- Home
- Entertainment
- Sandalwood
- Ragini Dwivedi: ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ಯಾಕೆ?
Ragini Dwivedi: ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ಯಾಕೆ?
ಸ್ಯಾಂಡಲ್‌ವುಡ್‌ನ ನಟಿ ರಾಗಿಣಿ ದ್ವಿವೇದಿ ಜಮ್ಮು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಕುಟುಂಬದ ಜೊತೆ ದೇವರ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಾಗಿಣಿ ದ್ವಿವೇದಿ ಸದ್ಯ ವೈಷ್ಣೋದೇವಿ ಮಂದಿರಕ್ಕೆ ಹೋಗಿದ್ದಾರೆ. ತಂದೆ-ತಾಯಿ ಜೊತೆಗೆ ತಾಯಿ ದರ್ಶನ ಪಡೆದಿದ್ದಾರೆ. ಒಂದಷ್ಟು ಫೋಟೋ ಹಂಚಿಕೊಂಡು ಅಲ್ಲಿಯ ಅನುಭವವನ್ನೂ ಬರೆದುಕೊಂಡಿದ್ದಾರೆ.
ಕೆಲವೇ ಕೆಲವು ಫೋಟೋಗಳಲ್ಲಿ ಇಲ್ಲಿಯ ನಿಸರ್ಗ ಸೌಂದರ್ಯವನ್ನ ಸೆರೆ ಹಿಡಿಯೋಕೆ ಆಗೋದಿಲ್ಲ. ಇಲ್ಲಿ ಬಂದು ಅದನ್ನ ನೋಡಿದಾಗ ಸಿಗೋ ಆನಂದ ಬೇರೆ ಅನ್ನುವುದನ್ನ ಹೇಳಿಕೊಂಡಿದ್ದಾರೆ.
ವೈಷ್ಣೋದೇವಿ ಮಂದಿರದ ಆವರಣದಲ್ಲಿ ತಾಯಿಗೆ ರಾಗಿಣಿ ಕೈ ಮುಗಿದು ಧನ್ಯರಾಗಿದ್ದಾರೆ. ಆ ಕ್ಷಣದ ಈ ಒಂದು ಫೋಟೋ ಕೂಡ ಸುಂದರವಾಗಿಯೇ ಇಲ್ಲಿ ಕಾಣಿಸುತ್ತದೆ. ಜೊತೆಗೆ ಇಲ್ಲಿಯ ಒಂದು ನಾಯಿಯ ಜೊತೆಗೂ ರಾಗಿಣಿ ತುಂಬಾನೆ ಆಟವಾಡಿ ಖುಷಿಪಟ್ಟಿದ್ದಾರೆ.
ರಾಗಿಣಿ ದ್ವಿವೇದಿ ತಂದೆ ರಾಕೇಶ್ ಕುಮಾರ್ ಹಾಗೂ ತಾಯಿ ರೋಹಿಣಿ ಇಲ್ಲಿಗೆ ಬಂದು ತಾಯಿ ವೈಷ್ಣೋದೇವಿ ದರ್ಶನ್ ಪಡೆದಿದ್ದಾರೆ. ಎಂದಿನಂತೆ ಇಲ್ಲೂ ಹೆಚ್ಚಿನ ಸಮಯ ಕೂಡ ಕಳೆದಿದ್ದಾರೆ ಅಂತಲೂ ಹೇಳಬಹುದು.
ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ವೈಷ್ಣೋ ದೇವಿ ದೇವಸ್ಥಾನಕ್ಕೆ ನಟಿ ಭೇಟಿ ನೀಡಿದ್ದಾರೆ. ಜೈ ವೈಷ್ಣೋ ಮಾ. ನಿಮ್ಮ ಮೇಲೆ ದೈವಿಕ ಶಕ್ತಿಯು ಪ್ರಜ್ವಲಿಸುತ್ತದೆ ಎಂದು ತಿಳಿದುಕೊಳ್ಳುವುದು ಅನುಭವಿಸುವುದು ಮತ್ತೊಂದು ಭಾವನೆ ಎಂದು ರಾಗಿಣಿ ಬರೆದುಕೊಂಡಿದ್ದಾರೆ.
ರಾಗಿಣಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, 2009 ರಲ್ಲಿ 'ವೀರ ಮದಕರಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ರಾಗಿಣಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.