ಮಗನ ಜೊತೆ ವರ್ಕ್‌ ಫ್ರಂ ಹೋಮ್‌ನಲ್ಲಿ ಬ್ಯುಸಿ ರಿ‍ಷಬ್‌ ಶೆಟ್ಟಿ!

First Published 21, Mar 2020, 4:03 PM IST

ಕೊರೋನಾ ವೈರಸ್‌ನಿಂದಾಗಿ   ಈಗ ಮನೆಯಿಂದಲೇ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿದೆ.  ಹೆಚ್ಚಿನವರು ವರ್ಕ್‌ ಫ್ರಂ ಹೋಮ್‌ನಲ್ಲಿ ತೊಡಗಿದ್ದಾರೆ. ಕೊರೋನಾದಿಂದ  ಚಿತ್ರರಂಗ ಶಡ್‌ಡೌನ್‌ ಆಗಿರುವ ಕಾರಣ ನಟ ನಿರ್ದೇಶಕ ರಿಷಬ್‌ ಶೆಟ್ಟಿ ಕೂಡ  ವರ್ಕ್‌ ಫ್ರಂ ಹೋಮ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಮಗನಿಗೆ  ಎಣ್ಣೆ ಹಚ್ಚುತ್ತಿರುವ ಪೋಟೋ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ  ವರ್ಕ್‌ ಫ್ರಂ ಹೋಮ್‌ ಜೋರಾಗಿ ನೆಡೆಯು ತ್ತಿದೆ ಎಂದಿದ್ದಾರೆ ರಿಷಬ್‌. ಕೊರೋನಾ ಎಫೆಕ್ಟ್‌ನಿಂದ ಸ್ವಲ್ಪ ಬ್ರೇಕ್‌ ಸಿಕ್ಕಿರುವ ಕಾರಣ ತಮ್ಮ ಊರಿನಲ್ಲಿ ಮಗನೊಂದಿಗೆ ಕಾಲ ಕಳೆಯುತ್ತಿದ್ದಾರೆ ಸದ್ಯಕ್ಕೆ ಶೆಟ್ರು.  ರಕ್ಷಿತ್‌ ಶೆಟ್ಟಿ ಸಹ ಕಾಮೆಂಟ್‌ ಮಾಡಿದ್ದಾರೆ. ಅವರು ಶೇರ್‌ ಮಾಡಿರುವ  ಕ್ಯೂಟ್‌ ಪೋಟೋ ನೆಟ್ಟಿಗರಿಗೆ ಬಾರಿ ಲೈಕ್‌ ಆಗಿದೆ.

ಮಗ ರಣ್ವಿತ್‌ ಜೊತೆ ಹುಟ್ಟೂರಿನಲ್ಲಿ  ರಿಷಬ್‌ ಶೆಟ್ಟಿಯ ವರ್ಕ್‌ ಫ್ರಂ ಹೋಮ್‌.

ಮಗನಿಗೆ ಸ್ನಾನಕ್ಕೆ ಎಣ್ಣೆ ಹಚ್ಚುತ್ತಿರುವ ಫೋಟೋ ಅಪ್‌ಲೋಡ್‌ ಮಾಡಿರುವ ರಿಷಬ್‌.

ಊರೂರೇ ಖಾಲಿಯಾಗಿದೆ, ಆಫೀಸ್‌ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್‌ ಸಿಕ್ಕಿದೆ. ಹುಟ್ಟೂರಲ್ಲಿ ನಾನು ಬೆಳೆದಿದ್‌ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದೆನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ ವರ್ಕ್‌ ಫ್ರಂ ಹೋಮ್‌ ಜೋರಾಗಿ ನಡೀತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ನೆಟ್ಟಿಗರು ಅಪ್ಪ ಮಗನ ಈ ಕ್ಯೂಟ್‌ ಫೋಟೋಗೆ ಫಿದಾ.

ಹಲವು ತಮಾಷೆ ಕಾಮೆಂಟ್‌ಗಳು ಮತ್ತು ಕವನಗಳನ್ನು ಫೋಟೋಗೆ ಟ್ವೀಟ್‌ ಮಾಡಿದ್ದಾರೆ.

"ರಿಷಬ್‌ ಇದು ನಿನಗಾಗಿ, ನನ್ನ ಮುಗ್ಧತೆಯ ಅರಿವು ನನಗಿಲ್ಲ. ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ"  - ಗೆಳೆಯನ ಫೋಟೋಗೆ ಸಿಂಪಲ್‌ ಸ್ಟಾರ್‌  ರಕ್ಷಿತ್‌ ಶೆಟ್ಟಿಯ ಟ್ವೀಟ್‌.

ಮಗ ದೊಡ್ಡವನಾದ ಮೇಲೆ ಮಾನನಷ್ಟ ಕೇಸ್‌ ಹಾಕದಿದ್ದರೆ ಸಾಕು ಎಂದು ಕಾಮೆಂಟ್‌ ಮಾಡಿ ರಿಷಬ್‌ ಕಾಲೆಳೆದಿದ್ದಾರೆ.

ಕೊರೋನಾ ಭೀತಿಯಿಂದ ಕೆಲಸಕ್ಕೆ ಬ್ರೇಕ್‌ ತಗೊಂಡು ಫ್ಯಾಮಿಲಿಯೊಂದಿಗೆ ಕಾಲ ಕಳೆಯುತ್ತಿರುವ ಅಪ್ಪ ಮಗನ ಫೋಟೋ ಬಾರಿ ಸದ್ದು ಮಾಡುತ್ತಿದೆ.

ರಿಷಬ್‌ ಪತ್ನಿ ಪ್ರಗತಿ ಮತ್ತು ಮಗ ರಣ್ವಿತ್‌ ಜೊತೆ.

ನಟನೆ, ನಿರ್ದೇಶನದ ಜೊತೆ ಗಾಯನಕ್ಕೂ ಸೈ.

ನಟನೆ, ನಿರ್ದೇಶನದ ಜೊತೆ ಗಾಯನಕ್ಕೂ ಸೈ.

loader