ಸ್ಯಾಂಡಲ್‌ವುಡ್ ನಿರ್ಮಾಪಕ ಯೋಗರಾಜ್ ಭಟ್ ಜೊತೆಗೆ ಇಂಗ್ಲೀಷ್‌ನಲ್ಲಿ ಮಾತಾಡಿ ಶಾಕ್ ಕೊಟ್ಟ ಮಕ್ಕಳು!
ಬೆಂಗಳೂರು (ಸೆ.25): ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಚಲನಚಿತ್ರ ನಿರ್ದೇಶಕ, ಚಿತ್ರ ಕಥೆಗಾರ, ಗೀತ ರಚನೆಕಾರ ಹಾಗೂ ಸಿನಿಮಾ ಸಾಹಿತ್ಯ ಬರವಣಿಗೆಗೆ ಪ್ರಸಿದ್ಧಿಯಾಗಿದ್ದಾರೆ. ಆದರೆ, ಅವರ ಕನ್ನಡದ ಮೇಲಿನ ಪ್ರೀತಿ ಮಾತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನು ಕಳೆದೆರಡು ದಿನಗಳ ಹಿಂದೆ ತಮ್ಮ ಮಗಳ ಬರ್ತಡೇಗೆ ಮಕ್ಕಳೆಲ್ಲರೂ ಸೇರಿದಾಗ ಎಲ್ಲರಿಗೂ ಕನ್ನಡ ಮಾತಾಡ್ರಿ ಎಂದು ಹೇಳಿದರೆ ಮಕ್ಕಳು ಯಾ ಶೂರ್ ಅಂಕಲ್ ಎಂದಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಕ್ಕಳ ಕನ್ನಡ ಕಲಿಕೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಯೋಗರಾಜ್ ಭಟ್ ಅವರ ಎರಡನೇ ಮಗಳು ಪಂಚಮಿಯ ಹುಟ್ಟಿದ ದಿನ ಸೆ.23ರಂದು ತನ್ನ ತರಗತಿ ಗೆಳೆಯರನ್ನು ಜನ್ಮದಿನದ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದಾಳೆ. ಈ ವೇಳೆ ಮಗಳನ್ನು ತಮ್ಮ ಮೇಲೆ ಕೂರಿಸಿಕೊಂಡಿರುವ ಯೋಗರಾಜ್ ಭಟ್ ಎಲ್ಲ ಮಕ್ಕಳಿಗೆ ಪಾರ್ಟಿ ಕೊಡಿಸಿದ್ದಾರೆ.
ಮಗಳು ಪಂಚಮಿಯ ಬರ್ತಡೇ ಪಾರ್ಟಿಗೆ ಸೇರಿದ್ದ ಮಕ್ಕಳು ಇಂಗ್ಲೀಷ್‌ನಲ್ಲಿ ಮಾತನಾಡಿಕೊಂಡಿದ್ದಾರೆ. ಈ ವೇಳೆ ಎಲ್ಲ ಮಕ್ಕಳಿಗೆ ನೀವು ಕನ್ನಡದಲ್ಲಿ ಮಾತಾಡ್ರಿ ಎಂದಾಗ, ಅಲ್ಲಿದ್ದ ಮಕ್ಕಳೆಲ್ಲಾ ಸೇರಿ ಯಾ ಶೂರ್ (ya.. Sure..) ಅಂಕಲ್ ಎಂದು ಹೇಳಿದ್ದಾರೆ. ಇದರಿಂದ ಯೋಗರಾಜ್ ಭಟ್ ಬೇಸ್ತು ಬಿದ್ದಿದ್ದಾರೆ.
ಭಟ್ರೆ ತಾವು ಕೂಡ ಸ್ವಲ್ಪ ತಪ್ಪಿದ್ದೀರೇನೋ ಅನಿಸ್ತಾ ಇದೆ ಮಗಳ ಫ್ರೆಂಡ್ಸ್ ಅನ್ನೋದು ಬದಲಿಗೆ ಗೆಳತಿಯರು ಅಥವಾ ಗೆಳೆಯರು ಅಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಯಾವುದೇ ಘಟನೆಯ ಬಗ್ಗೆ ಹಾಗೂ ಚಿತ್ರದ ಬಗ್ಗೆ ಮಾತನಾಡುವಾಗಲೂ ಯೋಗರಾಜ್ ಭಟ್ಟರು ತಮ್ಮ ಹಸ್ತಾಕ್ಷರದಲ್ಲಿ ಬರೆದುಕೊಂಡು ಅದನ್ನು ಫೊಟೋ ತೆಗೆದು ಮಾಹಿತಿ ಹಂಚಿಕೊಳ್ಳುತ್ತಾರೆ. ಹೀಗೆ, ಅವರ ಹಸ್ತಾಕ್ಷರದ ಹಲವು ಪ್ರತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತವೆ.
ರಾಜ್ಯದಲ್ಲಿ ಮುಂಗಾರು ಮಳೆ ಹಾಗೂ 'ಗಾಳಿಪಟ-2' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕಮಾಲ್ ಮಾಡಿದ್ದ ಯೋಗರಾಜ್ ಭಟ್ಟರು ಇದೀಗ ಮತ್ತೆ 'ಗರಡಿ' ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 10ರಂದು (10 ನವೆಂಬರ್ 2023) ಕರ್ನಾಟಕದಾದ್ಯಂತ ತೆರೆಯಲ್ಲಿ ಗರಡಿ ಚಿತ್ರ ಅಬ್ಬರಸಲಿದೆ.
ಮಗಳ ಜನ್ಮದಿನದ ಕಾರ್ಯಕ್ರಮದಲ್ಲಿ ನಡೆದ ಘಟನೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯೋಗರಾಜ್ ಭಟ್ ' ಮಗಳು ಪಂಚಮಿ ಆಕೆಯ ಫ್ರೆಂಡ್ಸ್ ಜೊತೆ ಹುಟ್ದಬ್ಬ... ಕನ್ನಡ ಮಾತಾಡ್ರಿ ಎಂದಾಗ ಎಲ್ಲ ಮಕ್ಕಳು ಇಂಗ್ಲೀಷಲ್ಲಿ ಯಾ ಶೂರ್ ಅಂದ್ವು.. ನಾನು ಹೆ..ಹೇ... ಎಂದೆ' ಎಂದು ಬರೆದುಕೊಂಡಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 10ರಂದು (10 ನವೆಂಬರ್ 2023) ಕರ್ನಾಟಕದಾದ್ಯಂತ ತೆರೆಯಲ್ಲಿ ಗರಡಿ ಚಿತ್ರ ಅಬ್ಬರಸಲಿದೆ.
ಬಿಸಿ ಪಾಟೀಲ್ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣದ 'ಗರಡಿ' ಚಿತ್ರದಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್ ಹಾಗೂ ನಟ ದರ್ಶನ್ ತೂಗುದೀಪ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.