- Home
- Entertainment
- Sandalwood
- ನಾನು ಹೀರೋಯಿನ್ ಆಗ್ಲಿ ಅಂತಾನೆ ಲೈಫ್‌ಲ್ಲಿ ಹೀಗೆಲ್ಲಾ ಆಯ್ತು ಅನ್ಸುತ್ತೆ; ಗಿಚ್ಚಿ ಗಿಲಿಗಿಲಿ ಜಾಹ್ನವಿ
ನಾನು ಹೀರೋಯಿನ್ ಆಗ್ಲಿ ಅಂತಾನೆ ಲೈಫ್‌ಲ್ಲಿ ಹೀಗೆಲ್ಲಾ ಆಯ್ತು ಅನ್ಸುತ್ತೆ; ಗಿಚ್ಚಿ ಗಿಲಿಗಿಲಿ ಜಾಹ್ನವಿ
ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಸಿನಿಮಾ 'ಅಧಿಪತ್ರ' ಚಿತ್ರದಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿ ಜಾಹ್ನವಿ ನಾಯಕಿ ಪಾತ್ರ ಮಾಡಲಿದ್ದಾರೆ. ಅಧಿಪತ್ರ ಮುಹೂರ್ತ ಬಂಡೇಕಾಳಿ ದೇವಸ್ಥಾನದಲ್ಲಿ ಇತ್ತೀಚಿಗೆ ಮುಹೂರ್ತ ನಡೀತು. ಈ ಸಂದರ್ಭದಲ್ಲಿ ಮಾತನಾಡಿದ ಜಾಹ್ನವಿ, ತಾವು ಆಂಕರಿಂಗ್‌ನಿಂದ ನಟನೆಗೆ ಬಂದ ಬಗ್ಗೆ ಮಾತನಾಡಿದರು.

ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಸಿನಿಮಾ 'ಅಧಿಪತ್ರ' ಚಿತ್ರದಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿ ಜಾಹ್ನವಿ ನಾಯಕಿ ಪಾತ್ರ ಮಾಡಲಿದ್ದಾರೆ. ಅಧಿಪತ್ರ ಮುಹೂರ್ತ ಬಂಡೇಕಾಳಿ ದೇವಸ್ಥಾನದಲ್ಲಿ ಇತ್ತೀಚಿಗೆ ಮುಹೂರ್ತ ನಡೀತು. ಈ ಸಂದರ್ಭದಲ್ಲಿ ಮಾತನಾಡಿದ ಜಾಹ್ನವಿ, ತಾವು ಆಂಕರಿಂಗ್‌ನಿಂದ ನಟನೆಗೆ ಬಂದ ಬಗ್ಗೆ ಮಾತನಾಡಿದರು.
ದೇವರು ಒಂದು ಕಿತ್ಕೊಂಡ್ರೆ ಇನ್ನೊಂದು ಕೊಡ್ತಾನೆ ಅಂತಾರೆ. ಆದ್ರೆ ನನಗೆ ಒಂದನ್ನು ಕಿತ್ಕೊಂಡು ಐದು ಕೊಡ್ತಿದ್ದಾನೆ ಅಂತ ಎಲ್ಲರೂ ಕಾಲೆಳೀತಿದ್ದಾರೆ ಎಂದು ಗಿಚ್ಚಿ ಗಿಲಿಗಿಲಿ ಜಾಹ್ನವಿ ಕಾರ್ತಿಕ್ ಹೇಳಿದ್ದಾರೆ. ಮಾತ್ರವಲ್ಲ ಈ ಬಗ್ಗೆ ನನ್ನ ಎಲ್ಲಾ ಸ್ನೇಹಿತರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಜಾಹ್ನವಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
ಇತ್ತೀಚಿಗೆ ಅವರು ಬಂಡೇಕಾಳಿ ದೇವಸ್ಥಾನದಲ್ಲಿ ಅಧಿಪತ್ರದ ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಸಿನಿಪಯಣದ ಬಗ್ಗೆ ತಿಳಿಸಿದ್ದಾರೆ
'ನಮ್ಮ ಜೀವನದಲ್ಲಿ ದೇವರ ಪ್ಲಾನ್ ಏನು ಇರುತ್ತೆ ಅಂತ ಹೇಳೋಕಾಗಲ್ಲ. ನಾನು ಕನಸುಮನಸಿನಲ್ಲೂ ಊಹಿಸಿದಂಥಾ ಒಂದು ಘಟನೆ ನನ್ನ ಜೀವನದಲ್ಲಿ ಆಯ್ತು. ತುಂಬಾ ಚೆನ್ನಾಗಿದ್ದ ಟೈಂನಲ್ಲೇ ಹೀಗೆಲ್ಲಾ ಆಯ್ತು. ಆ ಬಳಿಕ ನಾನು ಕೆರಿಯರ್ ಕಡೆಗೇನೆ ಹೆಚ್ಚು ಗಮನ ಕೊಟ್ಟೆ' ಎಂದು ಜಾಹ್ನವಿ ಹೇಳಿದ್ದಾರೆ.
'ಜೀವನದಲ್ಲಿ ಕಷ್ಟಗಳು ಬಂದಾಗ ಸಹಿಸಿಕೊಂಡು ಮೆಂಟಲೀ ಸ್ಟ್ರಾಂಗ್ ಆಗುತ್ತಾ ಹೋಗಬೇಕು. ಸಿನಿಮಾ ನನ್ನ ಜೀವನದ ಮೊದಲ ಮೆಟ್ಟಿಲು. ಇದಕ್ಕಾಗಿ ಎಲ್ಲಾ ರೀತಿಯ ಪರಿಶ್ರಮ ಹಾಕುತ್ತೇನೆ. ಜಿಮ್, ಡ್ಯಾನ್ಸ್ ಎಂದು ಪ್ರಾಕ್ಟೀಸ್ ಮಾಡುತ್ತೇನೆ. ಫಲಿತಾಂಶ ದೇವರಿಗೆ ಬಿಟ್ಟು ಬಿಡ್ತೀನಿ' ಎಂದಿದ್ದಾರೆ.
ಕಲರ್ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಂತರ ಜಾನ್ವಿ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸಿದರು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡು ಸುಮ್ಮನಿದ್ದ ಜಾನ್ವಿ ಕೊನೆಯಲ್ಲಿ ಎರಡನೇ ಸ್ಥಾನ ಪಡೆದು ಟ್ರೋಫಿ ಹಿಡಿದಿರುವುದು ದೊಡ್ಡ ವಿಚಾರವೇ.