ನಿಖಿಲ್ ನಟನೆ ನೋಡಿ ರೇವತಿ ನಾಚಿ ನೀರಾಗಿದ್ದೇಕೆ..? ಜೋಡಿ ನೋಡಿ ನೀವಿಬ್ರೂ ಮೂವಿ ಮಾಡಿ ಅಂದ್ರು ಫ್ಯಾನ್ಸ್
ಪತ್ನಿ ರೇವತಿ ಜೊತೆಗಿನ ಸ್ಯಾಂಡಲ್‌ವುಡ್ ಯುವರಾಜನ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಪತೀನಾ ನೋಡಿ ರೇವತಿ ಅಷ್ಟೊಂದು ನಾಚಿದ್ದೇಕೆ..?
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಪತ್ನಿ ಜೊತೆಗಿನ ವಿಡಿಯೋ ವೈರಲ್ ಆಗಿದೆ.
ಸ್ಟೆಪ್ಸ್ ಮೇಲೆ ಇಬ್ಬರೂ ಕುಳಿತಿದ್ದಾಗ ನಿಖಿಲ್ ಏನೋ ಆಕ್ಷನ್ ಮಾಡ್ತಿದ್ದಂತೆ ನೋಡಿ ನಾಚಿದ್ದಾರೆ ರೇವತಿ
ಹಸಿರು ಸೀರೆಗೆ ಕೆಂಪು ಜರಿಯ ಸೀರೆ ಉಟ್ಟಿದ್ದ ರೇವತಿ ತುರುಬಿಗೆ ಮಲ್ಲಿಗೆಯೂ ಇಟ್ಟಿದ್ದರು.
ಬ್ಲಾಕ್ ಪ್ಯಾಂಟ್ ಮತ್ತು ವೈಟ್ ಕುರ್ತಾ ಶರ್ಟ್‌ನಲ್ಲಿ ನಿಖಿಲ್ ಮಿಂಚಿದ್ದಾರೆ.
ರೇವತಿ ಎಂದಿನಂತೆ ಸಿಂಪಲ್ ಆಗಿ ಕ್ಯೂಟ್ ಆಗಿ ಕಂಡು ಬಂದಿದ್ದಾರೆ.
ನಿಖಿಲ್ ಯಾವುದನ್ನೋ ಅಭಿನಯಿಸಿ ತೋರಿಸಿದಂತಿತ್ತು ವಿಡಿಯೋ.
ನಿಖಿಲ್ ವಿಡಿಯೋ ನೋಡಿದ ಜನ ನೀವಿಬ್ರೂ ಜೊತೆಯಾಗಿ ಸಿನಿಮಾ ಮಾಡಿ ಎಂದೂ ಹೇಳಿದ್ದಾರೆ.
ಕ್ಯಾಂಡಿಡ್ ವಿಡಿಯೋದಲ್ಲಿ ಮುದ್ದಾಗಿ ಮೂಡಿ ಬಂದಿದ್ದಾರೆ ಜೋಡಿ
ಪತಿಯ ಅಭಿನಯ ನೋಡಿ ನಸುನಕ್ಕ ರೇವತಿ