ಯಾರೆಲ್ಲ ಸೆಲೆಬ್ರಿಟಿಗಳು ಮತದಾನ ಮಾಡಿದ್ರು...ವೋಟ್ ಮಾಡಿದ ಸಿನಿ ಗಣ್ಯರ ಫೋಟೋಗಳು
ಕರ್ನಾಟಕ ವಿಧಾನಸಭೆ ಚುನಾವಣೆ ಇಂದು (ಮೆ 10) ನಡೆಯುತ್ತಿದೆ. ರಾಜ್ಯದ ಜನತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತ ಚಲಾಯಿಸುತ್ತಿದ್ದಾರೆ. ಸಾಮಾನ್ಯರಂತೆ ಸಿನಿ ಸೆಲೆಬ್ರಿಟಿಗಳು ಸಹ ಮತದಾನ ಮಾಡುತ್ತಿದ್ದಾರೆ. ಅನೇಕ ಗಣ್ಯರು ಬೆಳ್ಳಂಬೆಳಗ್ಗೆ ಮತದಾನ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಹಿರಿಯ ನಟ ಜಗ್ಗೇಶ್ ಇಂದು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ಅವರು ಮಲ್ಲೇಶ್ವರದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜೊತೆಗೆ ತಪ್ಪದೇ ಮತದಾನ ಮಾಡುವಂತೆ ಅವರು ಕೋರಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ದಂಪತಿ ಕೂಡ ತಮ್ಮ ಚಲಾಯಿಸಿದ್ದಾರೆ. ಇಂದು ಬೆಳಗ್ಗೆಯೇ ಉಪೇಂದ್ರ ಕತ್ರಗುಪ್ಪೆ ಮತಗಟ್ಟೆಗೆ ತೆರಳಿ ಮತದಾನಾ ಮಾಡಿದ್ದಾರೆ.
ನಟಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಕೂಡ ಮತಚಲಾಯಿಸಿದ್ದಾರೆ. ಆರ್ ಆರ್ ನಗರದಲ್ಲಿ ಇಬ್ಬರೂ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹಿರಿಯ ನಟಿ ಸುಧಾರಾಣಿ ಇಂದು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ಮಲ್ಲೇಶ್ವರದಲ್ಲಿ ನಟಿ ಸುಧಾರಾಣಿ ಅವರು ತಮ್ಮ ಅಮೂಲ್ಯ ಮತ ಚಲಾಯಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ದಂಪತಿ ಇಂದು ಬೆಳಗ್ಗೆಯೇ ಮತದಾನ ಮಾಡಿದರು. ಆರ್ ಆರ್ ನಗರದಲ್ಲಿ ಗಣೇಶ್ ಮತ್ತು ಶಿಲ್ಪಾ ತಮ್ಮ ಹಕ್ಕು ಚಲಾಯಿಸಿದರು.
ನಟಿ ಸಂಗೀತ ಶೃಂಗೇರಿ ಕೂಡ ಇಂದು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಚಾರ್ಲಿ ಸಿನಿಮಾದಲ್ಲಿ ನಟಿಸಿದ್ದ ಸಂಗೀತ ಶೃಂಗೇರಿ ಮತದಾನ ಮಾಡಿದ್ದಾರೆ.
ನಟಿ ಪ್ರೇಮಾ, ಅಯ್ಯಪ್ಪ ಮತ್ತು ಕುಟುಂಬದವರು ಇಂದು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ಪ್ರೇಮಾ ಮತ್ತು ಅಯ್ಯಪ್ಪ ಮತದಾನ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ರಕ್ಷಿತ್ ತಮ್ಮ ಹುಟ್ಟೂರಿನಲ್ಲಿ ಅಮೂಲ್ಯವಾದ ಮತ ಚಲಾಯಿಸಿದ್ದಾರೆ.
ನಟ ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿ ಇಬ್ಬರೂ ಇಂದು ಬೆಳಗ್ಗೆಯೇ ಮತಚಲಾಯಿಸಿದ್ದಾರೆ. ತಮ್ಮ ಅಮೂಲ್ಯಾ ಮತ ಚಲಾಯಿಸಿ ಎಲ್ಲರಿಗೂ ಮತದಾನ ಮಾಡಿ ಎಂದು ಹೇಳಿದ್ದಾರೆ.