MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಸ್ಥಳಾಂತರ, ಶಿಫ್ಟ್ ಆಗೋವರೆಗೆ ವರ್ಷಕ್ಕೆ ₹39 ಕೋಟಿ ಬಾಡಿಗೆ! ತೆರವಾದ ಜಾಗದಲ್ಲಿ ಮುಂದೇನು?

ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಸ್ಥಳಾಂತರ, ಶಿಫ್ಟ್ ಆಗೋವರೆಗೆ ವರ್ಷಕ್ಕೆ ₹39 ಕೋಟಿ ಬಾಡಿಗೆ! ತೆರವಾದ ಜಾಗದಲ್ಲಿ ಮುಂದೇನು?

ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯಂತೆ, 110.20 ಎಕರೆ ಜಮೀನನ್ನು 29 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ.

2 Min read
Author : Gowthami K
Published : Feb 14 2026, 07:15 PM IST
Share this Photo Gallery
  • FB
  • TW
  • Linkdin
  • Whatsapp
17
ಕುಣಿಗಲ್ ಸ್ಟಡ್ ಫಾರಂ ಪ್ರದೇಶಕ್ಕೆ ಸ್ಥಳಾಂತರಿಸುವ ಮಹತ್ವದ ನಿರ್ಧಾರ
Image Credit : x

ಕುಣಿಗಲ್ ಸ್ಟಡ್ ಫಾರಂ ಪ್ರದೇಶಕ್ಕೆ ಸ್ಥಳಾಂತರಿಸುವ ಮಹತ್ವದ ನಿರ್ಧಾರ

ಬೆಂಗಳೂರು: ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ (ರೇಸ್‌ಕೋರ್ಸ್‌) ಅನ್ನು ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿರುವ ಕುಣಿಗಲ್ ಸ್ಟಡ್ ಫಾರಂ ಪ್ರದೇಶಕ್ಕೆ ಸ್ಥಳಾಂತರಿಸುವ ಮಹತ್ವದ ನಿರ್ಧಾರವನ್ನು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದಂತೆ, ಕುಣಿಗಲ್ ಸ್ಟಡ್ ಫಾರಂನಲ್ಲಿರುವ 101.24 ಎಕರೆ ಭೂಮಿ ಹಾಗೂ ಬೆಂಗಳೂರು–ಹಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹೆಚ್ಚುವರಿ 8.36 ಎಕರೆ ಜಮೀನು ಸೇರಿ ಒಟ್ಟು 110.20 ಎಕರೆ ಪ್ರದೇಶವನ್ನು ಬೆಂಗಳೂರು ಟರ್ಫ್ ಕ್ಲಬ್‌ಗೆ 29 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈ ಜಮೀನಿಗೆ ಮಾರ್ಗಸೂಚಿ ದರದ ಶೇ.2.5 ರಷ್ಟು ವಾರ್ಷಿಕ ಬಾಡಿಗೆ ವಿಧಿಸಲಾಗುತ್ತದೆ.

27
ಎರಡು ವರ್ಷಗಳಲ್ಲಿ ಸ್ಥಳಾಂತರಕ್ಕೆ ಟರ್ಫ್ ಕ್ಲಬ್ ಒಪ್ಪಿಗೆ
Image Credit : x

ಎರಡು ವರ್ಷಗಳಲ್ಲಿ ಸ್ಥಳಾಂತರಕ್ಕೆ ಟರ್ಫ್ ಕ್ಲಬ್ ಒಪ್ಪಿಗೆ

ಬೆಂಗಳೂರು ಟರ್ಫ್ ಕ್ಲಬ್ ಮಂಡಳಿಯು, ಸಂಪುಟದ ತೀರ್ಮಾನದ ಹಿನ್ನೆಲೆಯಲ್ಲಿ, ಎರಡು ವರ್ಷಗಳೊಳಗೆ ಸಂಪೂರ್ಣವಾಗಿ ಕುಣಿಗಲ್‌ಗೆ ಸ್ಥಳಾಂತರಗೊಳ್ಳಲು ಸಮ್ಮತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಕುಣಿಗಲ್‌ನಲ್ಲಿ ರೇಸ್‌ಕೋರ್ಸ್‌ ಚಟುವಟಿಕೆಗಳಿಗೆ ಅಗತ್ಯವಾದ ಬಹುತೇಕ ಮೂಲಸೌಕರ್ಯಗಳು ಸಿದ್ಧವಾಗಿವೆ.

