MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Technology
  • Science
  • 3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ದಪ್ಪ ಮತ್ತು ಉದ್ದ ಏಕೆ ಇರುತ್ತದೆ..? ಇಲ್ಲಿದೆ ರೋಚಕ ವಿಜ್ಞಾನ..!

3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ದಪ್ಪ ಮತ್ತು ಉದ್ದ ಏಕೆ ಇರುತ್ತದೆ..? ಇಲ್ಲಿದೆ ರೋಚಕ ವಿಜ್ಞಾನ..!

ನಾವು ದಿನ ನಿತ್ಯ ಬಳಸುವ ಅನೇಕ ಸಣ್ಣ ಪುಟ್ಟ ವಸ್ತುಗಳಲ್ಲಿ ರೋಚಕ ವಿಜ್ಞಾನ ಅಡಗಿರುತ್ತದೆ. ಅದರಲ್ಲಿ ಮೂರು ಪಿನ್ ಹೊಂದಿರುವ ಪ್ಲಗ್ ಕೂಡ ಹೌದು. ನಿಮಗೆ ಗೊತ್ತಾ ಕೆಲವು ಪ್ಲಗ್‌ಗಳಲ್ಲಿ ಯಾಕೆ ಮೂರು ಪಿನ್ ಇರುತ್ತದೆ ಎಂದು? ಈ ಕುರಿತ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ...

2 Min read
Author : Ganesh Mabla Gowda
Published : Jul 12 2026, 02:34 PM IST
Share this Photo Gallery
  • FB
  • TW
  • Linkdin
  • Whatsapp
15
ಅದು ಸುರಕ್ಷಿತಾ ಕ್ರಮ
Image Credit : social media

ಅದು ಸುರಕ್ಷಿತಾ ಕ್ರಮ

ನಿತ್ಯ ಜೀವನದಲ್ಲಿ ನಾವು ಅನೇಕ ವಿದ್ಯುತ್ ಉಪಕರಣಗಳನ್ನು ಬಳಸುತ್ತೇವೆ. ನೀವು ಗಮನಿಸಿರಬಹುದು! ಕೆಲವು ಪ್ಲಗ್‌ಗಳಿಗೆ ಎರಡು ಪಿನ್‌ಗಳಿದ್ದರೆ, ಇನ್ನು ಕೆಲವುಗಳಿಗೆ ಮೂರು ಪಿನ್‌ಗಳಿರುತ್ತವೆ. ಈ 3-ಪಿನ್ ಪ್ಲಗ್‌ಗಳಲ್ಲಿ ಎರಡು ಪಿನ್‌ಗಳು ಚಿಕ್ಕದಾಗಿದ್ದು, ಮೇಲ್ಭಾಗದ ಒಂದು ಪಿನ್ ಮಾತ್ರ ಉದ್ದ ಮತ್ತು ದಪ್ಪವಾಗಿರುತ್ತದೆ. ಇದು ಕೇವಲ ವಿನ್ಯಾಸಕ್ಕಾಗಿ ಮಾಡಿದ್ದಲ್ಲ, ಇದರ ಹಿಂದೆ ಪ್ರಮುಖವಾದ ಸುರಕ್ಷತಾ ಕಾರಣವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
3-ಪಿನ್ ಪ್ಲಗ್‌ಗಳನ್ನು ಎಲ್ಲಿ ಬಳಸಲಾಗುತ್ತದೆ?
Image Credit : pexels

3-ಪಿನ್ ಪ್ಲಗ್‌ಗಳನ್ನು ಎಲ್ಲಿ ಬಳಸಲಾಗುತ್ತದೆ?

ಸಾಮಾನ್ಯವಾಗಿ ಫ್ರಿಜ್, ಎಸಿ, ಮೈಕ್ರೋವೇವ್ ಓವನ್ ಮತ್ತು ಗೀಸರ್‌ನಂತಹ ದೊಡ್ಡ ವಿದ್ಯುತ್ ಉಪಕರಣಗಳಿಗೆ 3-ಪಿನ್ ಪ್ಲಗ್ ಬಳಸಲಾಗುತ್ತದೆ. ಈ ಸಾಧನಗಳ ಹೊರಭಾಗವು ಹೆಚ್ಚಾಗಿ ಲೋಹದಿಂದ (Metal body) ಮಾಡಲ್ಪಟ್ಟಿರುತ್ತದೆ. ಒಂದು ವೇಳೆ ವೈರ್‌ಗಳು ಸವೆದು ಲೋಹದ ಬಾಡಿಗೆ ತಗುಲಿದರೆ ಅಥವಾ ಶಾರ್ಟ್ ಸರ್ಕ್ಯೂಟ್ ಸಂಭವಿಸಿದರೆ ಆ ಸಾಧನವನ್ನು ಮುಟ್ಟಿದವರಿಗೆ ಜೋರಾದ ಎಲೆಕ್ಟ್ರಿಕ್ ಶಾಕ್ ಹೊಡೆಯುವ ಅಪಾಯವಿರುತ್ತದೆ. ಈ ಅಪಾಯ ತಪ್ಪಿಸಲು 3-ಪಿನ್ ಪ್ಲಗ್ ಅಗತ್ಯ.

Related Articles

Related image1
ಒಂದು ಪಾನಿಪುರಿಗಾಗಿ 12 ವರ್ಷಗಳಿಂದ ಕೋರ್ಟ್‌ ಅಲೆದಾಟ.. ರೋಚಕ ಕಾನೂನು ಸಮರ..!
Related image2
IND vs ZIM : ಹೊಸ ಕೋಚ್ ನೇಮಕ.. ಪಂದ್ಯ ಸೋತರೆ ಗಂಭೀರ್‌ಗೆ ಬೈಯುವಂತಿಲ್ಲ!
35
2-ಪಿನ್ ಪ್ಲಗ್‌ಗಳು ಯಾರಿಗೆ?
Image Credit : pexels

2-ಪಿನ್ ಪ್ಲಗ್‌ಗಳು ಯಾರಿಗೆ?

ನಮ್ಮ ಮೊಬೈಲ್ ಚಾರ್ಜರ್, ಟಿವಿ ಅಥವಾ ಟ್ರಿಮ್ಮರ್‌ಗಳಂತಹ ಸಾಧನಗಳಿಗೆ 2-ಪಿನ್ ಪ್ಲಗ್ ಇರುತ್ತದೆ. ಇವುಗಳ ಹೊರಭಾಗವು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿರುವುದರಿಂದ ಮತ್ತು ಇವು ಕಡಿಮೆ ವಿದ್ಯುತ್ ಬಳಸುವುದರಿಂದ ಇವುಗಳಿಗೆ ಅರ್ಥಿಂಗ್ ಅವಶ್ಯಕತೆ ಇರುವುದಿಲ್ಲ.

45
ಆ ಒಂದು ಪಿನ್ ಉದ್ದವಾಗಿರಲು ಕಾರಣವೇನು?
Image Credit : pexels

ಆ ಒಂದು ಪಿನ್ ಉದ್ದವಾಗಿರಲು ಕಾರಣವೇನು?

3-ಪಿನ್ ಪ್ಲಗ್‌ನಲ್ಲಿರುವ ಉದ್ದವಾದ ಪಿನ್ ಅನ್ನು 'ಅರ್ಥ್ ಪಿನ್' (Earth Pin) ಎಂದು ಕರೆಯಲಾಗುತ್ತದೆ. ನೀವು ಪ್ಲಗ್ ಅನ್ನು ಸಾಕೆಟ್‌ಗೆ ಹಾಕಿದಾಗ, ಉದ್ದವಿರುವ ಅರ್ಥ್ ಪಿನ್ ಎಲ್ಲಕ್ಕಿಂತ ಮೊದಲು ಒಳಗೆ ಹೋಗುತ್ತದೆ. ವಿದ್ಯುತ್ ಹರಿಯುವ ಪಿನ್‌ಗಳಾದ 'ಫೇಸ್' ಮತ್ತು 'ನ್ಯೂಟ್ರಲ್' ಸಂಪರ್ಕ ಹೊಂದುವ ಮೊದಲೇ ಸಾಧನಕ್ಕೆ ಅರ್ಥಿಂಗ್ ಸಂಪರ್ಕ ಸಿಗುತ್ತದೆ.

ಒಂದು ವೇಳೆ ಆ ಉಪಕರಣದಲ್ಲಿ ಮೊದಲೇ ವಿದ್ಯುತ್ ಸೋರಿಕೆ (Current leakage) ಇದ್ದರೆ, ನೀವು ಅದನ್ನು ಮುಟ್ಟುವ ಮೊದಲೇ ಆ ಹೆಚ್ಚುವರಿ ವಿದ್ಯುತ್ ಸುರಕ್ಷಿತವಾಗಿ ಭೂಮಿಗೆ ಸೇರುತ್ತದೆ. ಇದರಿಂದ ನಮಗೆ ಶಾಕ್ ಹೊಡೆಯುವುದು ತಪ್ಪುತ್ತದೆ.

55
ಆ ಪಿನ್ ದಪ್ಪವಾಗಿರುವುದು ಏಕೆ?
Image Credit : pexels

ಆ ಪಿನ್ ದಪ್ಪವಾಗಿರುವುದು ಏಕೆ?

ಪಿನ್ ದಪ್ಪವಾಗಿದ್ದರೆ ಅದನ್ನು ನಾವು ತಿಳಿಯದೇ ಸಾಕೆಟ್‌ನ 'ಲೈವ್' ಅಥವಾ 'ನ್ಯೂಟ್ರಲ್' ಸ್ಲಾಟ್‌ಗಳಿಗೆ ಹಾಕಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅದು ಸಣ್ಣದಾಗಿದ್ದರೆ, ತಪ್ಪಾಗಿ ಹಾಕುವ ಸಾಧ್ಯತೆ ಇರುತ್ತದೆ, ಇದರಿಂದ ಸಾಧನ ಹಾಳಾಗಬಹುದು. ವಿಜ್ಞಾನದ ನಿಯಮದಂತೆ, ವೈರ್ ಅಥವಾ ಪಿನ್ ಎಷ್ಟು ದಪ್ಪವಾಗಿರುತ್ತದೆಯೋ ಅದರ ವಿದ್ಯುತ್ ಪ್ರತಿರೋಧ ಅಷ್ಟು ಕಡಿಮೆಯಿರುತ್ತದೆ. ಪ್ರತಿರೋಧ ಕಡಿಮೆಯಿದ್ದಷ್ಟೂ ವಿದ್ಯುತ್ ವೇಗವಾಗಿ ಪ್ರವಹಿಸುತ್ತದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ ಆದಾಗ ಸೋರಿಕೆಯಾದ ವಿದ್ಯುತ್ ಯಾವುದೇ ಅಡೆತಡೆಯಿಲ್ಲದೆ, ಕ್ಷಣಾರ್ಧದಲ್ಲಿ ಭೂಮಿಗೆ ಸೇರಿ ಅಪಘಾತಗಳನ್ನು ತಪ್ಪಿಸುತ್ತದೆ. ಹೀಗೆ ನಮಗೆ ಸಣ್ಣದಾಗಿ ಕಾಣುವ ಪ್ಲಗ್ ವಿನ್ಯಾಸವು ನಮ್ಮ ಮನೆಯಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸದಂತೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಸುದ್ದಿ
ನ್ಯೂಸ್‌ ರೌಂಡ್‌ಅಪ್
ವಿಜ್ಞಾನ
ತಂತ್ರಜ್ಞಾನ

Latest Videos
Recommended Stories
Recommended image1
ಇನ್ಮುಂದೆ AI ಇಂಟರ್‍‌ನೆಟ್‌ ಅನ್ನು ಆಳುತ್ತದೆಯೇ? ಏನಿದು Dead Internet Theory?
Recommended image2
Saccharin: ಒಂದು ಮರೆವು, ಒಂದು ವಿಚಿತ್ರ ರುಚಿ; ಕೋಟಿಗಟ್ಟಲೆ ಜನರ ಜೀವನಕ್ಕೆ ಬಂದ ‘ಸಿಹಿ’
Recommended image3
ಭೂಮಿಯ ಕಾಂತಕ್ಷೇತ್ರ ಗ್ರಹಿಸುವ ಬಾನೆಟ್‌ಹೆಡ್ ಶಾರ್ಕ್‌ಗಳು: ಸಾಗರದ ಅದೃಶ್ಯ 'ಜಿಪಿಎಸ್' ರಹಸ್ಯ ಭೇದಿಸಿದ ವಿಜ್ಞಾನಿಗಳು!
Related Stories
Recommended image1
ಒಂದು ಪಾನಿಪುರಿಗಾಗಿ 12 ವರ್ಷಗಳಿಂದ ಕೋರ್ಟ್‌ ಅಲೆದಾಟ.. ರೋಚಕ ಕಾನೂನು ಸಮರ..!
Recommended image2
IND vs ZIM : ಹೊಸ ಕೋಚ್ ನೇಮಕ.. ಪಂದ್ಯ ಸೋತರೆ ಗಂಭೀರ್‌ಗೆ ಬೈಯುವಂತಿಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved