ಉಪೇಂದ್ರ 'ಕಬ್ಜ' ಚಿತ್ರದಿಂದ ಬರ್ತಿದೆ ಬಿಗ್ ಅಪ್‌ಡೇಟ್; ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾತಂಡ ಜನವರಿ 24ರಂದು ದೊಡ್ಡ ಅನೌನ್ಸ್ ಮಾಡುವುದಾಗಿ ಬಹಿರಂಗ ಪಡಿಸಿದೆ.
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಭಾರತದ ನಿರೀಕ್ಷೆಯ ಸಿನಿಮಾಗಳಲ್ಲಿ ಲಿಸ್ಟ್ ನಲ್ಲಿರುವ ಕಬ್ಜ ಸಿನಿಮಾದ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಕಬ್ಜ ಸಿನಿಮಾ ಪ್ರಪಂಚದಾದ್ಯಂತ ತೆರೆಗೆ ಬರುತ್ತಿದೆ.
ಇತ್ತೀಚಿಗಷ್ಟೆ ಐಎಂಡಿಬಿ ನಡೆಸಿದ 2023ರ ನಿರೀಕ್ಷೆಯ ಭಾರಿತಿಯ ಸಿನಿಮಾಗಳ ಸರ್ವೆ ಪಟ್ಟಿಯಲ್ಲಿ ಕಬ್ಜ ಕೂಡ ಇರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ನಿರ್ದೇಶಕ ಆರ್ ಚಂದ್ರು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕಬ್ಜ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಕುತೂಹಲ ಹೆಚ್ಚಿಸಿದೆ. ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದೆ. ಭಾರತ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿಯೂ ಕಬ್ಜ ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಮತ್ತಷ್ಟು ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಯಶಸ್ಸಿನ ಬಳಿಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಲು ಈ ವರ್ಷ ಕಬ್ಜ ಸಜ್ಜಾಗಿದೆ.
ಕಬ್ಜ ಚಿತ್ರ ಬಿಡುಗಡೆಯಾವಾಗ ಎಂದು ಅಭಿಮಾನಿಗಳು ಕಾಯತ್ತಿದ್ದಾರೆ. ಈ ನಡುವೆ ಸಿನಿಮಾತಂಡ ಜನವರಿ 24ರಂದು ದೊಡ್ದ ವಿಷಯವನ್ನು ಹಂಚಿಕೊಳ್ಳುವುದಾಗಿ ಬಹಿರಂಗ ಪಡಿಸಿದ್ದಾರೆ.
ಕಬ್ಜ ಸಿನಿಮಾ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಕಾಣುತ್ತಿದೆ. ಇಂಥದ್ದೊಂದು ಕನ್ನಡ ಸಿನಿಮಾ ಬೃಹತ್ ಮಟ್ಟದಲ್ಲಿ ಮೂಡಿ ಬರುತ್ತಿರೋದು ಸ್ಯಾಂಡಲ್ ವುಡ್ ಗೆ ಹೆಮ್ಮೆಯ ವಿಚಾರವಾಗಿದೆ. ಇಂಥ ಪ್ರಯತ್ನಗಳಿಗೆ ಕನ್ನಡಿಗರು ಯಾವಾಗಲು ಪ್ರಶಂಶಿಸುತ್ತಾರೆ.
ಕಬ್ಜ ರಿಲೀಸ್ ಯಾವಾಗ ಎನ್ನುವ ಕಾತರತೆಗೆ ಚಂದ್ರು & ಟೀಂ ಡೇಟ್ ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ. ಕಬ್ಜ ಗೆಲುವಿನ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಲಿ ಎಂಬುದು ಪ್ರತಿಯೊಬ್ಬ ಕನ್ನಡಿಗರ ಆಶಯ.