ಚಂದನವನದ ಈ ನಟಿಮಣಿಯರಿಗಿಂತ ಚೆಂದ ಇವರ ಅಕ್ಕ-ತಂಗಿಯರು, ಹೇಗಿದ್ದಾರೆ ನೋಡಿ!
ಚಂದನವನದಲ್ಲಿ ಮಿಂಚುತ್ತಿರುವ ಈ ನಟಿಮಣಿಯರಿಗಿಂತ ಅವರ ಸಹೋದರಿಯರು ಇನ್ನೂ ಚೆಂದ. ನಿತ್ಯಾ ರಾಮ್ - ರಚಿತಾ ರಾಮ್ ನಿಂದ ಹಿಡಿದು, ಮೇಘಾ ಶೆಟ್ಟಿಯವರೆಗೆ ಇಲ್ಲಿದೆ ಸಹೋದರಿಯರ ಸುಂದರ ಫೋಟೋಗಳು.
ನಿತ್ಯಾ ರಾಮ್ - ರಚಿತಾ ರಾಮ್ (Nithya Ram -Rachitha Ram) : ಈ ಸಹೋದರಿಯರು ಇಬ್ಬರೂ ಸಹ ಅದ್ಭುತ ನಟಿಯರು. ನಿತ್ಯಾ ರಾಮ್ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ರೆ, ರಚಿತಾ ರಾಮ್ ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದಾರೆ.
ಅನುಷಾ ರಂಗನಾಥ್ - ಆಶಿಕಾ ರಂಗನಾಥ್ : ಅನುಷಾ - ಆಶಿಕಾ ಇಬ್ಬರೂ ತೆರೆ ಮೇಲೆ ಮಿಂಚುತ್ತಿರುವ ನಟಿಯರು. ಆಶಿಕಾ ರಂಗನಾಥ್ (Ashika Ranganath) ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇವರ ಅಕ್ಕ ಅನುಷಾ ಒಂದೆರಡು ಸಿನಿಮಾದಲ್ಲಿ ನಟಿಸಿದ್ರೂ ಜನಪ್ರಿಯತೆ ಪಡೆದಿಲ್ಲ, ಸದ್ಯ ಮದ್ವೆಯಾಗಿ ಮ್ಯಾರೀಡ್ ಲೈಫ್ ಎಂಜಾಯ್ ಮಾಡ್ತಿದ್ದಾರೆ.
ಭವ್ಯಾ ಗೌಡ - ಕಾವ್ಯ ಗೌಡ : ಕಾವ್ಯ ಗೌಡ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದ ಅದ್ಭುತ ನಟಿ. ಸದ್ಯ ಮದುವೆ, ಗಂಡ, ಮಗು ಅಂತ ಬ್ಯುಸಿಯಾಗಿದ್ದಾರೆ. ಇವರ ಸಹೋದರಿ ಭವ್ಯಾ ಗೌಡ ಫ್ಯಾಷನ್ ಡಿಸೈನರ್.
ಅದ್ವಿತಿ ಶೆಟ್ಟಿ -ಅಶ್ವಿತಿ ಶೆಟ್ಟಿ : ಈ ಟ್ವಿನ್ ಸಹೋದರಿಯರು ಸ್ಯಾಂಡಲ್ ವುಡ್ ನಲ್ಲಿ (Sandalwood) ಮಿಂಚಿತ್ತಿರುವ ನಟಿಯರು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯಲ್ಲಿ ಇವರಿಬ್ಬರು ಮಿಂಚಿದ್ದರು.
ಪ್ರಿಯಾ ಆಚಾರ್ - ಪ್ರೀತಿ ಆಚಾರ್ : ಗಟ್ಟಿಮೇಳ ಸೀರಿಯಲ್ಲಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದ ಪ್ರಿಯಾ ಆಚಾರ್, ಈಗ ಕಾವೇರಿ ಕನ್ನಡ ಮೀಡಿಯಂನಲ್ಲಿ ನಾಯಕಿ. ಇವರ ಸಹೋದರಿ ಪ್ರಿಯಾ ಆಚಾರ್.
ಸೋನು ಗೌಡ - ನೇಹಾ ಗೌಡ : ಸೋನು ಗೌಡ ಗೌಡ ಸ್ಯಾಂಡಲ್ ವುಡ್ ನಟಿಯಾಗಿದ್ರೆ, ನೇಹಾ ಗೌಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ನಟಿ. ತಂಗಿ ನೇಹಾ ಮದುವೆಯಾಗಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ದಿವ್ಯಾ ಗೌಡ - ಭವ್ಯಾ ಗೌಡ : ಭವ್ಯಾ ಗೌಡ ಗೀತಾ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದ ನಟಿ. ಇವರ ಗೀತಾ ಅಭಿನಯಕ್ಕೆ ಜನ ಮನಸೋತಿದ್ದರು. ಇವರ ಸಹೋದರಿ ದಿವ್ಯಾ ಗೌಡ.
ಅನುಪಮಾ ಗೌಡ- ತೇಜಸ್ವಿನಿ ಗೌಡ : ಕನ್ನಡ ಕಿರುತೆರೆಯಲ್ಲಿ ನಿರೂಪಕಿ, ನಟಿಯಾಗಿ ಹಾಗೂ ಸ್ಯಾಂಡಲ್ ವುಡ್ ನಲ್ಲೂ ಗುರುತಿಸಿಕೊಂಡ ನಟಿ ಅನುಪಮಾ ಗೌಡ (Anupama Gowda), ಇವರ ಸಹೋದರಿ ತೇಜಸ್ವಿನಿ ಗೌಡ.
ಕವಿತಾ ಗೌಡ - ಮೊನಿಷಾ ಗೌಡ : ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಆಗಿ ಮಿಂಚಿದ ನಟಿ ಕವಿತಾ ಗೌಡ. ತಾಯಿಯಾಗುವ ಸಂಭ್ರಮದಲ್ಲಿದ್ದಾರೆ ನಟಿ. ಇವರ ಸಹೋದರಿ ಮೊನಿಷಾ.
ಮಾನ್ಸಿ ಜೋಶಿ -ಇಂಚರಾ ಜೋಶಿ : ಈ ಅಕ್ಕ ತಂಗಿಯರು ಸಹ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಮಾನ್ಸಿ ಜೋಶಿ ಪಾರು ಸೀರಿಯಲ್ ಸೇರಿ ಹಲವು ಕನ್ನಡ ಸೀರಿಯಲ್‌ನಲ್ಲಿ ನಟಿಸಿದ್ದರು. ಸದ್ಯ ಮಲಯಾಳಂನಲ್ಲಿ ನಟಿಸುತ್ತಿದ್ದಾರೆ. ಇವರ ಸಹೋದರಿ ಇಂಚರಾ ಕೂಡ ಆಸೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
ಪವಿತ್ರಾ - ಪಲ್ಲವಿ : ಪಾರು ಸೀರಿಯಲ್‌ನಲ್ಲಿ ಜನನಿ ಪಾತ್ರದ ಮೂಲಕ ಮನಗೆದ್ದ ನಟಿ ಪವಿತ್ರಾ. ಇವರು ತೆಲುಗು ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಇವರ ಸಹೋದರಿ ಪಲ್ಲವಿ.
ರಂಜನಿ ರಾಘವನ್ - ವೈಷ್ಣವಿ - ಸೌಧಾಮಿನಿ ರಾಘವನ್ : ಪುಟ್ಟ ಗೌರಿ ಮದುವೆ, ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದ ರಂಜನಿ (Ranjani Raghavan), ಸದ್ಯ ಸಿನಿಮಾ, ಬರವಣಿಗೆಯಲ್ಲಿ ಬ್ಯುಸಿ. ಇವರ ಇಬ್ಬರು ಮುದ್ದಿನ ಸಹೋದರಿಯರು ವೈಷ್ಣವಿ ಮತ್ತು ಸೌಧಾಮಿನಿ.
ಮೇಘಾ ಶೆಟ್ಟಿ- ಸುಷ್ಮಾ ಶೆಟ್ಟಿ- ಹಾರ್ದಿಕ ಶೆಟ್ಟಿ : ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡಿಗರ ಫೇವರಿಟ್ ನಟಿಯಾದ ಮೇಘಾ ಶೆಟ್ಟಿ ಈವಾಗ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ಬ್ಯೂಟಿ.