ಬೆಳ್ಳಂಬೆಳಗ್ಗೆ ದೇವಸಮುದ್ರ ಗ್ರಾಮಕ್ಕೆ ನುಗ್ಗಿದ ಕರಡಿಗಳು! ಬೆಚ್ಚಿಬಿದ್ದ ಗ್ರಾಮಸ್ಥರು!
ಬೆಳ್ಳಂಬೆಳಿಗ್ಗೆ ಗ್ರಾಮಕ್ಕೆ ಭೇಟಿ ಕೊಟ್ಟು ಆತಂಕವನ್ನು ಸೃಷ್ಟಿ ಮಾಡಿದ ಜಾಂಬುವಂತ. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಕರಡಿಗಳು ಗ್ರಾಮಕ್ಕೆ ಲಗ್ಗೆ ಇಡೋ ಮೂಲಕ ಅವಾಂತರವನ್ನು ಸೃಷ್ಠಿ ಮಾಡಿವೆ. ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮಕ್ಕೆ ಮೂರು ಕರಡಿಗಳ ಬೆಳಿಗ್ಗೆಯೇ ಬಂದಿವೆ.

ಮೊದಲಿಗೆ ಕರಡಿಯನ್ನು ನೋಡಿದ ನಾಯಿಗಳು ಜೋರಾಗಿ ಬೋಗೋಳೊಕೆ ಪ್ರಾರಂಭಿಸಿವೆ. ಇದನ್ನು ಗಮನಿಸಿದ ಜನರು ಕರಡಿಗಳನ್ನು ನೋಡಿ ಗಾಬರಿಯಾಗಿದ್ದಾರೆ. ಜನರೆಲ್ಲ ಸೇರಿ ಕೂಗಾಟ ಮಾಡಿದ ಹಿನ್ನಲೆ ಮೂರು ಕರಡಿಗಳು ದಿಕ್ಕಾಪಾಲಾಗಿವೆ. ಒಂದೊಂದು ದಿಕ್ಕಿಗೆ ಒಂದೊಂದು ಕರಡಿಗಳು ಓಡಿ ಹೋಗಿವೆ. ಒಂದು ಕರಡಿ ಮಾತ್ರ ಗ್ರಾಮದೊಳಗೆ ನುಗ್ಗಿ ಹುಲ್ಲಿನ ಬಣವೆಯ ಬಳಿ ಅವಿತುಕೊಂಡಿದೆ ಎನ್ನಲಾಗ್ತಿದೆ.
ಅರಣ್ಯ ಇಲಾಖೆ ಕರಡಿ ಸೆರೆಗೆ ಅಗಮಿಸಿದ್ದು, ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ. ದರೋಜಿ ಬಳಿ ಕರಡಿ ಧಾಮ ಇರೋ ಹಿನ್ನಲೆ ಅಗಾಗ ಹೊಲ ಗದ್ದೆಗಳ ಬಳಿ ಈ ರೀತಿಯಲ್ಲಿ ಕರಡಿ ಕಾಣಿಸಿಕೊಳ್ಳುವದು ಸಹಜ ಆದರೆ, ಸಾಮಾನ್ಯವಾಗಿ ಗ್ರಾಮಕ್ಕೆ ಬರುವುದಿಲ್ಲ. ಬಂದರೂ ಗ್ರಾಮದ ಸನಿಹದಲ್ಲೇ ರಾತ್ರಿಯ ವೇಳೆ ಓಡಾಡಿ ಹೋಗುತ್ತವೆ. ಅದರೆ ಈ ಬಾರಿ ನೇರವಾಗಿ ಗ್ರಾಮದೊಳಗೆ ಬಂದು ಕೆಲಕಾಲ ಆತಂಕ ಸೃಷ್ಟಿ ಮಾಡಿದೆ.
ಕರಡಿಗಳು ದಿಢೀರನೆ ಗ್ರಾಮಕ್ಕೆ ನುಗ್ಗಿದ್ದರಿಂದ ಗ್ರಾಮಸ್ಥರು ಗಾಬರಿಯಾಗಿದ್ದರು. ಬೆಳಬೆಳಗ್ಗೆ ಯಾರ ಮೇಲೆ ಮೇಲೆ ದಾಳಿ ಮಾಡುತ್ತವೋ ಎಂಬ ಭಯದಲ್ಲಿದ್ದರು. ಕರಡಿ ಗ್ರಾಮಕ್ಕೆ ನುಗ್ಗಿದ ವಿಷಯ ತಿಳಿದು ಮಕ್ಕಳು ಮರಿಗಳು ಮನೆಯಲ್ಲಿ ಅವಿತುಕೊಂಡರು. ಗ್ರಾಮಸ್ಥರು ಸೇರಿ ಕೂಗಾಟ ಮಾಡಿದ್ದರಿಂದ ಕರಡಿಗಳು ದಿಕ್ಕಪಾಲಾಗಿ ಓಡಿ ತಪ್ಪಿಸಿಕೊಂಡಿವೆ. ಘಟನೆ ವಿಡಿಯೋ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