MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • Mavu Mela: ಬೆಂಗಳೂರಿನ ಕಬ್ಬನ್ ಪಾರ್ಕ್‌ ಮೇಳ; 2 ದಿನದಲ್ಲಿಯೇ 7 ಟನ್‌+ ಮಾವು ಮಾರಾಟ

Mavu Mela: ಬೆಂಗಳೂರಿನ ಕಬ್ಬನ್ ಪಾರ್ಕ್‌ ಮೇಳ; 2 ದಿನದಲ್ಲಿಯೇ 7 ಟನ್‌+ ಮಾವು ಮಾರಾಟ

ಮಾವು-ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಸಾಯನಿಕ ಮುಕ್ತ, ನೈಸರ್ಗಿಕವಾಗಿ ಮಾಗಿದ ಮಾವು ಮತ್ತು ಹಲಸನ್ನು ರೈತರಿಂದ ನೇರವಾಗಿ ಕಡಿಮೆ ದರದಲ್ಲಿ ಒದಗಿಸುತ್ತಿದ್ದು, ಮೊದಲ ಎರಡು ದಿನಗಳಲ್ಲಿ ಏಳು ಟನ್‌ಗೂ ಹೆಚ್ಚು ಮಾವು ಮಾರಾಟವಾಗಿದೆ.

1 Min read
Author : Kannadaprabha News
Published : May 10 2026, 09:00 AM IST
Share this Photo Gallery
  • FB
  • TW
  • Linkdin
  • Whatsapp
14
 ಮಾವು ಹಲಸು ಮೇಳ
Image Credit : Kannada Prabha

ಮಾವು- ಹಲಸು ಮೇಳ

ಕಬ್ಬನ್‌ ಉದ್ಯಾನದಲ್ಲಿ ನಡೆಯುತ್ತಿರುವ ಮಾವು- ಹಲಸು ಮೇಳಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೇವಲ ಎರಡನೇ ದಿನದಲ್ಲಿ ಏಳು ಟನ್‌ಗೂ ಹೆಚ್ಚು ಮಾವು ಮಾರಾಟವಾಗಿದೆ.

Add Asianetnews Kannada as a Preferred SourcegooglePreferred
24
ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದಿಂದ ಮಾವು ಮೇಳ ಆಯೋಜನೆ
Image Credit : Asianet News

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದಿಂದ ಮಾವು ಮೇಳ ಆಯೋಜನೆ

ಕಾರ್ಬೈಡ್‌ ಮುಕ್ತ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸುವುದು, ದಳ್ಳಾಳಿಗಳ ಹಾವಳಿ ತಡೆ ಹಾಗೂ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಕಬ್ಬನ್‌ ಉದ್ಯಾನದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಮಾವು ಮೇಳ ಆಯೋಜಿಸಿದ್ದು ಮೇ 10 ದಿನ ನಡೆಯಲಿದೆ.

Related Articles

Related image1
ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಕೋಲಾದ ವಿಶೇಷ ಕರಿ ಇಶಾಡ್ ಮಾವು, ರುಚಿಗೆ ಸಾಟಿಯೇ ಇಲ್ಲ
Related image2
ಮಾವು vs ಕಲ್ಲಂಗಡಿ: ಬೇಸಿಗೆಯ ಬಿಸಿಲಿಗೆ ನಿಮ್ಮ ದೇಹವನ್ನು ಹೆಚ್ಚು ತಂಪಾಗಿರಿಸುವ ಹಣ್ಣು ಯಾವ್ದು?
34
ಶುಕ್ರವಾರ 2.5 ಟನ್‌ ಹಾಗೂ ಶನಿವಾರ 5 ಟನ್‌
Image Credit : twitter

ಶುಕ್ರವಾರ 2.5 ಟನ್‌ ಹಾಗೂ ಶನಿವಾರ 5 ಟನ್‌

ಶುಕ್ರವಾರ 2.5 ಟನ್‌ ಹಾಗೂ ಶನಿವಾರ 5 ಟನ್‌ ಮಾವು ಮಾರಾಟವಾಗಿದೆ. ರಾಸಾಯನಿಕ ಮುಕ್ತ ಮಾವಿನ ವಿವಿಧ ತಳಿಯ ಹಣ್ಣುಗಳು, ಹಲಸು ಹೊರಗಿನ ದರಕ್ಕಿಂತ ಕಡಿಮೆ ದರದಲ್ಲಿ ಸಿಗುತ್ತಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ. ಎರಡು ದಿನಗಳಲ್ಲಿ 7 ಟನ್‌ಗಿಂತ ಹೆಚ್ಚು ಮಾರಾಟವಾಗಲು ಇದುವೇ ಕಾರಣ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವೇದಮೂರ್ತಿ ಕನ್ನಡಪ್ರಭಕ್ಕೆ ತಿಳಿಸಿದರು.

