ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸಲು ಖುಷಿ ಇದೆ: ಶಾನ್ವಿ
ನಾಗತಿಹಳ್ಳಿ ಚಂದ್ರಶೇಖರ್ ಹೊಸ ಚಿತ್ರಕ್ಕೆ ಶಾನ್ವಿ ಶ್ರೀವಾಸ್ತವ್ ನಾಯಕಿ. ಮಹಿಳಾ ಪ್ರಧಾನ ಪಾತ್ರ ಆಯ್ಕೆ ಮಾಡಿಕೊಳ್ಳಲು ಕಾರಣವೇನು?

‘ಮಹಿಳಾ ಪ್ರಧಾನ ಸಿನಿಮಾಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಅಂಥಾ ಪಾತ್ರಗಳನ್ನು ನಿರ್ವಹಿಸಲು ಅನುಭವ, ಪ್ರತಿಭೆ ಎರಡೂ ಬೇಕು. ನಿರ್ದೇಶಕರು ನನ್ನಲ್ಲಿ ಅಂಥ ಟ್ಯಾಲೆಂಟ್ ಗುರುತಿಸುತ್ತಿರೋದಕ್ಕೆ ಖುಷಿ ಇದೆ’ ಎಂದು ಶಾನ್ವಿ ಶ್ರೀವಾಸ್ತವ್ ಹೇಳಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಶಾನ್ವಿ, ‘ಈ ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ.'
'ಒಂದು ನನ್ನ ಈಗಿನ ವಯಸ್ಸಿಗಿಂತ ಚಿಕ್ಕ ವಯಸ್ಸಿನ ಪಾತ್ರ, ಇನ್ನೊಂದು ಸ್ವಲ್ಪ ಪ್ರೌಢ ಪಾತ್ರ. ಫೆ.7ರಿಂದ ಶೂಟಿಂಗ್ ಹೈದರಾಬಾದ್‌ನಲ್ಲಿ ಶುರು. ಉಳಿದ ಶೇ.70 ಭಾಗ ಅಮೆರಿಕಾದಲ್ಲಿ ಶೂಟಿಂಗ್ ನಡೆಯಲಿದೆ.'
'ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ಬಹಳ ಎಮೋಶನಲ್ ಚಿತ್ರಗಳವು. ಅವರ ಸಿನಿಮಾಗಳಲ್ಲಿ ವಿದೇಶ ಅದರಲ್ಲೂ ಯುಎಸ್ ಸಿನಿಮಾದ ಪಾತ್ರವೇನೋ ಅನ್ನೋ ಹಾಗೆ ಬರುತ್ತದೆ. ಈ ಸಿನಿಮಾದಲ್ಲೂ ಆ ಭಾವನಾತ್ಮಕ ಜರ್ನಿ ಮುಂದುವರಿಯುತ್ತೆ’ ಎಂದರು.
ಹೆಸರಿಡದ ಈ ಚಿತ್ರಕ್ಕೆ ಅಮೇರಿಕಾ ಅಮೇರಿಕಾ ಸಂಗೀತ ಸಂಯೋಜಕ ಮನೋ ಮೂರ್ತಿ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ಎಸ್‌ಕೆ ರಾವ್ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ.
Shanvi Srivastav
ಸಿಯಾಟಲ್‌ನಲ್ಲಿ ಸಿನಿಮಾ ಶೂಟಿಂಗ್ ನಡೆಯುವ ಸಾಧ್ಯತೆಗಳಿದೆ. ಚಿತ್ರ ಉಳಿದ ಕಲಾವಿದರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.