ನಯಾಗರ ಫಾಲ್ಸ್ ಮುಂದೆ ಅಜ್ಜಿ,ಅಮ್ಮ, ಚಿಕ್ಕಮ್ಮನ ಜೊತೆ ಪೋಸ್ ಕೊಟ್ಟ ಸಾನ್ಯಾ ಅಯ್ಯರ್…
ನಟಿ ಸಾನ್ಯಾ ಅಯ್ಯರ್ ತಮ್ಮ ಫ್ಯಾಮಿಲಿ ಜೊತೆ ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದು, ನಯಾಗರ್ ಫಾಲ್ಸ್ ಗೂ ಭೇಟಿ ನೀಡಿ ಬಂದಿದ್ದಾರೆ.
ಸ್ಯಾಂಡಲ್ ವುಡ್ ನಟಿ ಸಾನ್ಯಾ ಅಯ್ಯರ್ (Saanya Iyer)ಕಳೆದ ಕೆಲವು ಸಮಯಗಳಿಂದ ವಿದೇಶದಲ್ಲಿ ತಮ್ಮ ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಿದ್ದಾರೆ. ಇದೀಗ ಅವರ ತಾಯಿ ದೀಪಾ ಅಯ್ಯರ್ ತಮ್ಮ ಫ್ಯಾಮಿಲಿ ಜೊತೆಗಿನ್ ಟೂರ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾನ್ಯಾ ಅಯ್ಯರ್ ತಾಯಿ ದೀಪಾ ಅಯ್ಯರ್ (Deepa Iyer) ಕೂಡ ನಟಿಯಾಗಿದ್ದು, ಕನ್ನಡದ ಒಂದಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಜೊತೆಗೆ ಮತೊಬ್ಬ ಸಹೋದರಿ ಶಿಲ್ಪಾ ಅಯ್ಯರ್ ಕೂಡ ನಟಿಯಾಗಿದ್ದು, ಎಲ್ಲರೂ ವಿದೇಶದಲ್ಲಿ ವಿವಿಧ ತಾಣಗಳಿಗೆ ಭೇಟಿ ನೀಡುತ್ತಾ ಎಂಜಾಯ್ ಮಾಡ್ತಿದ್ದಾರೆ.
ಸಾನ್ಯಾ ಅಯ್ಯರ್, ತಮ್ಮ ಅಜ್ಜಿ, ಅಮ್ಮ ದೀಪಾ ಅಯ್ಯರ್, ಚಿಕ್ಕಮ್ಮ ಶಿಲ್ಪಾ ಜೊತೆ ವಿಶ್ವದ ಅತಿ ದೊಡ್ಡ ಹಾಗೂ ರಮ್ಯ ಮನೋಹರವಾದ ಜಲಪಾತವಾಗಿರುವ ನಯಾಗರ ಫಾಲ್ಸ್ ನೋಡೊದಕ್ಕೆ ತೆರಳಿದ್ದು, ಫಾಲ್ಸ್ ಮುಂದೆ ನಿಂತು ಹಾಗೂ ಬೋಟಿಂಗ್ ಮಾಡಿದಂತಹ ಸುಂದರ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಸಾನ್ಯಾ ಅಯ್ಯರ್ ಹೆಚ್ಚಾಗಿ ತಮ್ಮ ಪೂರ್ತಿ ಫ್ಯಾಮಿಲಿ ಜೊತೆ ಹೆಚ್ಚಾಗಿ ದೇಶ ವಿದೇಶ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ವಿವಿಧ ದೇಗುಲಗಳಿಗೆ, ಪ್ರವಾಸಿ ತಾಣಗಳಿಗೆ, ಅಮೇರಿಕಾ, ಲಮ್ಡನ್, ನ್ಯೂಯಾರ್ಕ್ ಎಂದು ಫ್ಯಾಮಿಲಿ ಜೊತೆ ಜೊತೆಯಾಗಿಯೇ ಸುತ್ತಾಡುತ್ತಿರುತ್ತಾರೆ.
ಇನ್ನು ಬಿಗ್ ಬಾಸ್ ಸೀಸನ್ 9 ರ ಮೂಲಕ ಸದ್ದು ಮಾಡಿದ ನಟಿ ಸಾನ್ಯಾ ಅಯ್ಯರ್, ಗೌರಿ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೂ ಹೆಜ್ಜೆ ಇಟ್ಟಿದ್ದರು. ಆದರೆ ಈ ಸಿನಿಮಾ ಬಳಿಕ ನಟಿ ಮತ್ತೆಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಆದ್ರೆ ತಮ್ಮ ಡ್ಯಾನ್ಸ್ ವಿಡಿಯೋ ಮೂಲಕ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ ಈ ಬೆಡಗಿ.