Related Articles

Related image1
ರೇಸ್‌ ಕೋರ್ಸ್‌ನಲ್ಲಿ ರೌಡಿಗಳಿಂದ ಬೆಟ್ಟಿಂಗ್‌ ದಂಧೆ, ಸಿಸಿಬಿ ದಾಳಿಗೆ ಪೊಲೀಸ್‌ ಆಯುಕ್ತರ ಪ್ರತಿಕ್ರಿಯೆ
Related image2
ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕುದುರೆ ರೇಸ್ ಆಯೋಜನೆಗೆ ತಡೆಯೊಡ್ಡಿದ ಹೈಕೋರ್ಟ್!
37
1923ರ ಇತಿಹಾಸದ ರೇಸ್‌ಕೋರ್ಸ್‌
Image Credit : x

1923ರ ಇತಿಹಾಸದ ರೇಸ್‌ಕೋರ್ಸ್‌

ಬೆಂಗಳೂರು ರೇಸ್‌ಕೋರ್ಸ್‌ಗೆ ಶತಮಾನಕ್ಕೂ ಅಧಿಕ ಇತಿಹಾಸವಿದ್ದು, 1923ರ ಸೆಪ್ಟೆಂಬರ್ 9ರಂದು ಮೈಸೂರು ಮಹಾರಾಜರು ಕುದುರೆ ಓಟದ ಸ್ಪರ್ಧೆ ಹಾಗೂ ತರಬೇತಿಗಾಗಿ 83.14 ಎಕರೆ ಜಮೀನನ್ನು ಮೀಸಲಿಟ್ಟಿದ್ದರು. ನಂತರ ಈ ಜಾಗವು ಲೋಕೋಪಯೋಗಿ ಇಲಾಖೆ (PWD) ವ್ಯಾಪ್ತಿಗೆ ಬಂದಿತ್ತು. ರೇಸ್‌ಕೋರ್ಸ್‌ ಸ್ಥಳಾಂತರವಾದ ಬಳಿಕ, ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಈ ಅಮೂಲ್ಯ ಜಾಗವನ್ನು ಹಸಿರು ಪ್ರದೇಶ (Green Zone)ವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

47
ಹೆಚ್ಚುವರಿ ಬಾಡಿಗೆ ಸಂಗ್ರಹಕ್ಕೆ ಸಂಪುಟ ನಿರ್ಧಾರ
Image Credit : x

ಹೆಚ್ಚುವರಿ ಬಾಡಿಗೆ ಸಂಗ್ರಹಕ್ಕೆ ಸಂಪುಟ ನಿರ್ಧಾರ

ಬೆಂಗಳೂರು ಟರ್ಫ್ ಕ್ಲಬ್‌ಗೆ ನೀಡಲಾಗಿದ್ದ 83.14 ಎಕರೆ ಜಮೀನಿಗೆ ಸಂಬಂಧಿಸಿದಂತೆ 2010ರ ಜನವರಿ 1ರಿಂದ ಬಾಡಿಗೆ ದರ ಪರಿಷ್ಕರಣೆ ಆಗಿರಲಿಲ್ಲ ಎಂಬುದನ್ನು ಆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, 2010ರಿಂದ ಅನ್ವಯವಾಗುವಂತೆ ಆಯಾ ಸಾಲಿನ ಒಟ್ಟು ಆದಾಯದ ಶೇ.2 ರಷ್ಟು ಮೊತ್ತವನ್ನು ಬಾಡಿಗೆಯಾಗಿ ವಸೂಲಿ ಮಾಡಲು ಸಂಪುಟ ತೀರ್ಮಾನಿಸಿದೆ.

57
ಸುಮಾರು ₹39.45 ಕೋಟಿ ಬಾಡಿಗೆ
Image Credit : x

ಸುಮಾರು ₹39.45 ಕೋಟಿ ಬಾಡಿಗೆ

2009ರವರೆಗೆ ಬೆಂಗಳೂರು ಟರ್ಫ್ ಕ್ಲಬ್ ವರ್ಷಕ್ಕೆ ಕೇವಲ ₹25.94 ಲಕ್ಷ ಮಾತ್ರ ಬಾಡಿಗೆ ಪಾವತಿಸುತ್ತಿತ್ತು. ನಂತರವೂ ಯಾವುದೇ ಪರಿಷ್ಕರಣೆ ಇಲ್ಲದೆ ಅದೇ ಮೊತ್ತವನ್ನು ಪಾವತಿಸಲಾಗುತ್ತಿದ್ದು, ಇದರಿಂದ ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆಗೆ ಭಾರೀ ಆರ್ಥಿಕ ನಷ್ಟ ಉಂಟಾಗಿತ್ತು. ಸಂಪುಟದ ಲೆಕ್ಕಾಚಾರದ ಪ್ರಕಾರ, ಆದಾಯದ ಶೇ.2 ರಷ್ಟು ಬಾಡಿಗೆ ವಿಧಿಸಿದ್ದರೆ ವಾರ್ಷಿಕ ಸುಮಾರು ₹39.45 ಕೋಟಿ ಬಾಡಿಗೆ ಪಾವತಿಸಬೇಕಾಗಿತ್ತು. ಹೀಗಾಗಿ ಹಿಂದಿನ ಸಾಲುಗಳ ಆದಾಯವನ್ನು ಆಧರಿಸಿ ಬಾಕಿ ಬಾಡಿಗೆ ಸಂಗ್ರಹಿಸಲು ಸರ್ಕಾರ ತೀರ್ಮಾನಿಸಿದೆ.

67
ಸ್ಥಳಾಂತರದ ಹಿಂದಿನ ಕಾರಣವೇನು?
Image Credit : x

ಸ್ಥಳಾಂತರದ ಹಿಂದಿನ ಕಾರಣವೇನು?

ಬೆಂಗಳೂರು ಟರ್ಫ್ ಕ್ಲಬ್ ನಗರ ಮಧ್ಯಭಾಗದಲ್ಲಿರುವುದರಿಂದ, ವಿಶೇಷವಾಗಿ ರೇಸ್ ದಿನಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ. ಇದಕ್ಕೆ ಪರ್ಯಾಯವಾಗಿ, ಕುಣಿಗಲ್‌ನಲ್ಲಿ 1992ರಿಂದಲೇ ಖಾಸಗಿ ಸಂಸ್ಥೆಯೊಂದು “ಕುಣಿಗಲ್ ಸ್ಟಡ್” ಹೆಸರಿನಲ್ಲಿ ರೇಸ್‌ಕೋರ್ಸ್‌ ನಡೆಸುತ್ತಿದ್ದು, ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳು ಈಗಾಗಲೇ ಲಭ್ಯವಿವೆ. ಅಲ್ಲದೆ, ಕುಣಿಗಲ್ ಪ್ರದೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೂ ಇಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಬೆಂಗಳೂರು ರೇಸ್‌ಕೋರ್ಸ್‌ನ್ನು ಕುಣಿಗಲ್‌ಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

77
ಕುಣಿಗಲ್‌ನಲ್ಲಿ ರೇಸ್‌ ಕೋರ್ಸ್‌ ಆರಂಭಕ್ಕೆ ರಂಗನಾಥ ಸ್ವಾಗತ
Image Credit : x

ಕುಣಿಗಲ್‌ನಲ್ಲಿ ರೇಸ್‌ ಕೋರ್ಸ್‌ ಆರಂಭಕ್ಕೆ ರಂಗನಾಥ ಸ್ವಾಗತ

ಕುಣಿಗಲ್: ಪಟ್ಟಣದ ಸ್ಟಡ್ ಫಾರಂ ಜಾಗದಲ್ಲಿ ಬೆಂಗಳೂರಿನ ರೇಸ್ ಕೋರ್ಸ್ ಪ್ರಾರಂಭಿಸುವ ಕುರಿತು ಪ್ರತಿಕ್ರಿಯೆ ನೀಡಿದ ಕುಣಿಗಲ್ ಶಾಸಕ ಡಾ. ರಂಗನಾಥ್ ರೇಸ್ ಕೋರ್ಸ್ ನಿಂದ ಸ್ಥಳೀಯ ಅಭಿವೃದ್ಧಿಗಳು ಆಗಲಿದ್ದು ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ. ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಇತಿಹಾಸ ಪ್ರಸಿದ್ಧ ಪಾರಂಪರಿಕ ಕುದುರೆಗಳ ತಾಣವಾದ 420 ಎಕರೆ ಪ್ರದೇಶದಲ್ಲಿರುವ ಈ ಜಾಗದ ಬಗ್ಗೆ ಸಾಕಷ್ಟು ಕುತೂಹಲವದೆ. ಇಲ್ಲಿನ ಕುದುರೆಗಳನ್ನು ಬೀಜದ ಕುದುರೆ ಎಂದು ಸಹ ಕರೆಯಲಾಗುತ್ತದೆ. ಮತ್ತು ಈ ಸ್ಥಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ತಾಣವಾಗಿದೆ. 111 ಎಕ್ರೆ ಪ್ರದೇಶದಲ್ಲಿ 250 ಕುದುರೆಗಳನ್ನು ತಳಿ ಸಂವರ್ಧನೆಗಾಗಿ ಬಳಸಲಾಗುತ್ತಿದ್ದು ನೂರಾರು ಮಂದಿ ಕಾರ್ಮಿಕರು ಪ್ರತಿದಿನ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಯೋಜನೆಯಿಂದ ವಾರ್ಷಿಕ 500 ಕೋಟಿಗಿಂತ ಹೆಚ್ಚು ಆದಾಯ ಬರಲಿದ್ದು ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗಲಿದೆ. ಈ ಯೋಜನೆಯಿಂದ ಕೆಲವರಿಗೆ ತೊಂದರೆ ಆಗಬಹುದು ಅಂತಹ ಸಮಸ್ಯೆಗಳನ್ನು ಬಗೆಹರಿಸೋಣ ಎಂದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ಕುದುರೆ
ಸುದ್ದಿ
ಕರ್ನಾಟಕ ಸುದ್ದಿ
ತುಮಕೂರು

Latest Videos
Recommended Stories
Recommended image1
ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಕನ್ನಡಿಗ ನಿಗೂಢ ಕಣ್ಮರೆ, ಪಾರ್ಕ್ ಬಳಿ ಕೊನೆಯದಾಗಿ ಕಾಣಿಸಿಕೊಂಡಾತ ಎಲ್ಲಿ ಹೋದ?
Recommended image2
Vijayapur Election row: ಸುಪ್ರೀಂ ಅಂಗಳದಲ್ಲೂ ಯತ್ನಾಳ್‌ಗೆ ಜಯ; ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಮೀದ್ ಮುಶ್ರೀಫ್‌ಗೆ ಮುಖಭಂಗ
Recommended image3
ಮಾ.1ರಿಂದ ಸೇವೆ ಬಂದ್‌ ಸರ್ಕಾರಿ ವೈದ್ಯರಿಂದ ಎಚ್ಚರಿಕೆ
Related Stories
Recommended image1
ರೇಸ್‌ ಕೋರ್ಸ್‌ನಲ್ಲಿ ರೌಡಿಗಳಿಂದ ಬೆಟ್ಟಿಂಗ್‌ ದಂಧೆ, ಸಿಸಿಬಿ ದಾಳಿಗೆ ಪೊಲೀಸ್‌ ಆಯುಕ್ತರ ಪ್ರತಿಕ್ರಿಯೆ
Recommended image2
ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕುದುರೆ ರೇಸ್ ಆಯೋಜನೆಗೆ ತಡೆಯೊಡ್ಡಿದ ಹೈಕೋರ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved