- Home
- Entertainment
- Sandalwood
- ಪ್ರೀತಿಗೆ ಹೊಸ ಅರ್ಥ ನೀಡಿದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಗೆ 12ವರ್ಷ... ನನ್ನ ಎರಡನೇ ಹುಟ್ಟು ಎಂದ ಸುನಿ
ಪ್ರೀತಿಗೆ ಹೊಸ ಅರ್ಥ ನೀಡಿದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಗೆ 12ವರ್ಷ... ನನ್ನ ಎರಡನೇ ಹುಟ್ಟು ಎಂದ ಸುನಿ
ಕನ್ನಡದ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಒಂದಾದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾಗೆ ಇದೀಗ 12 ವರ್ಷ ತುಂಬಿದ್ದು, ನಿರ್ದೇಶಕ ಸುನಿ ಇದನ್ನು ಸಂಭ್ರಮಿಸಿದ್ದಾರೆ.

ಕನ್ನಡ ಸಿನಿಮಾ ಇಂಡಷ್ಟ್ರಿಯಲ್ಲಿ ಒಂದು ಹೊಸ ಇತಿಹಾಸ ಬರೆದಿದ್ದ ಸಿನಿಮಾ ಅಂದ್ರೆ ಅದು ಸಿಂಪಲ್ ಸುನಿ ನಿರ್ದೇಶನದ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ. ಈ ಸಿನಿಮಾ ನಿರ್ದೇಶಕ ಹಾಗೂ ನಟರಿಗೆ ಹೆಸರು ತಂದುಕೊಟ್ಟ ಸಿನಿಮಾ.
ರಕ್ಷಿತ್ ಶೆಟ್ಟಿಗೆ ನಾಯಕನಾಗಿ ಜನಪ್ರಿಯತೆ ನೀಡಿದ ಹಾಗೂ ನಿರ್ದೇಶಕ ಸುನಿಗೆ ಹೊಸ ಹುಟ್ಟನ್ನು ನೀಡಿದ ಸಿನಿಮಾ ಇದು. ಈ ಸಿನಿಮಾದಲ್ಲಿ ಶ್ವೇತಾ ಶ್ರೀವಾಸ್ತವ್ ನಾಯಕಿಯಾಗಿದ್ದರು.
ಯಾವುದೇ ಅಬ್ಬರ, ಫೈಟ್, ರೋಮ್ಯಾನ್ಸ್, ಬೇಡವಾದ ಕಾಮಿಡಿ ಏನೂ ಇಲ್ಲದೇ, ಸಿಂಪಲ್ಲಾಗ್ ನಡೆಯುವ ಹಳೆಯ ಲವ್ ಸ್ಟೋರಿ ಹೇಳುತ್ತಾ ಬೆಸೆಸುವ ಹೊಸದಾದ ಒಂದು ಲವ್ ಸ್ಟೋರಿ ಇದಾಗಿದ್ದು, ಕನ್ನಡ ಚಿತ್ರರಂಗದಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು.
ಇದೀಗ ಈ ಸುಂದರವಾದ ಪ್ರೇಮ ಕಥೆಗೆ 12 ವರ್ಷಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ನಿರ್ದೇಶಕ ಸಿಂಪಲ್ ಸುನಿ ಮಧುರ ನೆನಪುಗಳನ್ನು ಕಲೆ ಹಾಕಿದ್ದಾರೆ. ಒಂದಷ್ಟು ಫೋಟೊಗಳ ಜೊತೆಗೆ ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಮಾರ್ಚ್ 9 ರಂದು ಸಿನಿಮಾ ಬಿಡುಗಡೆಯಾಗಿತ್ತು. ಆ ಕುರಿತು ಮಾಹಿತಿ ಹಂಚಿಕೊಂಡ ಸುನಿ ‘ಹನ್ನೆರೆಡು ವರುಷಗಳ ಹಿಂದೆನ ಈ ದಿನ, ಏಲ್ಲವೂ ಕಣ್ಣುಮುಂದಿರುವುದು .. ಈ ತಾರೀಖು ನನ್ನ 2ನೇ ಹುಟ್ಟು ಎಂದರೂ ತಪ್ಪಾಗದು ..ಸದಾ ಹರಿಯುವುದು ನನ್ನ ಎದೆಯಲ್ಲಿ ಈ ಭಾವಲಹರಿ ಎಂದಿಗೂ ಮರೆಯಲಾಗದು .. ಸಿಂಪಲ್ಲಾಗ್ ಒಂದ್ LOVE STORY ಎಂದು ಬರೆದುಕೊಂಡಿದ್ದಾರೆ.
ಈ ಸಿನಿಮಾದ ಕಥೆ, ಪ್ರತಿಯೊಂದು ಡೈಲಾಗ್ ಗಳು ಎಷ್ಟೊಂದು ಕ್ಯಾಚಿಯಾಗಿತ್ತು ಅಂದ್ರೆ, ಇವತ್ತಿಗೂ ಜನ ಇಷ್ಟಪಟ್ಟು ಈ ಸಿನಿಮಾ ನೋಡುತ್ತಾರೆ. ಅಷ್ಟೊಂದು ಕ್ರೇಜ್ ಹುಟ್ಟಿಸಿದ ಸಿನಿಮಾ ಇದಾಗಿದೆ.
ತುಂಬಾನೆ ವಿಶೇಷತೆಯೊಂದಿಗೆ ರಿಲೀಸ್ ಆಗಿದ್ದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಸಿನಿಮಾವನ್ನು ಜನರಂತೂ ಡೈಲಾಗ್ ಗಳಿಗಾಗಿಯೇ ನೋಡಿದ್ದರು.
ಈ ಚಿತ್ರದ ಹಿಂದೆ ಹೊಸಬರ ತಂಡದ ಕೈಚಳಕವಿತ್ತು. ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ ಎನ್ನುವ ಸೂಚನೆ ಕೂಡ ಯಾರಿಗೂ ಇಲ್ಲವಾಗಿತ್ತು. ಆದರೆ ಚಿತ್ರದ ಕಥೆ, ಸ್ಕ್ರೀನ್ ಪ್ಲೇ ಮತ್ತು ಚಿತ್ರದ ಹಾಡುಗಳು ಕೂಡ ಸಖತ್ ಸೌಂಡ್ ಮಾಡಿತ್ತು.
ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾತ್ಸವ್, ಆರ್ ಜೆ ರಚನಾ ಹಾಗೂ ಅತಿಥಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದರು. ಇದೀಗ 12 ವರ್ಷ ತುಂಬಿದ್ದು, ಜನರು ಕೂಡ ಸಿನಿಮಾವನ್ನು ಹೊಗಳಿ, ಮತ್ತೊಮ್ಮೆ ಅಂತಹ ಸಿನಿಮಾವನ್ನು ಮಾಡಿ, ನಾವು ನೋಡೋದಕ್ಕೆ ಕಾಯ್ದಿದ್ದೇವೆ ಎಂದು ಬರೆದಿದ್ದಾರೆ.