Photo Gallery
  • FB
  • TW
  • Linkdin
  • Whatsapp
15
ಬಸ್ ದರ ಏರಿಕೆಗೆ ಪ್ರಸ್ತಾವನೆ
Image Credit : DK Shivakumar X Account

ಬಸ್ ದರ ಏರಿಕೆಗೆ ಪ್ರಸ್ತಾವನೆ

ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಸಾರಿಗೆ ಇಲಾಖೆಯ ಬಸ್ ದರ ಏರಿಕೆ ಕುರಿತು ಮಾಹಿತಿ ನೀಡಿದರು. ಬಸ್ ದರ ಏರಿಕೆ ಮಾಡುವಂತೆ ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಕೆ ಮಾಡಿವೆ. ಈ ಹಿನ್ನೆಲೆ ಬಸ್ ದರ ಏರಿಕೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬಸ್ ದರ ಏರಿಕೆಯಾಗುತ್ತಾ?
Image Credit : DK Shivakumar X Account

ಬಸ್ ದರ ಏರಿಕೆಯಾಗುತ್ತಾ?

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ತೈಲ ಖರೀದಿ ಮತ್ತು ಪೂರೈಕೆ ಬಗ್ಗೆ ವರದಿ ಕೇಳಿದ್ದೇನೆ. ಬಸ್ ದರದ ವಿಚಾರದಲ್ಲಿ ಜನಸಾಮಾನ್ಯರ ಬಗ್ಗೆ ಸಹ ಯೋಚನೆ ಮಾಡಬೇಕಿದೆ. ಪ್ರಧಾನ ಮಂತ್ರಿ ಗಳು ಸಹ ಬಸ್ ನಲ್ಲಿ ಓಡಾಡಲು ಹೇಳಿದ್ದಾರೆ. ತೈಲ ಬೆಲೆ ಮತ್ತು ಬಸ್ ದರದ ವಿಚಾರದಲ್ಲಿ ಮುಂದೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

Related Articles

Related image1
Bengaluru Crime: ಸಿಎಂ ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ರೌಡಿಗಳ ಬೇಟೆ ಶುರು; ಸುಲಿಗೆಕೋರನಿಗೆ ಗುಂಡೇಟು!
Related image2
ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಸ್ಥಗಿತದ ಸುದ್ದಿಗೆ ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
35
ಹೊಸ ಎಲೆಕ್ಟ್ರಿಕ್ ಬಸ್
Image Credit : DK Shivakumar X Account

ಹೊಸ ಎಲೆಕ್ಟ್ರಿಕ್ ಬಸ್

ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಎರಡನೇ ಕ್ಯಾಬಿನೆಟ್ ಸಭೆಯಲ್ಲಿ KSRTC ಮತ್ತು NWKRTCಗೆ ಒಟ್ಟು 620 ಹೊಸ ಬಿಎಸ್-VI ಬಸ್‌ಗಳನ್ನು ರೂ. 235.60 ಕೋಟಿ ವೆಚ್ಚದಲ್ಲಿ ಖರೀದಿಸಲು ಸಂಪುಟ ಅನುಮೋದನೆ ನೀಡಲಾಯ್ತು. ರಾಜ್ಯದ ಮೂರು ಸಾರಿಗೆ ನಿಗಮಗಳಲ್ಲಿ 10 ನಗರಗಳ 11 ಸ್ಥಳಗಳಲ್ಲಿ ಎಲೆಕ್ಟ್ರಿಕ್ ಬಸ್ ಘಟಕ ನಿರ್ಮಾಣಕ್ಕೆ ರೂ. 112.72 ಕೋಟಿ ವೆಚ್ಚದ ಯೋಜನೆ ಮತ್ತು ಸಂಡೂರು ತಾಲೂಕಿನಲ್ಲಿ 37 ಕೋಟಿ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.

45
ಪ್ರಜಾಸೇವೆ ಎಂಬ ಹೊಸ ಇಲಾಖೆ
Image Credit : CM DK Shivakumar x A/c

ಪ್ರಜಾಸೇವೆ ಎಂಬ ಹೊಸ ಇಲಾಖೆ

ಸಾರ್ವಜನಿಕ ಅಹವಾಲು ಪಡೆಯಲು ಒಂದು ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ. ಪ್ರಜಾಸೇವೆ ಅಂತ ಹೆಸರಿನಲ್ಲಿ ಸಚಿವಾಲಯ ತೆರೆಯಲಾಗಿದ್ದು, ಜನರ ಅಹವಾಲು ಪಡೆದು, ಸಮಸ್ಯೆ ಪರಿಹಾರಕ್ಕೆ ಈ ಇಲಾಖೆ ಕೆಲಸ ಮಾಡಲಾಗಿದೆ. ಈ ಸಚಿವಾಯಲಕ್ಕೆ ಪ್ರತ್ಯೇಕ ಸಚಿವರು ಇರಲಿದ್ದಾರೆ. ಎಲ್ಲಾ ಸಚಿವರು, ಸಿಎಂಗೆ ಕೊಟ್ಟ ಮನವಿಗಳು ಪ್ರಜಾಸೇವೆ ಇಲಾಖೆಗೆ ಬರಲಿವೆ. 224 ಕ್ಷೇತ್ರದಲ್ಲಿ ಪ್ರಜಾಸೇವೆ ಇಲಾಖೆ ವ್ಯಾಪ್ತಿಯಲ್ಲಿ ಪ್ರತಿ ವಾರ ಸಭೆ ಮಾಡಲು ತೀರ್ಮಾನಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: NEET UG 2026 re-exam: ನೀಟ್ ಮರು ಪರೀಕ್ಷೆಗೂ ಮುನ್ನವೇ NTA ಮತ್ತೆ ಎಡವಟ್ಟು! ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಎಕ್ಸಾಂ ಸೆಂಟರ್!

55
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸಿಹಿ ಸುದ್ದಿ
Image Credit : Asianet News

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸಿಹಿ ಸುದ್ದಿ

ಹಳೆ ಕಟ್ಟಡಗಳಿಗೆ ತಾತ್ಕಾಲಿಕ ವಿದ್ಯುತ್ ಸೇವೆ ಪಡೆದಿದ್ದರೆ, ಅವರಿಗೆ 15 ದಿನಗಳ ಅವಧಿಯಲ್ಲಿ ಶಾಶ್ವತ ವಿದ್ಯುತ್ ಸಂಪರ್ಕ ಕೊಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದ್ರೆ ಗ್ಯಾರಂಟಿ ಪರಿಷ್ಕರಣೆ ವಿಚಾರವಾಗಿ ಅಧಿಕೃತವಾಗಿ ಇಂದಿನ ಕ್ಯಾಬಿನೆಟ್ ನಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ತಿಳಿದು ಬಂದಿದೆ. ಇನ್ನು ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಭವನದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಮಾಡೆಲ್‌ ಪಾಲಿಸಿದ ರಾಷ್ಟ್ರ ರಾಜಧಾನಿ, Delhi-NCR ಮೂರು ಜೋನ್‌ ಆಗಿ ವಿಭಜನೆ, 4 ಹೊಸ ನಮೋ ನಗರ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಡಿ.ಕೆ. ಶಿವಕುಮಾರ್
ಕೆಎಸ್ಆರ್ಟಿಸಿ
ಕಾಂಗ್ರೆಸ್
ಕರ್ನಾಟಕ ಸರ್ಕಾರ

Latest Videos
Recommended Stories
Recommended image1
Karnataka Politics: ಡೆಲ್ಲಿಯಲ್ಲಿ ರಾಹುಲ್ 'ಫೈಟ್'; ಬೆಂಗಳೂರಲ್ಲಿ ಡಿಕೆಶಿ 'ಊಟ್-ಬೈಟ್'! ಅದಾನಿ ಭೇಟಿಗೆ ಬಿಜೆಪಿ ಛಾಟಿ!
Recommended image2
ಕೆಪಿಎಸ್‌ಸಿ ಹಗರಣ: ಇಡಿ ಅಧಿಕಾರಿಗಳು ಬರ್ತಿದ್ದಂತೆ ಮನೆಗೆ ಬೀಗ ಹಾಕಿ IAS ಜ್ಞಾನೇಂದ್ರ ಕುಮಾರ್ ಪರಾರಿ!
Recommended image3
'ಬೆಂಗಳೂರಿಗೆ 'ಗಾರ್ಡನ್ ಸಿಟಿ' ಹೆಸರು ಸುಮ್ನೆ ಬಂದಿಲ್ಲ..' ಪಾರ್ಕ್‌ನ 5% ಜಾಗ ಇತರೆ ಉದ್ದೇಶಗಳಿಗೆ ಬಳಕೆಗೆ ಸಂಸದ ಗರಂ
Related Stories
Recommended image1
Bengaluru Crime: ಸಿಎಂ ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ರೌಡಿಗಳ ಬೇಟೆ ಶುರು; ಸುಲಿಗೆಕೋರನಿಗೆ ಗುಂಡೇಟು!
Recommended image2
ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಸ್ಥಗಿತದ ಸುದ್ದಿಗೆ ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved