Lakkundi: 'ಸಾಕು..ಅಗೆಯೋದು ನಿಲ್ಸಿ' ಅಂತ ತಿರುಗಿ ಬಿದ್ರಾ ಗ್ರಾಮಸ್ಥರು? ಸದ್ಯ ಅಲ್ಲಿ ಏನ್ ನಡಿತಾ ಇದೆ?
ಈ ಘಟನೆಯು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಉತ್ಖನನ ಪ್ರದೇಶದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಅಚ್ಚರಿ ಎನ್ನುವಂತೆ, ಲಕ್ಕುಂಡಿ ಗ್ರಾಮಸ್ಥರು ಈಗ ಉತ್ಖನನ ಕಾರ್ಯದ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿಜಕ್ಕೂ ಅಲ್ಲಿ ಏನು ನಡಿತಾ ಇದೆ?

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ, ಹಳೆಯ ಮನೆಯ ಅಡಿಪಾಯ ತೋಡುವಾಗ ಪುರಾತನ ಚಿನ್ನಾಭರಣಗಳಿದ್ದ ನಿಧಿ ಪತ್ತೆಯಾಗಿದ್ದು ಗೊತ್ತೇ ಇದೆ. ಈ ಆಭರಣಗಳು ಸಮೀಪದ ಲಕ್ಷ್ಮೀ ದೇವಸ್ಥಾನಕ್ಕೆ ಸೇರಿದ್ದೆಂದು ಶಂಕಿಸಲಾಗಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸಕ್ಕೆ ಹೊಸ ಸೇರ್ಪಡೆಯಾಗಿದೆ. ಆದರೆ, ಅಲ್ಲಿ ನಿಧಿ ಸಿಕ್ಕ ಬಳಿಕ ಭಾರತದ, ಅದರಲ್ಲೂ ಗದಗದ ಹೆಸರು ವರ್ತಮಾನದ ಪುಟದಲ್ಲಿ ಬೇರೆಯದೇ ರೀತಿಯಲ್ಲಿ ಪ್ರಾಜೆಕ್ಟ್ ಆಗುತ್ತಿದೆ.
ಮನೆ ಅಡಿಪಾಯ ತೋಡುವಾಗ ಸಿಕ್ಕಿದ ನಿಧಿ!
ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕಸ್ತೂರೆವ್ವ ರಿತ್ತಿ ಎನ್ನುವವರ ಮನೆಯಲ್ಲಿ ಈ ವಿಸ್ಮಯ ನಡೆದಿದೆ. ಹೊಸ ಮನೆ ನಿರ್ಮಾಣಕ್ಕಾಗಿ ಹಳೆಯ ಅಡಿಪಾಯವನ್ನು ತೋಡುತ್ತಿದ್ದಾಗ ಕಾರ್ಮಿಕರಿಗೆ ಲೋಹದ ಚೆಂಬು ಪತ್ತೆಯಾಗಿದೆ. ಕುತೂಹಲದಿಂದ ಆ ಚೆಂಬನ್ನು ಪರೀಕ್ಷಿಸಿದಾಗ ಅದರ ಒಳಗೆ ಪಳಪಳ ಹೊಳೆಯುವ ಚಿನ್ನಾಭರಣಗಳು ಕಂಡುಬಂದಿವೆ.
ಮಡಿಕೆಯಲ್ಲಿ ಏನೇನು ಅಭರಣಗಳಿವೆ?
ಪತ್ತೆಯಾದ ಪುರಾತನ ಮಡಿಕೆಯಲ್ಲಿ ಚಿನ್ನದ ಚೈನ್, ಬೆಲೆಬಾಳುವ ಬಳೆಗಳು ಹಾಗೂ ವಿವಿಧ ವಿನ್ಯಾಸದ ಉಂಗುರಗಳು ಪತ್ತೆಯಾಗಿವೆ. ವಿಶೇಷವೆಂದರೆ, ನಿಧಿ ಸಿಕ್ಕ ಮನೆಯ ಪಕ್ಕದಲ್ಲೇ ಪುರಾತನ ಲಕ್ಷ್ಮೀ ದೇವಸ್ಥಾನವಿದೆ. ಈ ಹಿನ್ನೆಲೆಯಲ್ಲಿ, ಸಿಕ್ಕಿರುವ ಚಿನ್ನಾಭರಣಗಳು ದೇವಸ್ಥಾನಕ್ಕೆ ಸೇರಿದ ಪುರಾತನ ಒಡವೆಗಳಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸ ಹೊಂದಿರುವ ಈ ಮಣ್ಣಿನಲ್ಲಿ ಮತ್ತೆ ನಿಧಿ ಪತ್ತೆಯಾಗಿರುವುದು ಕುತೂಹಲ ಕೆರಳಿಸಿದೆ.
ಅಧಿಕಾರಿಗಳ ಭೇಟಿ ಚಿನ್ನಾಭರಣ ತಪಾಸಣೆ
ನಿಧಿ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಆಭರಣಗಳ ಕಾಲಮಾನ ಮತ್ತು ಅವುಗಳ ಮೌಲ್ಯದ ಬಗ್ಗೆ ಸಂಶೋಧನೆ ನಡೆಸಲು ಮುಂದಾಗಿದ್ದಾರೆ. ಜಿಲ್ಲಾಡಳಿತವು ಸ್ಥಳವನ್ನು ವಶಕ್ಕೆ ಪಡೆದು, ಹೆಚ್ಚಿನ ಉತ್ಖನನ ನಡೆಸಲಾಗುತ್ತಿದೆ.
ಶಿಲ್ಪಕಲೆಯ ತೊಟ್ಟಿಲು ಲಕ್ಕುಂಡಿ ಗ್ರಾಮ
ಲಕ್ಕುಂಡಿ ಗ್ರಾಮವು 11 ಮತ್ತು 12ನೇ ಶತಮಾನದ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. 101 ದೇವಸ್ಥಾನ ಹಾಗೂ 101 ಬಾವಿಗಳನ್ನು ಹೊಂದಿರುವ ಈ ಗ್ರಾಮವು 'ಶಿಲ್ಪಕಲೆಯ ತೊಟ್ಟಿಲು' ಎಂದೇ ಪ್ರಖ್ಯಾತಿ ಪಡೆದಿದೆ. ಕಲ್ಯಾಣ ಚಾಲುಕ್ಯರ ಕಾಲದ ವೈಭವಕ್ಕೆ ಈ ಗ್ರಾಮ ಸಾಕ್ಷಿಯಾಗಿದ್ದು, ಆಗಾಗ ಇಂತಹ ಪುರಾತನ ವಸ್ತುಗಳು ಪತ್ತೆಯಾಗುತ್ತಲೇ ಇವೆ. ಇಂದು ಪತ್ತೆಯಾದ ನಿಧಿಯು ಆ ಕಾಲದ ಆರ್ಥಿಕ ಸಮೃದ್ಧಿಯನ್ನು ನೆನಪಿಸುವಂತಿದೆ.
ಲಕ್ಕುಂಡಿ ಉತ್ಖನನ ವೇಳೆ ಪತ್ತೆಯಾಯ್ತು ಜೀವಂತ ಹಾವು; 'ನಿಧಿ' ಇರುವ ಸೂಚನೆ ಎಂದ ಗ್ರಾಮಸ್ಥರು!
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ವಿಶೇಷ ಪ್ರಭೇದದ ಜೀವಂತ ಹಾವು ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಉತ್ಖನನ ಸಿಬ್ಬಂದಿ, ಎಚ್ಚರಿಕೆಯಿಂದ ಹಾವನ್ನು ಹಿಡಿದು ಯಾವುದೇ ಹಾನಿ ಆಗದಂತೆ ಸುರಕ್ಷಿತವಾಗಿ ರಕ್ಷಿಸಿ, ನಂತರ ಹಾವನ್ನು ಕಾಡಿನ ಪ್ರದೇಶಕ್ಕೆ ಬಿಡಲಾಗಿದೆ.
ಘಟನೆಯ ಬಳಿಕ ಉತ್ಖನನ ಕಾರ್ಯವನ್ನು ಕೆಲಕಾಲ ಸ್ಥಗಿತಗೊಳಿಸಿ, ನಂತರ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಿಸಲಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಉತ್ಖನನ ಪ್ರದೇಶದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಅಚ್ಚರಿ ಎನ್ನುವಂತೆ, ಲಕ್ಕುಂಡಿ ಗ್ರಾಮಸ್ಥರು ಈಗ ಉತ್ಖನನ ಕಾರ್ಯದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಗ್ರಾಮಸ್ಥರು ಸರ್ಕಾರದ ಉತ್ಖನನ ಕೆಲಸದ ವಿರುದ್ಧ ತಿರುಗಿ ಬೀಳಲು ಕಾರಣ, ಅಲ್ಲಿ ಅವರಿಗಾಗುತ್ತಿರುವ ತೊಂದರೆ. ಅಂದರೆ, ಶುರುವಿನಲ್ಲಿ ಆ ಗ್ರಾಮದಲ್ಲಿ ನಿಧಿ ಸಿಕ್ಕ ಖುಷಿಯಲ್ಲಿ ಇದ್ದ ಕೆಲಸಗಳನ್ನೆಲ್ಲಾ ಬಿಟ್ಟು ಊರವೆರಲ್ಲಾ ಅಲ್ಲಿ ಸೇರುತ್ತಿದ್ದರು. ಆದರೆ, ಬರಬರುತ್ತ ಊರಿಗೆ ಬರುವವರ ಸಂಖ್ಯೆ ಅತಿಯಾಗತೊಡಗಿದೆ. ಜೊತೆಗೆ, ಅಲ್ಲಿ ರಾಜಕೀಯ, ಧಾರ್ಮಿಕತೆ ಎಲ್ಲ ಸಮಸ್ಯೆಗಳೂ ತಲೆಹಾಕತಿಡಗಿದ್ದು ಊರಿನ ಜನರ ಮಾನಸಿಕ ಶಾಂತಿಗೆ ಧಕ್ಕೆ ಬರುತ್ತಿದೆ.
ಹೀಗಾಗಿ, ಮೊದಲು ಸಿಕ್ಕ ನಿಧಿ ಬಳಿಕ ಈಗ ಇಲ್ಲಿ ಏನೂ ಸಿಗುತ್ತಿಲ್ಲ. ಅಷ್ಟಾದ ಮೇಲೆ ಕೂಡ ಮತ್ತೆಮತ್ತೆ ಅಲ್ಲೇ ಅಗೆಯುತ್ತ, ನಿಧಿಗಾಗಿ ಹುಡುಕುತ್ತ, ಅಲ್ಲಿನ ಕುಟುಂಬ ಹಾಗೂ ಅಕ್ಕಪಕ್ಕದ ಕುಟುಂಬಕ್ಕೆ ಆಗುತ್ತಿರುವ ತೊಂದರೆ ತಪ್ಪಲಿ ಎಂಬುದು ಆ ಗ್ರಾಮದ ಆಶಯ ಅಷ್ಟೇ. ಇಷ್ಟು ದಿನ ಅಗೆದಿದ್ದು ಓಕೆ, ಇನ್ನೂ ಕೂಡ ಯಾವುದೇ ಸಾಕ್ಷಿ, ಮಾಹಿತಿ ಇಲ್ಲದೇ ಅಗೆಯುತ್ತಲೇ ಹೋದರೆ ಅದು ಮುಗಿದು ಅಲ್ಲಿ ಕುಟುಂಬ ಹಾಗೂ ಗ್ರಾಮ ಮತ್ತೆ ನೆಮ್ಮದಿ ಬದುಕು ಸಾಗಿಸುವುದು ಯಾವಾಗ ಎನ್ನುವುದಷ್ಟೇ ಆ ಗ್ರಾಮದ ಸದ್ಯದ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಸಿಗಬಹುದೇ?

