ಜೂನ್ 9 ದರ್ಬಾರ್ ರಿಲೀಸ್; ಇದು ಹಾಸ್ಯಮಯ ಸಿನಿಮಾ ಎಂದ ಮನೋಹರ್!
ಡಿಫರೆಂಟ್ ಕಥೆ ಮೂಲಕ ಮನೋರಂಜಿಸಲು ಬರ್ತಿದ್ದಾರೆ ವಿ ಮನೋಹರ್. ಸತೀಶ್ ಮತ್ತು ಜಾನವಿ ಕಾಂಬಿನೇಷನ್ ಕೂಪರ್...
ವಿ ಮನೋಹರ್ ನಿರ್ದೇಶನ ದರ್ಬಾರ್ ಸಿನಿಮಾ ಜೂನ್ 9ಕ್ಕೆ ತೆರೆ ಮೇಲೆ ಬರುತ್ತಿದೆ. ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದು ಚಿತ್ರದ ಕುರಿತು ಹೇಳಿಕೊಂಡಿದ್ದಾರೆ.
ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ ಸತೀಶ್ ಅವರೇ ಕತೆ ಹಾಗೂ ಸಂಭಾಷನೆ ಬರೆದಿದ್ದಾರೆ. ನಿರ್ದೇಶಕರು ಈ ಬಗ್ಗೆ ಮಾತನಾಡಿದ್ದಾರೆ.
'ಓ ಮಲ್ಲಿಗೆ ನಂತರ ನಿರ್ದೇಶನ ಮಾಡಿರುವ ಚಿತ್ರ ದರ್ಬಾರ್. ಇದೊಂದು ಹಾಸ್ಯಮಯ ಸಿನಿಮಾ. ಮೊದಲ ಪ್ರದರ್ಶನಕ್ಕೆ ಬಂದವರು ಮೆಚ್ಚುವ ಎಲ್ಲ ಅಂಶಗಳು ಚಿತ್ರದಲ್ಲಿದೆ.
ಕೆಟ್ಟದನ್ನು ಸೋಮಾರಿಗಳನ್ನು ಕಂಡರೆ ಹೀರೋ ಸಹಿಸಲ್ಲ ಈತನ ಈ ಗುಣ ಕೆಲವರಿಗೆ ಇಷ್ಟ ಆಗಲ್ಲ. ಹೀರೋ ಚುನಾವಣೆಗೆ ನಿಲ್ಲುತ್ತಾನೆ.
ಆತನ ಒಳ್ಳೆಯ ಗುಣಗಳ ಕಾರಣಕ್ಕೆ ಚುನಾವಣೆಯಲ್ಲಿ ನಾಯಕನನ್ನು ಸೋಲಿಸುವ ತಂತ್ರ ರೂಪಿಸುತ್ತಾರೆ. ಮುಂದೆ ಏನಾಗುತ್ತದೆ ಎಂಬುದು ಚಿತ್ರಕತೆ.
ಗಿಚ್ಚಿ ಗಿಲಿಗಿಲಿ ಕಾರ್ತೀಕ್ ಬೇರೆ ಥರದ ರೋಲ್ ಮಾಡಿದ್ದಾರೆ. ಸಂತು ಹೀರೋ ಜೊತೆ ಇದು ಆಗಾಗ ಕಾಲೆಳೆಯುವ ಪಾತ್ರ ಮಾಡಿದ್ದಾರೆ.
ಸಾಧು ಕೋಕಿಲ್, ನವೀನ್ ಪಡೀಲ್ ಜೋಡಿ ನೋಡುಗರನ್ನು ರಂಜಿಸುತ್ತದೆ ಎಂದಿದ್ದಾರೆ.ಚಿತ್ರದ ನಾಯಕಿ ಜಾನವಿ. 'ಇದು ನನ್ನ ಮೊದಲ ಚಿತ್ರ. ಈ ಚಿತ್ರದಲ್ಲಿ ನಾನು ಸೈಕಾಲಜಿ ಸ್ಟುರೆಂಟ್. ರಜೆಗೆಂದು ಊರಿಗೆ ಬಂದಾಗ ನಾಯಕನ ಪರಿಚಯ ಆಗುತ್ತದೆ' ಎಂದಿದ್ದಾರೆ ನಾಯಕಿ.