- Home
- Entertainment
- Sandalwood
- ಸೊಸೆ ಜೊತೆ ಸುಮಲತಾ ಅಂಬರೀಶ್ ವರಮಹಾಲಕ್ಷ್ಮಿ ಹಬ್ಬ ಅಚರಣೆ; ಮಂಡ್ಯ ಹೈಕ್ಳುಗಳಿಂದ ಮೆಚ್ಚುಗೆ
ಸೊಸೆ ಜೊತೆ ಸುಮಲತಾ ಅಂಬರೀಶ್ ವರಮಹಾಲಕ್ಷ್ಮಿ ಹಬ್ಬ ಅಚರಣೆ; ಮಂಡ್ಯ ಹೈಕ್ಳುಗಳಿಂದ ಮೆಚ್ಚುಗೆ
ಸೊಸೆ ಜೊತೆ ಮೊದಲ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಸುಮಲತಾ ಅಂಬರೀಶ್. ಅವಿವಾ ಕನ್ನಡ ಪೋಸ್ಟ್‌ಗೆ ನೆಟ್ಟಿಗರು ಫಿದಾ...

ಸಂಸದೆ ಸುಮಲತಾ ಅಂಬರೀಶ್ ಈ ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಸೊಸೆ ಜೊತೆ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಹಬ್ಬ ಅಂದರೆ ಫ್ಯಾಮಿಲಿ ಟೈಂ ಎಂದು ಸುಮಲತಾ ಅಂಬರೀಶ್ ಬರೆದುಕೊಂಡಿದ್ದಾರೆ. ಅಭಿ ಮತ್ತು ಅವಿವಾ ಜೊತೆಗಿರುವ ಫೋಟೋ ವೈರಲ್ ಆಗುತ್ತಿದೆ.
'ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಷಯಗಳು' ಎಂದು ಅಭಿವಾ ಬಿಡಪ್ಪ ಕನ್ನಡದಲ್ಲಿ ಬರೆದುಕೊಂಡಿದ್ದಾರೆ.
ಸುಮಲತಾ ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ ಸೊಸೆ ಕನ್ನಡದಲ್ಲಿ ಬರೆದಿದ್ದಾರೆ ಎಂದು ಸೊಸೆ ಪರ ಮಂಡ್ಯ ಹೈಕ್ಳುಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕ್ರೀಮ್ ಆಂಡ್ ಬಾಟಲ್ ಗ್ರೀನ್ ಸೀರೆಯಲ್ಲಿ ಸುಮಲತಾ, ವೈಟ್ ಆಂಡ್ ಪ್ಯಾರೆಟ್ ಗ್ರೀನ್ ಸೀರೆಯಲ್ಲಿ ಅವಿವಾ ಮಿಂಚಿದ್ದಾರೆ. ಅಭಿ ಮಾತ್ರ ಪಕ್ಕಾ ಮಂಡ್ಯ ಶೈಲಿ ಪಂಚೆ- ಶರ್ಟ್.
ಅಭಿಷೇಕ್ ಮತ್ತು ಅವಿವಾ ಮದುವೆ ನಂತರ ಆಚರಿಸುತ್ತಿರುವ ಮೊದಲ ಹಬ್ಬ ಹೀಗಾಗಿ ಮನೆಯಲ್ಲಿ ಆಚರಣೆ ಅದ್ಧೂರಿಯಾಗಿತ್ತು. ವಿಶೇಷ ಪೂಜೆ ನಡೆದಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಕಾಲ ಪ್ರೀತಿ ಮದುವೆಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.