ನಿದ್ದೆಗೆ ಜಾರುವ ಮುನ್ನ ಚಂದ್ರನ 3D ಫೋಟೋ ರವಾನೆ, ಚಿತ್ರ ವೀಕ್ಷಣೆಗೆ ಇಸ್ರೋ ಸೂಚನೆ ಪ್ರಕಟ!
ಚಂದ್ರನ ಮೇಲೆ 14 ದಿನದ ಅಧ್ಯಯನ ಮುಗಿಸಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನಿದ್ದೆಗೆ ಜಾರಿದೆ. ಆದರೆ ನಿದ್ರೆಗೂ ಮೊದಲು 3ಡಿ ಫೋಟೋ ಕಳುಹಿಸಿ ಚಂದ್ರನ ಕೌತುಕ ಬಯಲು ಮಾಡಿದೆ.
ಇಸ್ರೋದ ಚಂದ್ರಯಾನ 3 ಅತ್ಯಂತ ಯಶಸ್ವಿಯಾಗಿದೆ. 14 ದಿನ ಬಿಡುವಿಲ್ಲದೆ ಚಂದ್ರನ ಹಲವು ಕೌತುಕ ಹಾಗೂ ನಿಖರ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಇದೀಗ ಮತ್ತೊಂದು ಮಹತ್ವದ ಚಿತ್ರ ರವಾನಿಸಿದೆ.
ಚಂದ್ರನ ಮೇಲೆ ಇದೀಗ ಕತ್ತಲು ಆವರಿಸಿದೆ. 14 ದಿನ ಚಂದ್ರನ ಮೇಲೆ ರಾತ್ರಿ. ಹೀಗಾಗಿ ಸೆ.4 ರಂದು ಚಂದ್ರನ ಮೇಲಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನಿದ್ದಿಗೆ ಜಾರಿದೆ.
ಇಸ್ರೋ ರೋವರ್ ಹಾಗೂ ಲ್ಯಾಂಡರನ್ನು ಸ್ಲೀಪ್ ಮೂಡ್‌ನಲ್ಲಿಟ್ಟಿದೆ. ಇನ್ನು ಸೆ.22ರಂದು ಕೆಲಸ ಆರಂಭಿಸಲು ಸೂಚನೆ ನೀಡಲಾಗುತ್ತದೆ. ಆದರೆ ಪ್ರಗ್ಯಾನ್ ರೋವರ್ ನಿದ್ದೆಗೂ ಜಾರುವ ಮುನ್ನ 3ಡಿ ಫೋಟೋ ಕಳುಹಿಸಿ ಹಲವು ಕುತೂಹಲ ಬಹಿರಂಗಪಡಿಸಿದೆ.
ಇದು ತ್ರಿ ಡೈಮೆನ್ಶನಲ್ ಫೋಟೋ ಆಗಿದೆ. ಈ ಚಿತ್ರವನ್ನು ವೀಕ್ಷಿಸಲು ಇಸ್ರೋ ಮಹತ್ವದ ಸೂಚನೆಯನೊಂದನ್ನು ನೀಡಿದೆ. ಬರಿಗಣ್ಣಿನಿಂದ ನೋಡಿದರೆ ಈ ಚಿತ್ರದಲ್ಲಿನ ವಿಶೇಷತೆ ಹಾಗೂ ಸೂಕ್ಷ್ಮತೆ ಅರಿಯಲು ಸಾಧ್ಯವಿಲ್ಲ.
ಪ್ರಗ್ಯಾನ್ ರೋವರ್ ಕಳುಹಿಸಿದ ಈ ಚಿತ್ರ ವೀಕ್ಷಿಸಲು ರೆಡ್ ಹಾಗೂ ಕ್ಯಾನ್ ಗ್ಲಾಸ್ ಬಳಕೆ ಮಾಡಿ. ಕಾರಣ ಇದು ರೋವರ್ ಕಳುಹಿಸಿದ 3ಡಿ ಚಿತ್ರ ಎಂದು ಇಸ್ರೋ ಸೂಚನೆ ನೀಡಿದೆ.
ಚಂದ್ರನಲ್ಲಿ 1 ದಿನವೆಂದರೆ ಭೂಮಿಯ 28 ದಿನಗಳಿಗೆ (655 ಗಂಟೆ) ಸಮ. ಒಂದು ಹಗಲು ಎಂದರೆ 14 ದಿನ. ಒಂದು ರಾತ್ರಿ ಎಂದರೆ 14 ದಿನ. ಆಗಸ್ಟ್ 23 ರಂದು ಚಂದ್ರನ ಸಮಯದ ಪ್ರಕಾರ ಬೆಳಗ್ಗೆ ಲ್ಯಾಂಡ್ ಆಗಿತ್ತು. ಇದೀಗ ಸೆಪ್ಟೆಂಬರ್ 4 ರ ಸಂಜೆ ಲ್ಯಾಂಡರ್, ರೋವರ್ ಸ್ಲೀಪ್ ಮೂಡ್‌ಗೆ ಜಾರಿದೆ.
ಚಂದ್ರನ ರಾತ್ರಿ ಸಮಯದಲ್ಲಿ ತಾಪಮಾನ 200 ಡಿಗ್ರಿ ಸೆಲ್ಶಿಯಸ್‌ಗಿಂತ ಕೆಳಕ್ಕೆ ಇಳಿಯಲಿದೆ. ಈ ಅಸಾಧ್ಯ ವಾತಾವರಣವನ್ನು ಮಂದಿನ 14 ದಿನ ತಡೆಯುವುದೇ ಲ್ಯಾಂಡರ್ ಹಾಗೂ ರೋವರ್ ಮುಂದಿರುವ ಸವಾಲು
ಸೆಪ್ಟೆಂಬರ್ 2 ರಂದು ಪ್ರಗ್ಯಾನ್ ರೋವರ್ ಸ್ಲೀಪ್ ಮೂಡ್‌ಗೆ ಜಾರಿದ್ದರೆ, ಸೆ.4 ರಂದು ಲ್ಯಾಂಡರ್ ಸ್ಲೀಪ್ ಮೂಡ್‌ಗೆ ಜಾರಿದೆ. ಇನ್ನು ಸೆ.22ರಂದು ಮತ್ತೆ ಬಿಸಿಲು ಬಂದಾಗ ಇವುಗಳು ಕೆಲಸ ಆರಂಭಿಸಬಹುದು ಅನ್ನೋ ವಿಶ್ವಾಸ ಇಸ್ರೋದಲ್ಲಿದೆ.