ಈ ವರ್ಷ ನಾನು ಎಲ್ಲಾ ವ್ಯಾಮೋಹಗಳಿಂದ ಮುಕ್ತಳಾಗಿ ಡಿಟ್ಯಾಚ್‌ಮೆಂಟ್ ಬೆಳೆಸಿಕೊಳ್ಳಬೇಕು: ಸಾನ್ಯಾ ಅಯ್ಯರ್
ನಾನು ಕಳೆದ ಕೆಲವು ವರ್ಷಗಳಿಂದ ಹೂಡಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅದನ್ನು ಈ ಬಾರಿಯೂ ಮುಂದುವರಿಸಬೇಕು. ನಾವು ಕಲಾವಿದರು ಎಂದ ಸಾನ್ಯಾ ಅಯ್ಯರ್.
2025ರಲ್ಲಿ ನಾನು ಎಲ್ಲಾ ವ್ಯಾಮೋಹಗಳಿಂದ ಮುಕ್ತಳಾಗಬೇಕು. ಎಲ್ಲದರ ಬಗೆಗೂ ಡಿಟ್ಯಾಚ್‌ಮೆಂಟ್ ಬೆಳೆಸಿಕೊಳ್ಳಬೇಕು. ನಮ್ಮ ನೋವಿಗೆ, ಬೇಸರಕ್ಕೆ ಅಟ್ಯಾಚ್‌ಮೆಂಟ್ ಬಹುಮುಖ್ಯ ಕಾರಣ.
ಅದರಿಂದ ಹೊರಬಂದರೆ ಬದುಕು ಹಸನಾಗುತ್ತದೆ. ಹೊಸ ವರ್ಷದ ಮೊದಲ ದಿನವನ್ನು ಧ್ಯಾನ, ಮಂತ್ರ ಪಠಣದ ಮೂಲಕ ಶುರು ಮಾಡುತ್ತೇನೆ. ನಾನು ಕಳೆದ ಕೆಲವು ವರ್ಷಗಳಿಂದ ಹೂಡಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ.
ಅದನ್ನು ಈ ಬಾರಿಯೂ ಮುಂದುವರಿಸಬೇಕು. ನಾವು ಕಲಾವಿದರು. ನಮ್ಮ ಕೆಲಸ, ಗಳಿಕೆಯಲ್ಲಿ ಏರಿಳಿತ ಸಾಮಾನ್ಯ. ಹೀಗಾಗಿ ನಮ್ಮಂಥಾ ಕ್ಷೇತ್ರದಲ್ಲಿ ಇರುವವರು ಹಣ ಬಂದಾಗಲೇ ಅದನ್ನು ಇನ್ವೆಸ್ಟ್ ಮಾಡಿಬಿಡಬೇಕು.
ನನ್ನ ಎರಡು ಮೂರು ಸಿನಿಮಾಗಳ ಘೋಷಣೆ ಆಗಬೇಕಿದೆ. ಸಿನಿಮಾ ಕೆಲಸವೇ ವರ್ಷಪೂರ್ತಿ ಇದೆ. ಪ್ರತೀ ಪ್ರಾಜೆಕ್ಟೂ ಹೊಸತೇ. ಹೊಸತನದಿಂದಲೇ ಅವುಗಳಲ್ಲಿ ತೊಡಗಿಸಿಕೊಳ್ಳುತ್ತೇನೆ.
ಸಾನ್ಯಾ ಐಯ್ಯರ್ ಇತ್ತೀಚೆಗೆ ತುಂಬಾ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಮಾಡಲು ರೆಡಿಯಾಗಿರುವ ಈ ಬ್ಯೂಟಿ ಬಾಲಿವುಡ್ ಫೋಟೋಗ್ರಫರ್ ಜೊತೆಗೂ ಶೂಟ್ ಮಾಡಿಸಿಕೊಂಡಿದ್ದಾರೆ.
ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಸಖತ್ ಹೆಸರು ಮಾಡಿದ ಸುಂದರಿ ಸಾನ್ಯಾ ಅಯ್ಯರ್, ಡ್ಯಾನ್ಸ್ ರಿಯಾಲಿಟಿ ಶೋ ನಂತರ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಸ್ಪರ್ಧಿಸಿ ಕನ್ನಡಿಗರ ಮನ ಗೆದಿದ್ದಾರೆ.