ಸೀರೆಯಲ್ಲಿ ಅಪ್ಸರೆ ಸಂಗೀತ ಶೃಂಗೇರಿ... ಇವತ್ತು ಅಭಿಮಾನಿಗಳ ಕಣ್ಣಿಗೆ ಹಬ್ಬ
ಬಿಗ್ ಬಾಸ್ ಚೆಲುವೆ ಸಂಗೀತ ಶೃಂಗೇರಿ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಸೀರೆಯಲ್ಲಿ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ.
ಕನ್ನಡ ಬಿಗ್ ಬಾಸ್ 10ರ (Kannada Bigg Boss 10) ಚೆಲುವೆ, ನಟಿ ಸಂಗೀತ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಧೂಳೆಬ್ಬಿಸಿದ್ದರು. ಅಲ್ಲಿಂದ ಹೊರ ಬಂದ ಮೇಲೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಫೋಟೋ ಶೂಟ್ ಶೇರ್ ಮಾಡುತ್ತಲೇ ಇರುತ್ತಾರೆ.
ಬಿಗ್ ಬಾಸ್ ಮುಗಿದ ಬಳಿಕ ಸಂಗೀತಾ (Sangeetha Sringeri) ಅಭಿನಯದ ಮಾರಿಗೋಲ್ಡ್ ಸಿನಿಮಾ ಕೂಡ ರಿಲೀಸ್ ಆಗಿತ್ತು, ಈ ಸಿನಿಮಾದಲ್ಲಿ ಸಂಗೀತಾ, ದಿಗಂತ್ ಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಅಷ್ಟೊಂದು ಸದ್ದು ಮಾಡಿಲ್ಲ. ಅದಾದ ಬಳಿಕ ಯಾವ ಸಿನಿಮಾದಲ್ಲಿ ಸಂಗೀತಾ ನಟಿಸಿರಲಿಲ್ಲ. ಆದರೆ ತಮ್ಮ ಸ್ಪಿರೀಚುವಲ್ ಜರ್ನಿ ಹಾಗೂ ತಮ್ಮ ಹೊಸ ಬ್ಯುಸಿನೆಸ್ ಮೂಲಕ ಜನರ ಜೊತೆ ಮತ್ತಷ್ಟು ಕನೆಕ್ಟ್ ಆದರು ಈ ಬೆಡಗಿ.
ಹೌದು ಸಂಗೀತ ಶೃಂಗೇರಿ ತಮ್ಮದೇ ಆದ ಕ್ರಿಸ್ಟಲ್ ಬೀಡ್ಸ್ ಗಳ ಬ್ಯುಸಿನೆಸ್ ಆರಂಭಿಸಿದ್ದರು. ಇದರಿಂದ ಸಿಂಹಿಣಿ ಬೈ ಸಂಗೀತಾ ಶೃಂಗೇರಿ ಅಂತಾನೆ ಹೆಸರಿಟ್ಟಿದ್ದರು. ಇದಕ್ಕೆ ಕಾರಣ, ಸಂಗೀತಾರ ಬಿಗ್ ಬಾಸ್ ಆಟ, ಕಾಂಪಿಟೀಶನ್ ಎಲ್ಲಾ ನೋಡಿ, ಜನ ಆಕೆಯನ್ನು ಸಿಂಹಿಣಿ ಅಂತಾನೆ ಕರೆಯುತ್ತಿದ್ದಾರೆ. ಹಾಗಾಗಿ ಸಂಗೀತ ಅದೇ ಹೆಸರಿನಲ್ಲಿ ತಮ್ಮ ಹೊಸ ಬ್ಯುಸಿನೆಸ್ ಕೂಡ ಆರಂಭಿಸಿದ್ದರು.
ಆಧ್ಯಾತ್ಮಿಕತೆಯ (spirituality) ಕಡೆಗೆ ಒಲವು ಬೆಳೆಸಿಕೊಂಡಿರುವ ಸಂಗೀತ ಶೃಂಗೇರಿ ಆದಿ ಯೋಗಿ, ಕಾಶಿ, ವಾರಣಾಸಿ ಎನ್ನುತ್ತಾ, ಕಳೆದ ವರ್ಷ ತಮ್ಮ ಸ್ಪಿರೀಚುವಲ್ ಜರ್ನಿಗೆ ಹೆಚ್ಚು ಆದ್ಯತೆ ನೀಡಿದ್ದರು. ಇತ್ತೀಚೆಗೆ ಅಂದರೆ ಸಂಕ್ರಾಂತಿ ದಿನ ಸಂಗೀತಾ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೂಡ ತಿಳಿಸಿದ್ದರು.
ಇದೀಗ ಸಂಗೀತ ಶೃಂಗೇರಿ ಹೊಸ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನೇರಳೆ ಬಣ್ಣದ ಸೀರೆಯುಟ್ಟಿರುವ ಸಂಗೀತಾ ಶೃಂಗೇರಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಸಂಗೀತಾ ಫೋಟೊ ನೋಡಿ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಸಂಗೀತಾ ಫೋಟೊ ನೋಡಿ ಅಭಿಮಾನಿಗಳಿಗೆ ಇವತ್ತು ಹಬ್ಬ ಎಂದಿದ್ದಾರೆ. ಸೀರೆ ಹುಟ್ಟ ನವಿಲು ನೀನು ದೃಷ್ಟಿಯಾಗಬಹುದು ಏನೋ ಅಂತಾನೂ ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ ಸಂಗೀತಾಗಾಗಿ ಒಂದು ಪವರ್ ಫುಲ್ ರಾಣಿಯ ಪಾತ್ರ ಸೃಷ್ಟಿಸಿ, ಸಿನಿಮಾ ಮಾಡಿ ಎಂದಿದ್ದಾರೆ. ಇನ್ನೂ ಒಬ್ಬರು ತುಂಬಾನೇ ಚೆನ್ನಾಗಿ ಕಾಣಿಸ್ತೀರಿ, ಎಷ್ಟು ಸಲ ಅಂತ ನಮ್ಮ ಮನಸು ಕದಿತೀರಾ ಅಂತ ಪ್ರಶ್ನಿಸಿದ್ದಾರೆ.