MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • News
  • State
  • Photos: ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬೆಂಗಳೂರು; ಧರೆಗುರುಳಿದ 30 ಮರಗಳಡಿ ವಾಹನ ಜಖಂ, ಗೋಡೆ ಕುಸಿತಕ್ಕೆ 7 ಬಲಿ

Photos: ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬೆಂಗಳೂರು; ಧರೆಗುರುಳಿದ 30 ಮರಗಳಡಿ ವಾಹನ ಜಖಂ, ಗೋಡೆ ಕುಸಿತಕ್ಕೆ 7 ಬಲಿ

ಬೆಂಗಳೂರಿನಲ್ಲಿ ಸುರಿದ ಮೊದಲ ಆಲಿಕಲ್ಲು ಮಳೆಯು ಸಂಭ್ರಮದ ಬದಲು ಭೀಕರ ಅವಾಂತರಗಳನ್ನು ಸೃಷ್ಟಿಸಿದೆ. ಮರಗಳು ಮತ್ತು ಕಾಂಪೌಂಡ್ ಗೋಡೆಗಳು ಕುಸಿದು, ವಾಹನಗಳು ಜಖಂಗೊಂಡು, ಏಳು ಮಂದಿ ಮೃತಪಟ್ಟಿದ್ದಾರೆ. ರಸ್ತೆಗಳು ಜಲಾವೃತವಾಗಿ, ವಿಧಾನಸೌಧದ ಕಚೇರಿಗೂ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.

2 Min read
Author : Sathish Kumar KH
Published : Apr 29 2026, 08:59 PM IST
Share this Photo Gallery
  • FB
  • TW
  • Linkdin
  • Whatsapp
18
ಆಲಿಕಲ್ಲು ಮಳೆಗೆ ಕಾಶ್ಮೀರವಾದ ಬೆಂಗಳೂರು
Image Credit : Asianet News

ಆಲಿಕಲ್ಲು ಮಳೆಗೆ ಕಾಶ್ಮೀರವಾದ ಬೆಂಗಳೂರು

ಬೆಂಗಳೂರು (ಏ.29): ಬಿಸಿಲಿನ ತಾಪಕ್ಕೆ ಬಳಲಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣನ ಆಗಮನ ಸಂಭ್ರಮ ತರಬೇಕಿತ್ತು. ಆದರೆ, ಬುಧವಾರ ಸಂಜೆ ಸುರಿದ ಮೊದಲ ಮಳೆಯೇ ನಗರದಾದ್ಯಂತ ಭೀಕರ ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಆಲಿಕಲ್ಲು ಮಳೆಗೆ ಇಡೀ ಬೆಂಗಳೂರು ನಗರ ಕಾಶ್ಮೀರದಲ್ಲಿ ಸುರಿದ ಹಿಮದ ರಾಶಿಯಂತೆ ಬಿಳಿಯಾಗಿ ಹೋಗಿತ್ತು. ಇನ್ನು ಬಿರುಗಾಳಿಗೆ ಮರಗಳು ಧರೆಗುರುಳಿದ್ದು, ರಸ್ತೆಗಳು ಕೆರೆಯಂತಾಗಿವೆ. ಎಲ್ಲೆಲ್ಲಿ ಏನೇನು ಅನಾಹುತಗಳಾಗಿವೆ ಎಂಬುದನ್ನು ನೀವೇ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಮೈದಾನಗಳ ಮೇಲೆ ಆಲಿಕಲ್ಲಿನ ಬಿಳಿ ಹಾಸಿಗೆ!
Image Credit : Asianet News

ಮೈದಾನಗಳ ಮೇಲೆ ಆಲಿಕಲ್ಲಿನ ಬಿಳಿ ಹಾಸಿಗೆ!

ನಗರದಾದ್ಯಂತ ಆಲಿಕಲ್ಲು ಮಳೆಯ ಅಬ್ಬರ ಎಷ್ಟಿತ್ತೆಂದರೆ, ರಸ್ತೆಗಳು ಮತ್ತು ಕ್ರೀಡಾಂಗಣಗಳು ಹಿಮಪಾತವಾದಂತೆ ಕಂಡುಬಂದವು. ವಿಶೇಷವಾಗಿ ಕಂಠೀರವ ಕ್ರೀಡಾಂಗಣವು ಸಂಪೂರ್ಣವಾಗಿ ಆಲಿಕಲ್ಲಿನಿಂದ ಮುಚ್ಚಿಹೋಗಿದ್ದು, ಬಿಳಿ ಹಾಸಿಗೆ ಹಾಸಿದಂತೆ ಕಾಣುತ್ತಿತ್ತು. ಇದನ್ನು ಕಂಡು ಜನ ಒಂದೆಡೆ ಸಂಭ್ರಮಿಸಿದರೆ, ಮಳೆಯಿಂದಾದ ಹಾನಿ ಕಂಡು ಬೆಚ್ಚಿಬಿದ್ದಿದ್ದಾರೆ.

Related Articles

Related image1
ಬೆಂಗಳೂರು ಮಹಾಮಳೆಗೆ 7 ಬಲಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಭೀಕರ ದುರಂತ; ಮೂವರು ಪುಟ್ಟ ಮಕ್ಕಳೂ ಸಾವು!
Related image2
ಆಲಿಕಲ್ಲು ಮಳೆಗೆ ಬೆಂಗಳೂರು ಅಸ್ತವ್ಯಸ್ತ: ದರೆಗುರುಳಿದ ಮರ, ವಿವಿಧೆಡೆ ಜಲಾವೃತ; ರಾಜ್ಯದಲ್ಲಿ ಮುಂದಿನ 7 ದಿನವೂ ಮಳೆ!
38
ಮರಗಳು ಧರೆಗೆ: ವಾಹನಗಳು ಜಖಂ
Image Credit : Asianet News

ಮರಗಳು ಧರೆಗೆ: ವಾಹನಗಳು ಜಖಂ

ಶಿವಾನಂದ ಸರ್ಕಲ್ ಬಳಿಯ ಕ್ರೆಸೆಂಟ್ ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದ ಪರಿಣಾಮ ಒಂದು ಕಾರು, ಮೂರು ಬೈಕ್ ಹಾಗೂ ಒಂದು ಟ್ರಾವೆಲ್ಸ್ ಟಿಟಿ ವಾಹನ ಸಂಪೂರ್ಣ ಜಖಂಗೊಂಡಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಜಯನಗರದಲ್ಲಿಯೂ ಸಾಲು ಸಾಲು ಬೈಕ್‌ಗಳು ಮತ್ತು ಬಸ್ ಮೇಲೆ ಮರ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

48
ಪ್ರಸನ್ನ ಥಿಯೇಟರ್ ಬಳಿ ಕಟೌಟ್ ಕುಸಿತ
Image Credit : Asianet News

ಪ್ರಸನ್ನ ಥಿಯೇಟರ್ ಬಳಿ ಕಟೌಟ್ ಕುಸಿತ

ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಮುಂಭಾಗದಲ್ಲಿದ್ದ ಬೃಹತ್ ಕಟೌಟ್ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.ಇದನ್ನು ತೆರವುಗೊಳಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡುವಂತಾಗಿತ್ತು.

58
ವಿಧಾನಸೌಧದ ಒಳಗೂ ನುಗ್ಗಿದ ಮಳೆ ನೀರು!
Image Credit : Asianet News

ವಿಧಾನಸೌಧದ ಒಳಗೂ ನುಗ್ಗಿದ ಮಳೆ ನೀರು!

ನಗರದ ರಸ್ತೆಗಳಷ್ಟೇ ಅಲ್ಲದೆ, ಆಡಳಿತ ಕೇಂದ್ರ ವಿಧಾನಸೌಧವೂ ಮಳೆಯಿಂದ ತಪ್ಪಿಸಿಕೊಂಡಿಲ್ಲ. ವಿಧಾನಸೌಧದಲ್ಲಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಆಪ್ತ ಶಾಖೆಯ ಕಚೇರಿಗೆ ನೀರು ನುಗ್ಗಿದೆ. ಕಚೇರಿಯಲ್ಲಿದ್ದ ಪ್ರಮುಖ ಫೈಲ್ಗಳು, ಕಂಪ್ಯೂಟರ್‌ಗಳು ಮತ್ತು ಟೇಬಲ್‌ಗಳು ಮಳೆ ನೀರಿನಲ್ಲಿ ತೇಲುತ್ತಿರುವ ದೃಶ್ಯಗಳು ಕಂಡುಬಂದವು. ಇದು ನಗರದ ಒಳಚರಂಡಿ ವ್ಯವಸ್ಥೆಯ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಮತ್ತೊಂದೆಡೆ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಬುಕ್ ವಾರ್ಮ್ ಪುಸ್ತಕ ಮಳಿಗೆಯೊಳಗೆ ಮಳೆ ನೀರು ನುಗ್ಗಿದ್ದು 5000 ಕ್ಕೂ ಅಧಿಕ ಬೆಲೆಬಾಳುವ ಪುಸ್ತಕಗಳು ನೀರಿನಲ್ಲಿ ಒದ್ದೆಯಾಗಿ ಹಾಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

68
ಜಲಾವೃತವಾದ ರಸ್ತೆಗಳು – ಟ್ರಾಫಿಕ್ ಜಾಮ್
Image Credit : Asianet News

ಜಲಾವೃತವಾದ ರಸ್ತೆಗಳು – ಟ್ರಾಫಿಕ್ ಜಾಮ್

ಹೆಚ್.ಎಸ್.ಆರ್ ಲೇಔಟ್, ಸರ್ಜಾಪುರ ರಸ್ತೆ ಮತ್ತು ಶಾಂತಿನಗರದ ಕಾಮರಾಜ ರಸ್ತೆಯಲ್ಲಿ ಮಳೆ ನೀರು ಸೊಂಟದ ಮಟ್ಟಕ್ಕೆ ನಿಂತಿತ್ತು. ಆರ್ ಜೆ ಟೆಕ್ ಪಾರ್ಕ್ ಬಳಿ ದ್ವಿಚಕ್ರ ವಾಹನಗಳು ಅರ್ಧ ಮುಳುಗಡೆಯಾಗಿದ್ದವು. ಶಾಂತಿನಗರದಲ್ಲಿ ಕಾರೊಂದು ಮಳೆ ನೀರಿನ ನಡುವೆಯೇ ಲಾಕ್ ಆದಾಗ ಪ್ರಯಾಣಿಕರು ತಕ್ಷಣ ಇಳಿದು ಪ್ರಾಣ ಉಳಿಸಿಕೊಂಡರು. ಕಾರ್ಪೊರೇಷನ್, ಮೆಜೆಸ್ಟಿಕ್, ಹೆಬ್ಬಾಳ ಮತ್ತು ಶಾಂತಿನಗರದ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಂಡಿದ್ದರು.

78
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತಕ್ಕೆ 7 ಬಲಿ
Image Credit : Asianet News

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತಕ್ಕೆ 7 ಬಲಿ

ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಮಳೆಯ ಆರ್ಭಟಕ್ಕೆ ಕುಸಿದಿದೆ. ಆದರೆ, ಕಾಂಪೌಂಡ್‌ಗೆ ಹೊಂದಿಕೊಂಡಂತೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರ ಮೇಲೆ ಗೋಡೆ ಕುಸಿದು ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 7 ಜನರು ಮೃತಪಟ್ಟಿದ್ದಾರೆ.

88
ಬಿನ್ನಿಮಿಲ್ ಕಾಂಪೌಂಡ್ ಕುಸಿತ
Image Credit : Asianet News

ಬಿನ್ನಿಮಿಲ್ ಕಾಂಪೌಂಡ್ ಕುಸಿತ

ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರದಲ್ಲೇ ಇರುವ ಗುಡ್‌ಶೆಡ್ ರಸ್ತೆಯಿಂದ ಬಿನ್ನಿಪೇಟೆ ಸಂಪರ್ಕಿಸುವ ರಸ್ತೆಯ ಬಳಿಯಿರುವ ಬಿನ್ನಿಮಿಲ್‌ನ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮಳೆ ಬರುವ ವೇಳೆ ಜನರು ಸಂಚಾರ ಮಾಡದ ಕಾರಣ ಯಾವುದೇ ಜೀವಹಾನಿ ಆಗಿಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬೆಂಗಳೂರು
ಮಳೆ
ಕರ್ನಾಟಕ ಮಳೆ
ಹವಾಮಾನ ಮುನ್ಸೂಚನೆ

Latest Videos
Recommended Stories
Recommended image1
ಆದಾಯದಲ್ಲಿ ನೈಋತ್ಯ ರೈಲ್ವೆಗೆ ಗೋಲ್ಡನ್ ಆಗಸ್ಟ್: ₹805.70 ಕೋಟಿ ಮಾಸಿಕ ಆದಾಯ ಗಳಿಸಿ ಹೊಸ ದಾಖಲೆ!
Recommended image2
ಕನ್ನಡದಲ್ಲಿ ನಟಿಸಿದ್ದ ಈ ವ್ಯಕ್ತಿ, ಇಂದು ಹೈಕೋರ್ಟ್ ಜಡ್ಜ್! ಒಂದೇ ದಿನ 555 ಕೇಸ್ ವಿಚಾರಣೆ, ನ್ಯಾ.ನಾಗಪ್ರಸನ್ನ ದಾಖಲೆ
Recommended image3
ದಕ್ಷಿಣ ಭಾರತದಾದ್ಯಾಂತ ಇಡಿ ಬೃಹತ್ ಬೇಟೆ: ಕರ್ನಾಟಕ ಸೇರಿ 4 ರಾಜ್ಯಗಳ 30 ಕಡೆ ಏಕಕಾಲಕ್ಕೆ ದಾಳಿ, ಬೆಂಗಳೂರಲ್ಲೂ ರೇಡ್!
Related Stories
Recommended image1
ಬೆಂಗಳೂರು ಮಹಾಮಳೆಗೆ 7 ಬಲಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಭೀಕರ ದುರಂತ; ಮೂವರು ಪುಟ್ಟ ಮಕ್ಕಳೂ ಸಾವು!
Recommended image2
ಆಲಿಕಲ್ಲು ಮಳೆಗೆ ಬೆಂಗಳೂರು ಅಸ್ತವ್ಯಸ್ತ: ದರೆಗುರುಳಿದ ಮರ, ವಿವಿಧೆಡೆ ಜಲಾವೃತ; ರಾಜ್ಯದಲ್ಲಿ ಮುಂದಿನ 7 ದಿನವೂ ಮಳೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved