ಮಡಿಕೇರಿ ರಾಜಾಸೀಟಿನಲ್ಲಿ ವರ್ಷದ ಕೊನೆ ಸೂರ್ಯಾಸ್ತ ವೀಕ್ಷಿಸಿದ ಸಾವಿರಾರು ಪ್ರವಾಸಿಗರು!
ಎಲ್ಲೆಡೆ ಪಾರ್ಟಿ, ಪಬ್ಬು ಮೋಜು ಮಸ್ತಿ ಎಂದು ಎಂಜಾಯ್ ಮಾಡಿಕೊಂಡು 2024 ಕ್ಕೆ ಗುಡ್ ಬೈ ಹೇಳಿ 2025 ನ್ನು ಸ್ವಾಗತಿಸಿ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯ ರಾಜಾಸೀಟಿನಲ್ಲಿ 2024 ರ ಕೊನೆಯ ಸೂರ್ಯಾಸ್ತವನ್ನು ವೀಕ್ಷಿಸಿ ಸಂಭ್ರಮಿಸಿದರು.
ವರ್ಷದ ಕೊನೆ ಸೂರ್ಯಾಸ್ತ ವೀಕ್ಷಣೆ
ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಂಜಿನ ನಗರಿ ಮಡಿಕೇರಿ ರಾಜಾಸೀಟಿನ ವೀವ್ ಪಾಯಿಂಟಿನಲ್ಲಿ ಕುಳಿತು ಪ್ರಕೃತಿಯ ಮಡಿನಲ್ಲಿ ಸಾಲು, ಸಾಲು ಬೆಟ್ಟಗಳ ನಡುವೆ ಕೆಮ್ಮುಗಿಲ ಒಡಲಿನಲ್ಲಿ ಮರೆಯಾಗುವ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಪಶ್ಚಿಮಕ್ಕೆ ಕಾದು ಕುಳಿತಿದ್ದರು. ಈ ವರ್ಷದ ಕೊನೆ ಸೂರ್ಯಾಸ್ತವನ್ನು ನೋಡುವುದಕ್ಕಾಗಿಯೇ ರಾಜಾಸೀಟಿನ ವೀವ್ ಪಾಯಿಂಟಿನಲ್ಲಿ ಸಾವಿರಾರು ಜನರು ಸೇರಿದ್ದರು. ಜೊತೆಗೆ ಗ್ರೇಟರ್ ರಾಜಾಸೀಟಿನ ಎಲ್ಲೆಡೆ ಪ್ರವಾಸಿಗರು ಸೂರ್ಯಾಸ್ತಮಾನ ನೋಡಲು ಕಾತರರಾಗಿದ್ದರು. ಸೂರ್ಯ ಬೆಟ್ಟಗಳ ಸಾಲಿನಲ್ಲಿ ಮರೆಯಾಗುತ್ತಿದ್ದರೆ ರಾಜಾಸೀಟಿನಲ್ಲಿ ನೆರೆದಿದ್ದ ಸಾವಿರಾರು ಪ್ರವಾಸಿಗರು ಬೈ ಬೈ 2024, ವೆಲ್ಕಮ್ 2025 ಎಂದು ಮತ್ತೆ ಮತ್ತೆ ಕೂಗಿ ಸಂಭ್ರಮಿಸಿದರು.
ವರ್ಷದ ಕೊನೆ ಸೂರ್ಯಾಸ್ತ ವೀಕ್ಷಣೆ
ಈ ವೇಳೆ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಪ್ರವಾಸಿಗರು ಕೊಡಗು ಎಂದರೆ ಪ್ರಾಕೃತಿಕ ಸೌಂದರ್ಯವನ್ನೇ ಹೊದ್ದು ಮಲಗಿರುವ ಜಿಲ್ಲೆ. ನೋಡುವುದಕ್ಕೆ ಬಹಳ ಖುಷಿಯಾಗುತ್ತದೆ. ಹೀಗಾಗಿಯೇ ಕೊಡಗಿಗೆ ಬಂದಿದ್ದೇವೆ. ಅದರಲ್ಲೂ ಸೂರ್ಯಾಸ್ತವನ್ನು ನೋಡಿ ಸಂಭ್ರಮವಾಗಿದೆ. ಮನಸ್ಸಿಗೆ ಆಹ್ಲಾದಕರವಾಗಿದೆ ಮುಂದಿನ ದಿನಗಳ ಎಲ್ಲರಿಗೂ ಶುಭವಾಗಿರಲಿ ಎಂದರು. ರಾತ್ರಿ ಪಾರ್ಟಿ ಮಾಡುವುದು ಇದ್ದೇ ಇದೆ. ಅದರ ಹೊರತ್ತಾಗಿಯೂ ದೇವಾಸ್ಥಾನಗಳಿಗೆ ಹೋಗಿ ವಿಶೇಷ ಅರ್ಚನೆಗಳನ್ನು ಮಾಡಿಸಿ ಎಲ್ಲವೂ ಶುಭವಾಗಿರುವಂತೆ ಬೇಡುತ್ತೇವೆ ಎಂದಿದ್ದಾರೆ. ಇನ್ನು ಬೆಳಿಗ್ಗೆಯಿಂದಲೂ ಕೊಡಗಿನ ಪ್ರಕೃತಿಯ ತಾಣಗಳಲ್ಲಿ ಪ್ರವಾಸಿಗರು 2024 ಕ್ಕೆ ಬೈ ಬೈ ಹೇಳಿ 2025 ಕ್ಕೆ ಹಾಯ್ ಹೇಳಿದ್ದರು.
ವರ್ಷದ ಕೊನೆ ಸೂರ್ಯಾಸ್ತ ವೀಕ್ಷಣೆ
ಹೌದು ಇಯರ್ ಎಂಡಿಂಗ್ ಅಥವಾ ನ್ಯೂ ಇಯರ್ ವೆಲ್ಕಮ್ ಪಾರ್ಟಿ ಎಂದರೆ ಕೇವಲ ಗುಂಡು ತುಂಡು ಪಾರ್ಟಿ ಅಂತನೇ ಆಗಬೇಕೆಂದಿಲ್ಲಾ ಅಲ್ವಾ. ಅದಕ್ಕೆ ಬದಲಾಗಿ ಪ್ರಾಕೃತಿಕ ಸೌಂದರ್ಯ ನೋಡಿ ಎಂಜಾಯ್ ಮಾಡಿ ಆ ಮೂಲಕವೂ ಇಯರ್ ಎಂಡಿಂಗ್ ಅನ್ನು ಅರ್ಥಪೂರ್ಣವಾಗಿ ಕಳೆಯಬಹುದು. ಹೀಗಾಗಿ ಹೊರ ಜಿಲ್ಲೆ, ಹೊರರಾಜ್ಯಗಳಿಂದ ಕೊಡಗಿನ ಭಾರೀ ಸಂಖ್ಯೆಯಲ್ಲಿ ಬಂದಿರುವ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಲ್ಲಿ ಸುತ್ತಾಡಿ ಸಂಭ್ರಮಿಸುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸಿಗರ ಹಾಟ್ ಸ್ಪಾಟ್ ರಾಜಾಸೀಟಿನಲ್ಲೂ ಪ್ರವಾಸಿಗರು ಸುತ್ತಾಡಿ ಸಂಭ್ರಮಿಸುತ್ತಿದ್ದಾರೆ. ಇದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಇಂದು ಸಂಜೆ ರಾಜಾಸೀಟಿನಲ್ಲಿ ಸೂರ್ಯಾಸ್ತಮಾನ ನೋಡಲಿರುವ ಪ್ರವಾಸಿಗರು 2024 ರ ಕೊನೆಯ ಸೂರ್ಯಾಸ್ತಮಾನವನ್ನು ನೋಡಿ ಸಂಭ್ರಮ ಪಡಲಿದ್ದಾರೆ. ಅದಕ್ಕಾಗಿ ಸಂಜೆ ಐದರ ಬಳಿಕ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರಾಜಾಸೀಟಿನಲ್ಲಿ ಜಮಾಯಿಸಲಿದ್ದಾರೆ. ಅಲ್ಲಿನ ವೀವ್ಹ್ ಪಾಯಿಂಟಿನಲ್ಲಿ ಕುಳಿತು ಸೂರ್ಯಾಸ್ತ ವೀಕ್ಷಣೆ ಮಾಡಿ ಪ್ರಕೃತಿಯೊಂದಿಗೆ ಕೆಂಪಾಗಿ ಬೆರೆತು ಹೋಗಲಿರುವ ಸೂರ್ಯನ ಸೌಂದರ್ಯವನ್ನು ನೋಡಲಿದ್ದಾರೆ. ಸಂಜೆ ನಂತರ ಅವರು ತಂಗುವ ತಮ್ಮತಮ್ಮ ಹೋಂಸ್ಟೇ ರೆಸಾರ್ಟ್ ಗಳ್ಲಲೇ ಇಯರ್ ಎಂಡಿಂಗ್ ಹಾಗೂ ನ್ಯೂಇಯರ್ ವೆಲ್ಕಮ್ ಆಚರಣೆ ನಡೆಯಲಿದೆ.