44
ಬಗೆ ಬಗೆಯ ಮಾವು
Image Credit : Asianet News

ಬಗೆ ಬಗೆಯ ಮಾವು

ಮೇಳದಲ್ಲಿ ಬಾದಾಮಿ/ಆಲ್ಫಾನ್ಸೊ, ರಸಪುರಿ, ಸೇಂದೂರ, ಮಲಗೋವ, ಮಲ್ಲಿಕಾ, ಬಂಗನಪಲ್ಲಿ, ದಶೇರಿ, ಕಾಲಪಾಡು, ಕೇಸರಿ, ನೀಲಂ, ತೋತಾಪುರಿ, ಇಮಾಮ್ ಪಸಂದ್‌ ಮುಂತಾದ ತಳಿಯ ಮಾವಿನ ತಳಿಗಳು ಲಭ್ಯ. ಇದರ ಜತೆಗೆ ಚಂದ್ರ ಹಲಸು, ನಾನಾ ಸ್ಥಳೀಯ ಹಲಸುಗಳು ಕಡಿಮೆ ದರದಲ್ಲಿ ಸಿಗುತ್ತಿವೆ. ಮುಖ್ಯವಾಗಿ ಯಾವುದೇ ರಾಸಾಯನಿಕ ಇಲ್ಲದೇ, ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಲಭ್ಯವಿದ್ದು, ತಾಜಾತನದಿಂದ ಕೂಡಿವೆ. ಬೆಂಗಳೂರಿನ ನಾಗರಿಕರು, ಕಬ್ಬನ್‌ ಉದ್ಯಾನಕ್ಕೆ ಭೇಟಿ ನೀಡಿ ರೈತರಿಂದ ನೇರವಾಗಿ ಮಾವು ಖರೀದಿಸಬಹುದು. ಆಸಕ್ತ ರೈತರು ಗ್ರಾಹಕರಿಗೆ ರಿಯಾಯಿತಿ ಕೂಡ ನೀಡಲಿದ್ದಾರೆ ಎಂದು ಮಾವು ಅಭಿವೃದ್ಧಿ ನಿಗಮ ತಿಳಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಮಾವು
ಬೆಂಗಳೂರು

Latest Videos
Recommended Stories
Recommended image1
ಪಂಚರಾಜ್ಯ ಚುನಾವಣಾ ಫಲಿತಾಂಶ ಬಳಿಕ ಕರ್ನಾಟಕ ಪ್ರಧಾನಿ ಮೋದಿ, ಆರು ತಿಂಗಳಲ್ಲಿ ಮೂರನೇ ಭೇಟಿ!
Recommended image2
ಸಚಿವ ಡಿ. ಸುಧಾಕರ್ ನಿಧನ; ಡಿಸಿಎಂ ಡಿಕೆ ಶಿವಕುಮಾರ ರಾಯಚೂರು ಪ್ರವಾಸ ದಿಢೀರ್ ರದ್ದು?
Recommended image3
Karnataka News Live: ಬೇರೊಬ್ಬರ ವರದಿಯನ್ನು ಮತ್ತ್ಯಾರಿಗೋ ನೀಡಿ ರೋಗಿಯ ಪತಿಯನ್ನೇ ನಿಂದಿಸಿದ ಸ್ಕ್ಯಾನಿಂಗ್‌ ಸೆಂಟರ್‌ ಸಿಬ್ಬಂದಿ
Related Stories
Recommended image1
ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಕೋಲಾದ ವಿಶೇಷ ಕರಿ ಇಶಾಡ್ ಮಾವು, ರುಚಿಗೆ ಸಾಟಿಯೇ ಇಲ್ಲ
Recommended image2
ಮಾವು vs ಕಲ್ಲಂಗಡಿ: ಬೇಸಿಗೆಯ ಬಿಸಿಲಿಗೆ ನಿಮ್ಮ ದೇಹವನ್ನು ಹೆಚ್ಚು ತಂಪಾಗಿರಿಸುವ ಹಣ್ಣು ಯಾವ್ದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved