- Home
- Entertainment
- Sandalwood
- ವಿವಾಹದ ಬಳಿಕ ಸೋನಲ್ ಮೊಂತೆರೋ ಮೊದಲ ಚಿತ್ರ ರಿಲೀಸ್‌ಗೆ ಸಜ್ಜು: ರಾಕ್ಷಸ ಚಿತ್ರಕ್ಕೆ ನಾಯಕಿ
ವಿವಾಹದ ಬಳಿಕ ಸೋನಲ್ ಮೊಂತೆರೋ ಮೊದಲ ಚಿತ್ರ ರಿಲೀಸ್‌ಗೆ ಸಜ್ಜು: ರಾಕ್ಷಸ ಚಿತ್ರಕ್ಕೆ ನಾಯಕಿ
ಪ್ರಜ್ವಲ್ ದೇವರಾಜ್ ಜತೆಗೆ ‘ರಾಕ್ಷಸ’ ಚಿತ್ರದಲ್ಲಿ ನಟಿಸಿರುವ ಸೋನಲ್ ಮೊಂತೆರೋ. ಕನ್ನಡ ಮತ್ತು ತೆಲುಗಿನಲ್ಲಿ ಫೆ.26ರಂದು ತೆರೆಗೆ. ತರುಣ್ ಸುಧೀರ್ ಜತೆ ವಿವಾಹದ ಬಳಿಕ ಬಿಡುಗಡೆಯಾಗುತ್ತಿರುವ ಸೋನಲ್‌ರ ಮೊದಲ ಸಿನಿಮಾ ಇದು.

ಪ್ರಜ್ವಲ್ ದೇವರಾಜ್ ಅಭಿನಯದ, ಮಮ್ಮಿ ಖ್ಯಾತಿಯ ಲೋಹಿತ್ ನಿರ್ದೇಶನದ ‘ರಾಕ್ಷಸ’ ಸಿನಿಮಾದಲ್ಲಿ ಸೋನಲ್ ಮೊಂತೆರೋ ಅವರು ನಾಯಕಿಯಾಗಿ ನಟಿಸಿದ್ದಾರೆ.
ಈ ಸಿನಿಮಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಫೆ.26ರಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಸೋನಲ್ ಮೊಂತೆರೋ ಮದುವೆಯಾದ ಬಳಿಕ ಬಿಡುಗಡೆಯಾಗುತ್ತಿರುವ ಅವರ ಮೊದಲ ಸಿನಿಮಾ ‘ರಾಕ್ಷಸ’ ಆಗಲಿದೆ.
ಲೋಹಿತ್ ಅವರ ಹಿಂದಿನ ಚಿತ್ರಗಳಲ್ಲಿ ವಿಶಿಷ್ಟ ಪರಿಕಲ್ಪನೆಗಳ ಮೂಲಕ ಬಲವಾದ ಸ್ತ್ರೀ ಪಾತ್ರ ತೋರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಚಿತ್ರವೂ ಅದಕ್ಕೆ ಹೊರತಾಗಿಲ್ಲ. ರಾಕ್ಷಸ ಕಮರ್ಷಿಯಲ್ ಅಂಶಗಳಿರುವ ಹಾರರ್ ಚಿತ್ರವಾಗಿದೆ ಎಂದರು ಸೋನಾಲ್.
‘ರಾಕ್ಷಸ’ ಸಿನಿಮಾದ ತೆಲುಗು ವಿತರಣೆ ಹಕ್ಕನ್ನು ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ಪಡೆದುಕೊಂಡಿದೆ. ಅಖಂಡ ತೆಲುಗು ಪ್ರೇಕ್ಷಕರಿಗೆ ‘ರಾಕ್ಷಸ’ ಸಿನಿಮಾವನ್ನು ಈ ಸಂಸ್ಥೆ ತಲುಪಿಸಲಿದೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ಮಾಪಕ ದೀಪು ಬಿ.ಎಸ್, ‘ಇತ್ತೀಚೆಗೆ ಕನ್ನಡ ಸಿನಿಮಾಗಳ ಹಕ್ಕು ಮಾರಾಟವಾಗುವುದೇ ಕಷ್ಟವಾಗಿರುವಾಗ ತೆಲುಗಿನ ವಿತರಣಾ ವಿತರಣಾ ಸಂಸ್ಥೆಯೊಂದು ಒಳ್ಳೆ ಮೊತ್ತಕ್ಕೆ ಸಿನಿಮಾ ಹಕ್ಕನ್ನು ಪಡೆದುಕೊಂಡಿದೆ. ನಮ್ಮ ಕಷ್ಟಕ್ಕೆ ಫಲ ಸಿಕ್ಕಿದ ಖುಷಿ ಇದೆ’ ಎಂದು ಹೇಳಿದ್ದಾರೆ.
ದೀಪು ಬಿ.ಎಸ್. ಈ ಸಿನಿಮಾ ನಿರ್ಮಿಸಿದ್ದು, ನವೀನ್ ಮತ್ತು ಮಾನಸಾ ಕೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಶೋಭರಾಜ್, ವತ್ಸಲಾ ಮೋಹನ್, ಸಿದ್ಲಿಂಗು ಶ್ರೀಧರ್, ಆರ್ನಾ ರಾಥೋಡ್ ತಾರಾಗಣದಲ್ಲಿದ್ದಾರೆ.