Happy birthday Rishab Shetty; ಹೊಸ ಚಿತ್ರಕ್ಕೆ ನಿರ್ಮಾಪಕ ಕಮ್ ನಟ!
ಸಿನಿಮಾ ಬರಹಗಾರ, ನಟ ಅಭಿಜಿತ್ ಮಹೇಶ್ ನಿರ್ದೇಶನ.

ರಕ್ಷಿತ್ ಶೆಟ್ಟಿ‘777 ಚಾರ್ಲಿ’ ಸಿನಿಮಾ ಗೆದ್ದ ಬೆನ್ನಲ್ಲೇ ತಮ್ಮ ಪರಂವಾಃ ಸ್ಟುಡಿಯೋ ನಿರ್ಮಾಣದ ಎರಡು ಹೊಸ ಸಿನಿಮಾ ಘೋಷಿಸಿದ್ದಾರೆ.
ಒಂದು ಸಿನಿಮಾ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದರೆ ಇನ್ನೊಂದು ಸಿನಿಮಾ ನಿರ್ದೇಶನವನ್ನು ಪ್ರತಿಭಾವಂತ ಸಿನಿಮಾ ಬರಹಗಾರ, ನಟ ಅಭಿಜಿತ್ ಮಹೇಶ್ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ರಿಷಬ್ ಶೆಟ್ಟಿಹೀರೋ ಆಗಿ ನಟಿಸಲಿದ್ದಾರೆ.
ರಿಷಬ್ ಶೆಟ್ಟಿಹುಟ್ಟುಹಬ್ಬಕ್ಕೆ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಪೋಸ್ಟರ್‌ನಲ್ಲಿ ಬೆಂಗಳೂರು ಟು ಬ್ಯಾಂಕಾಕ್ ಎಂದು ಬರೆದಿರುವ ಬೋರ್ಡಿಂಗ್ ಪಾಸ್ ಇದೆ.
ಅದರಲ್ಲಿ ರಿಷಬ್ ಶೆಟ್ಟಿಯ ಪಾತ್ರದ ಹೆಸರು ಮ್ಯಾಡಿ ಎಂದು ಬರೆಯಲಾಗಿದೆ. ಇದೊಂದು ಪೂರ್ತಿ ತಮಾಷೆ ಭರಿತ ಜರ್ನಿ ಸಿನಿಮಾ ಎನ್ನಲಾಗಿದ್ದು, ಶೀಘ್ರವೇ ಚಿತ್ರೀಕರಣ ಆರಂಭವಾಗಲಿದೆ.
ಅಭಿಜಿತ್ ಮಹೇಶ್ ಈಗಾಗಲೇ ಕಿರಿಕ್ ಪಾರ್ಟಿ, ಸಹಿಪ್ರಾ ಶಾಲೆ ಕಾಸರಗೋಡು, ಕತೆಯೊಂದು ಶುರುವಾಗಿದೆ ಮುಂತಾದ ಚಿತ್ರಗಳಿಗೆ ಬರಹಗಾರನಾಗಿ ಕೆಲಸ ಮಾಡಿ ಸಿನಿಮಾ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಬರಹವಣಿಗೆ ಜೊತೆಯಲ್ಲೇ ನಟನೆ ಕೂಡ ಮಾಡುತ್ತಾರೆ. 777 ಚಾರ್ಲಿ ಸಿನಿಮಾದಲ್ಲಿ ಕಾಂಪೌಂಡರ್ ಪಾತ್ರದಲ್ಲಿ ನಟಿಸಿರುವ ಅಭಿಜಿತ್ ಸಹಜ ನಟನೆಂದೇ ಖ್ಯಾತಿ ಪಡೆದಿದ್ದಾರೆ. ಬರವಣಿಗೆ, ನಟನೆ ಎರಡನ್ನೂ ನಿಭಾಯಿಸುವ ಅಭಿಜಿತ್ ಮೇಲೆ ರಕ್ಷಿತ್ ಶೆಟ್ಟಿಅಪಾರ ಭರವಸೆ ಇಟ್ಟಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.