- Home
- Entertainment
- Sandalwood
- ಟ್ರಾನ್ಸ್‌ಪೆರೆಂಟ್ ಡ್ರೆಸ್‌ನಲ್ಲಿ ಕಂಡ ಚೈತ್ರಾ ಆಚಾರ್: ನೀವು ಕನ್ನಡದ ಉರ್ಫಿ ಜಾವೇದ್ ಅನ್ನೋದಾ ನೆಟ್ಟಿಗರು!
ಟ್ರಾನ್ಸ್‌ಪೆರೆಂಟ್ ಡ್ರೆಸ್‌ನಲ್ಲಿ ಕಂಡ ಚೈತ್ರಾ ಆಚಾರ್: ನೀವು ಕನ್ನಡದ ಉರ್ಫಿ ಜಾವೇದ್ ಅನ್ನೋದಾ ನೆಟ್ಟಿಗರು!
ಕನ್ನಡದ ಟೋಬಿ ಚಿತ್ರದ ನಾಯಕಿ ಚೈತ್ರಾ ಆಚಾರ್ ಟ್ರೆಂಡಿ ಆಗಿದ್ದಾರೆ. ಹೊಸ ರೀತಿಯ ಡ್ರೆಸ್ ತೊಟ್ಟು ಮಿಂಚುತ್ತಲೇ ಇರ್ತಾರೆ. ಇದೀಗ ಈ ಕೃಷ್ಣ ಸುಂದರಿ ಹೊಸ ರೀತಿಯ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚೈತ್ರಾ ಆಚಾರ್ ಜಾಸ್ತಿನೇ ಬೋಲ್ಡ್ ಆಗಿದ್ದಾರೆ. ಎಲ್ಲರೂ ಹುಬ್ಬೇರಿಸೋ ರೀತಿಯಲ್ಲಿಯೇ ಫೋಟೋ ಶೂಟ್ ಮಾಡಿಸುತ್ತಾರೆ. ಆದರೆ ಇದೀಗ ಯಾವ ಹಾಲಿವುಡ್ ಹೀರೋಯಿನ್‌ಗೂ ಕಮ್ಮಿ ಇಲ್ಲ ಅನ್ನೋ ರೀತಿಯೇ ಗೋಲ್ಡನ್ ಟ್ರಾನ್ಸ್‌ಪೆರೆಂಟ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟಿದ್ದಾರೆ.
ಚೈತ್ರಾ ಆಚಾರ್ ಜೀನ್ಸ್ ಹಾಗೂ ಗೋಲ್ಡನ್ ಬಣ್ಣದ ಟ್ರಾನ್ಸ್‌ಪೆರೆಂಟ್ ಡ್ರೆಸ್ ತೊಟ್ಟಿದ್ದು, ಇದಕ್ಕೆ ನೆಟ್ಟಿಗರು ಸ್ಯಾಂಡಲ್‌ವುಡ್ ಕ್ಯೂಟಿ, ಹಾಟ್, ನ್ಯೂ ಭಾರ್ಬಿ, ಹಾಗೂ ನೀವು ಕನ್ನಡದ ಉರ್ಫಿ ಜಾವೇದ್ ಅಂತೆಲ್ಲಾ ಪ್ರತ್ರಿಕ್ರಿಯಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ಬ್ಯೂಟಿಫುಲ್ ತಾರೆ ಚೈತ್ರಾ ಜೆ ಆಚಾರ್ 'ಮಹೀರಾ', 'ಆ ದೃಶ್ಯ', 'ತಲೆತಂಡ' ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿರುವ ಚೆಲುವೆ. ಆದರೆ ಇವರಿಗೆ ಯಶಸ್ಸು ತಂದುಕೊಟ್ಟಿದ್ದು ಮಾತ್ರ ರಾಜ್ ಬಿ ಶೆಟ್ಟಿ ನಟನೆಯ 'ಟೋಬಿ' ಚಿತ್ರ.
'ಗರುಡ ಗಮನ ವೃಷಭ ವಾಹನ' ಚಿತ್ರದ ಸೋಜುಗದ ಸೂಜು ಮಲ್ಲಿಗೆ.. ಹಾಡಿಗಾಗಿ ಚೈತ್ರಾಗೆ 2021ರಲ್ಲಿ ಸೈಮಾ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿದೆ.
ಚೈತ್ರಾ ಆಚಾರ್ ಹೊಸ ರೀತಿಯ ತಮ್ಮ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ತಾರೆ. ಈ ಮೂಲಕ ಸಿನಿಮಾ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಚೈತ್ರಾ ಆಚಾರ್ ಆ್ಯಕ್ಟೀವ್ ಆಗಿದ್ದಾರೆ ಅಂತಲೂ ಹೇಳಬಹುದು.
ಚೈತ್ರಾ ಆಚಾರ್ ಟೋಬಿ ಸಿನಿಮಾ ಆದ್ಮೇಲೆ ಮತ್ತೊಂದು ಸಿನಿಮಾ ಒಪ್ಪಿದ್ದಾರೆ. ಆ ಚಿತ್ರವೇ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಆಗಿದೆ. ಈ ಸಿನಿಮಾದಲ್ಲೂ ಅದ್ಭುತ ಅಭಿನಯ ಇರುತ್ತದೆ ಅನ್ನುವ ಭರವಸೆಯನ್ನ ನಟ ರಕ್ಷಿತ್ ಕೊಟ್ಟಿದ್ದಾರೆ. ಆದರೆ ಅಕ್ಟೋಬರ್-20 ರಂದು ಬರಬೇಕಿದ್ದ ಈ ಸಿನಿಮಾ ಅಕ್ಟೋಬರ್-27 ಕ್ಕೆ ರಿಲೀಸ್ ಆಗುತ್ತಿದೆ.