ನಟಿ ತಾರಾ ಅನುರಾಧ ಮನೆಯಲ್ಲಿ ಚಂದನವನದ ತಾರೆಯರ ಸಂಭ್ರಮದ ಸಮಾಗಮ
ಇತ್ತಿಚೆಗಷ್ಟೇ ಡಾಕ್ಟರೇಟ್ ಪದವಿ ಪಡೆದ ನಟಿ ತಾರಾ ಅನುರಾಧ ಮನೆಯಲ್ಲಿ ನಡೆದ ಗೆಟ್ ಟು ಗೆದರ್ ಪಾರ್ಟಿ ಸಂಪ್ರದಾಯಬದ್ಧವಾಗಿ ನಡೆದಿದ್ದು, ಸಿನಿ ತಾರೆಯರು ಆಗಮಿಸಿ ಸಂಭ್ರಮ ಹೆಚ್ಚಿಸಿದ್ದರು.

ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅನುರಾಧ ಅವರಿಗೆ ಇತ್ತೀಚೆಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ (karnataka state akkamahadevi women’s university) 16 ನೇ ಘಟಿಕೋತ್ಸವದಲ್ಲಿ ಸಿನಿಮಾ ರಂಗದಲ್ಲಿ ಸಾಧನೆಗಾಗಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದರು.
ಅದೇ ಸಂಭ್ರಮದಲ್ಲಿರುವ ನಟಿ ತಾರಾ ಸಂಕ್ರಾಂತಿ ಹಬ್ಬದ ದಿನ ಬಿಗ್ ಬಾಸ್ (Bigg boss Kannada) ಮನೆಗೂ ತೆರಳಿ ಅಲ್ಲಿ ಸ್ಪರ್ಧಿಗಳಿಗೆ ಎಳ್ಳು ಬೆಲ್ಲ ನೀಡಿ, ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಜೊತೆಗೆ ಹಬ್ಬದ ದಿನ ಎಲ್ಲರೂ ಒಳ್ಳೆಯ ಮಾತುಗಳನ್ನು ಆಡುವಂತೆ ಮಾಡಿದ್ದರು.
ಅದಕ್ಕೂ ಮುನ್ನ ನಟಿ ತಾರಾ ಬರೋಬ್ಬರಿ 41 ಲಕ್ಷ ರೂಪಾಯಿಯಿಂದ 53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಮೌಲ್ಯ ಹೊಂದಿರುವ ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದರು. ಈ ಕಾರು ಲಕ್ಸುರಿ ಕಾರು ಆಗಿದ್ದು, ಆ ಸಂಭ್ರಮವನ್ನು ಸಹ ನಟಿ ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದರು.
ಇದೀಗ ನಟಿಯ ಮನೆಯಲ್ಲಿ ತಾರೆಯರ ಸಮಾಗಮ ನಡೆದಿದ್ದು, ಕನ್ನಡ ಚಿತ್ರರಂಗದ ಹಿರಿಯ, ಕಿರಿಯ ನಟಿಯರೆಲ್ಲಾ ಆಗಮಿಸಿ ಸಂಭ್ರಮಿಸಿದ್ದರು. ಇದೊಂದು ಸಂಪ್ರದಾಯ ಬದ್ಧವಾದ ಗೆಟ್ ಟು ಗೆದರ್ ಆಗಿದ್ದು, ಹಲವು ತಾರೆಯರು ಈ ಸಂಭ್ರಮದ ಫೋಟೊ , ವಿಡೀಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ಕನ್ನಡ ಸಿನಿಮಾ ನಟಿ (Kannada film actress) ಹಾಗೂ ಸದ್ಯ ಸೀರಿಯಲ್ ಗಳಲ್ಲಿ ಮಿಂಚುತ್ತಿರುವ ಅಂಜಲಿ ಸುಧಾಕರ್ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ತಾರಾ ಮನೆಯಲ್ಲಿ ಕಳೆದ ಸುಂದರ ಕ್ಷಣಗಳು, ಸ್ನೇಹವೆಂದರೆ ಜೀವನದ ಅತ್ಯಮೂಲ್ಯ ಉಡುಗೊರೆ ಎಂದು ಬರೆದುಕೊಂಡಿದ್ದಾರೆ.
ಈ ಸಮಾರಂಭದಲ್ಲಿ ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್, ಜಯಮಾಲ, ಹೇಮಾ ಚೌದರಿ, ಮಾಲಾಶ್ರೀ, ಶ್ರುತಿ, ಮಾಳವಿಕಾ, ಅಶ್ವಿನಿ ಪುನೀತ್ ರಾಜಕುಮಾರ್, ಸುಧಾರಾಣಿ, ಪ್ರಿಯಾಂಕಾ ಉಪೇಂದ್ರ ಮೊದಲಾದ ಹಿರಿಯ ನಟಿಯರು ಆಗಮಿಸಿ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿದರು.
ಇವರಲ್ಲದೇ, ನಟಿಯರಾದ ಕಾರುಣ್ಯಾ ರಾಮ್, ಭಾವನಾ ರಾವ್, ಪೂಜಾ ಗಾಂಧಿ, ಸೋನು ಗೌಡ, ಸೇರಿ ಕಿರುತೆರೆ, ಹಿರಿತೆರೆಯ ಹಲವು ನಟ ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.
ನಟಿ ಭಾವನಾ ರಾವ್ ಹಾಗೂ ಸುಧಾರಾಣಿ ಪುತ್ರಿ ನಿಧಿ ನಧೀಂ ಧೀಂ ತನ ಹಾಡಿಗೆ ಅದ್ಭುತವಾಗಿ ಭರತನಾಟ್ಯ ಮಾಡಿದ್ದಾರೆ. ಇವರ ನೃತ್ಯದ ವಿಡಿಯೋವನ್ನು ನಟಿ ಸುಧಾರಾಣಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗ್ತಿದೆ.
ತಾರಾ ಮನೆಯಲ್ಲಿ ಸಂಭ್ರಮದಿಂದ ಪೂಜೆ ನಡೆದಿದ್ದು, ನಂತರ ಬಳೆ ಶಾಸ್ತ್ರ ಕೂಡ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಟಿಯರು ಇಷ್ಟೊಂದು ಸಂಪ್ರದಾಯಬದ್ಧವಾಗಿ ಗೆಟ್ ಟು ಗೆದರ್ ಮಾಡಿರೋದನ್ನು ನೋಡಿ ಅಭಿಮಾನಿಗಳು ಕೂಡ ಸಂಭ್ರಮಿಸಿದ್ದಾರೆ.
ಅಷ್ಟೇ ಅಲ್ಲ ಕನ್ನಡ ಚಿತ್ರರಂಗದ ಹಿರಿಯ ಜನಪ್ರಿಯ ನಟಿಯರನ್ನೆಲ್ಲಾ ಜೊತೆಯಾಗಿ ಒಂದೇ ಕಡೆ ನೋಡಿ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದು, ಹೀಗೆ ಯಾವಾಗಲೂ ನೀವೆಲ್ಲಾ ಜೊತೆ ಜೊತೆಯಾಗಿರಿ ನಿಮ್ಮನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದಿದ್ದಾರೆ.