ಚಂದ್ರಯಾನ ಯಶಸ್ವಿ ಬೆನ್ನಲ್ಲೇ ನೆನಪಾದ ಈ ವಿಜ್ಞಾನಿ, ಕಾಲಿಗೆ ಚಪ್ಪಲಿ ಇಲ್ಲ, ಧರಿಸಲು ಪ್ಯಾಂಟೇ ಇಲ್ಲ!
ಚಂದ್ರಯಾನ - 2 ವಿಫಲ ಆದಾಗ ಕಣ್ಣೀರಿಟ್ಟಿದ್ದ ಇಸ್ರೋದ ಅಂದಿನ ಅಧ್ಯಕ್ಷ ಕೆ. ಶಿವನ್ ಮುಖದಲ್ಲಿ ಇದೀಗ ಸಂತಸ ಹುಕ್ಕಿ ಹರಿಯುತ್ತಿದೆ. ಇದಕ್ಕೆ ಕಾರಣ ಚಂದ್ರಯಾನ - 3 ಯಶಸ್ವಿಯಾಗಿರುವುದು. ಇವರ ಬಗ್ಗೆ ಗೊತ್ತಿಲ್ಲದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಚಂದ್ರಯಾನ-2 ಫೇಲ್ ಆದಾಗ ಚಿಕ್ಕ ಮಗುವಿನಂತೆ ಬಿಕ್ಕಿಬಿಕ್ಕಿ ಅತ್ತಿದ್ದ ಕೆ.ಶಿವನ್ ಅವರನ್ನು ಪ್ರಧಾನಿ ಮೋದಿ ಅಪ್ಪಿಕೊಂಡು ಬೆನ್ನು ಸವರಿ, ಸಾಂತ್ವನ ಹೇಳಿದ್ದು ನಿಮಗೆ ಗೊತ್ತೇ ಇದೆ. ಆದರೆ ಇದೀಗ ಅದೇ ಶಿವನ್ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ ಬಾರಿ ಇಸ್ರೋ ಅಧ್ಯಕ್ಷರಾಗಿದ್ದ ಕೆ. ಶಿವನ್, ಚಂದ್ರಯಾನ 2 ನೇತೃತ್ವದ ವಹಿಸಿದ್ದರು. ಬಡ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದ ಇವರು, ಶಾಲಾ-ಕಾಲೇಜಿಗೆ ಬರಿಗಾಲಿನಲ್ಲಿ ಓಡಾಡುತ್ತಿದ್ದರು. ತಮಿಳುನಾಡು ಮೂಲದ ಇವರು, ಇಸ್ರೋ ಅಧ್ಯಕ್ಷ ಸ್ಥಾನಕ್ಕೆ ಏರಿದ ಒಂಭತ್ತನೆ ವ್ಯಕ್ತಿ.
isro sivan 07
ಕೆ .ಶಿವನ್ ಅವರು ಏಪ್ರಿಲ್ 14, 1957ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಅವರು ರೈತ ಕುಟುಂಬದಲ್ಲಿ ಜನಿಸಿದ್ದು, ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿದ್ದಾರೆ. ಅವರು ಕಾಲೇಜಿಗೆ ಬಂದರೂ ಕೂಡ ಬರಿಗಾಲಿನಲ್ಲೇ ಓಡಾಡುತ್ತಿದ್ದರು. ಅವರ ಬಳಿ ಪ್ಯಾಂಟ್‌ಗಳು ಕೂಡ ಇರಲಿಲ್ಲವಂತೆ. ಆದ್ದರಿಂದ ಪಂಚೆಯಲ್ಲೇ ಕಾಲೇಜಿಗೆ ಹೋಗುತ್ತಿದ್ದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಾ. ಕೆ. ಶಿವನ್ ನೀಡಿದ ಗಣನೀಯ ಕೊಡುಗೆ ಅಪಾರ. ಚಂದ್ರಯಾನ-2 ಸಹಿತ ದೇಶದ ಪ್ರಮುಖ ಬಾಹ್ಯಾಕಾಶ ಯೋಜನೆಗಳಲ್ಲಿ ಅವರ ಸೇವೆ ಗಣನೀಯವಾಗಿದೆ.
ಶಿವನ್, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ಮಾಜಿ ನಿರ್ದೇಶಕರು ಆಗಿದ್ದರು. 1982ರಲ್ಲಿ ಇಸ್ರೊ ಪಿಎಸ್‌ಎಲ್‌ವಿಯ ಅಭಿವೃದ್ಧಿ ಮತ್ತುಯೋಜನೆಗೆ ಸೇರುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ಇಸ್ರೊದಲ್ಲಿ ಉಡವಣಾ ವಾಹನದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಕೆಲಸ ಮಾಡಿದ್ದಾರೆ.
ಇವರ ಬಾಹ್ಯಾಕಾಶ ಸೇವೆಗೆ 2007ರಲ್ಲಿ ಇಸ್ರೊ ಮೆರಿಟ್ ಪ್ರಶಸ್ತಿ, 2011ರಲ್ಲಿ ಡಾ. ಬಿರೆನ್ ರಾಯ್ ಬಾಹ್ಯಾಕಾಶ ವಿಜ್ಞಾನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಕೆ .ಶಿವನ್ ಅವರು ಏಪ್ರಿಲ್ 14, 1957ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು.
ಇವರು ಜುಲೈ 2, 2014ರಲ್ಲಿ ಇಸ್ರೊದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. 1980ರಲ್ಲಿ ಮದ್ರಾಸ್ ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಹಾಗೂ ಐಐಎಸ್ ಬೆಂಗಳೂರಿನಲ್ಲಿ ಏರೊಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದೇ ವಿಷಯದಲ್ಲಿ ಬಾಂಬೆ ಐಐಟಿಯಲ್ಲಿ ಡಾಕ್ಟರೇಟ್ ಪದವಿ ಕೂಡ ಪಡೆದಿದ್ದಾರೆ.