ಒಂಭತ್ತನೇ ಕ್ಲಾಸಲ್ಲಿರೋವಾಗ್ಲೇ ರಾಗಿಣಿಗೆ ಲವ್ ಲೆಟರ್ ಕೊಟ್ಟಿದ್ರಂತೆ ಪ್ರಜ್ವಲ್ ದೇವರಾಜ್!
ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಸ್ಯಾಂಡಲ್ ವುಡ್ ನ ಜನಪ್ರಿಯ ತಾರ ಜೋಡಿಗಳು. ಇದೀಗ ಪ್ರಜ್ವಲ್ ತಾವು ರಾಗಿಣಿಗೆ ಪ್ರಪೋಸ್ ಮಾಡಿದ್ದು ಯಾವಾಗ ಅನ್ನೋದನ್ನ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಎಂದೇ ಖಾತಿ ಪಡೆದಿರುವ ನಟ ಪ್ರಜ್ವಲ್ ದೇವರಾಜ್ (Prajwal Devraj). ಇವರ ಪತ್ನಿ ರಾಗಿಣಿ ಕಥಕ್ ಡ್ಯಾನ್ಸರ್. ಹದಿಹರೆಯದಲ್ಲೇ ಲವ್ ಮಾಡಿ ಮದುವೆಯಾಗಿರೋ ಮುದ್ದಾದ ಜೋಡಿ ಇದು.
ಪ್ರಜ್ವಲ್ ಮತ್ತು ರಾಗಿಣಿ ಹಲವಾರು ಬಾರಿ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿದ್ದಾರೆ. ಇದೀಗ ಮತ್ತೊಮ್ಮೆ ಚಿತ್ತಾರ ಅವಾರ್ಡ್ ಸಮಾರಂಭದಲ್ಲಿ(Chittara Award) ತಮ್ಮ ಪ್ರೀತಿ ಆರಂಭವಾದ ಬಗ್ಗೆ ಹೇಳಿದೆ. ಇವರದ್ದು ಇಂದು ನಿನ್ನೆಯ ಪ್ರೀತಿ ಅಲ್ಲ, 20 ವರ್ಷಗಳಿಂದಲೂ ಇವರು ಲವ್ ಮಾಡಿದ್ದರು.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಚಿತ್ತಾರ ಅವಾರ್ಡ್ ಕಾರ್ಯಕ್ರಮದ ಪ್ರೊಮೋ ರಿಲೀಸ್ ಆಗಿದ್ದು, ಪ್ರಶಸ್ತಿ ಗೆದ್ದಿರುವ ಪ್ರಜ್ವಲ್ ದೇವರಾಜ್ ಅವರಿಗೆ ನಿರೂಪಕ ನಿರಂಜನ್ ದೇಶಪಾಂಡೆ, ನಿಮ್ಮ ಲವ್ ಸ್ಟೋರಿ ಬಗ್ಗೆ ಹೇಳಿ ಎಂದು ಹೇಳಿದಾಗ ಬಳಿ ಇದ್ದ ಪ್ರಜ್ವಲ್ ಪತ್ನಿ ರಾಗಿಣಿ (Raagini Prajwal) ಸ್ಕೂಲ್ ಅಲ್ಲಿ ಇರೋವಾಗ್ಲೇ ತಮ್ಮ ಲವ್ ಸ್ಟೋರಿ ಶುರುವಾಗಿರೋ ಬಗ್ಗೆ ಹೇಳಿದ್ದಾರೆ.
ಪ್ರಜ್ವಲ್ ಮೊದಲ ಬಾರಿ ತಮಗೆ ಪ್ರಪೋಸ್ ಮಾಡಿರೋದನ್ನು ನೆನಪಿಸಿಕೊಂಡ ರಾಗಿಣಿ, ಪ್ರಜ್ವಲ್ ಒಂಭತ್ತನೇ ಕ್ಲಾಸಲ್ಲಿ ಹಾಗೂ ರಾಗಿಣಿ 6ನೇ ಕ್ಲಾಸಲ್ಲಿ ಇರೋವಾಗ್ಲೇ ಪ್ರಪೋಸ್ ಮಾಡಿದ್ರಂತೆ. ನೋಟ್ ಬುಕ್ ಅಲ್ಲಿ ಪೂರ್ತಿಯಾಗಿ ಐ ಲವ್ ಯೂ ರಾಗಿಣಿ ಎಂದು ಬರೆದು ರಾಗಿಣಿಗೆ ಕೊಟ್ಟಿದ್ರಂತೆ ಪ್ರಜ್ವಲ್.
ಡ್ಯಾನ್ಸ್ ನಿಂದ ಇಬ್ಬರ ಲವ್ ಸ್ಟೋರಿ (love story) ಶುರು. ರಾಗಿಣಿ ಮತ್ತು ಪ್ರಜ್ವಲ್ ಇಬ್ಬರೂ ಸಹ ಇಮ್ರಾನ್ ಸರ್ದಾರಿಯಾ ಅವರ ಡ್ಯಾನ್ಸ್ ಕ್ಲಾಸಿಗೆ ಹೋಗ್ತಿದ್ರಂತೆ. ಅಲ್ಲೇ ಇವರಿಬ್ಬರಿಗೆ ಪರಿಚಯವಾಗಿದ್ದು, ಪರಿಚಯದಿಂದ ಸ್ನೇಹ ಶುರುವಾಯ್ತು, ಇವರಿಬ್ಬರ ಫ್ರೆಂಡ್ಸ್ ಗ್ರೂಪ್ ಕೂಡ ಒಂದೇ ಆಗಿದ್ದು, ಹಾಗಾಗಿಯೇ ಹೆಚ್ಚಾಗಿ ಜೊತೆಯಲ್ಲೇ ಇದ್ದ ಈ ಜೋಡಿಯ ಮಧ್ಯೆ ಪ್ರೀತಿ ಕೂಡ ಶುರುವಾಯ್ತಂತೆ.
ಬಳಿಕ ಪ್ರಜ್ವಲ್ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳೊಕೆ ಆರಂಭಿಸಿದ್ರು, ರಾಗಿಣಿ ಮಾಡೆಲಿಂಗ್, ಡ್ಯಾನ್ಸ್, ಫಿಟ್ನೆಸ್ ಟ್ರೈನರ್ ಆಗಿ ವೃತ್ತಿ ಜೀವನ ಕಂಡು ಕೊಂಡರು. ರಾಗಿಣಿ ನಟಿಯಾಗಿಯೂ ಗುರುತಿಸಿಕೊಂಡಿದ್ದು, ಸ್ಯಾಂಡಲ್ವುಡ್ ಸಿನಿಮಾ, ಶಾರ್ಟ್ ಫಿಲಂಗಳಲ್ಲೂ ಇವರು ನಟಿಸಿದ್ದಾರೆ. ಜೊತೆಗೆ ತಮ್ಮ ಹದಿಹರೆಯದ ಲವ್ ಸ್ಟೋರಿನೂ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ.
ಪ್ರೀತಿಸುತ್ತಿದ್ದ ಈ ಜೋಡಿ ಅಕ್ಟೋಬರ್ 25, 2015ರಂದು ತಮ್ಮ ಕುಟುಂಬದ ಸಮ್ಮತಿಯೊಂದಿಗೆ ದಾಂಪತ್ಯ ಜೀವನಕ್ಕೆ (Married LIfe) ಕಾಲಿಟ್ಟಿದ್ದರು. ಚಿತ್ತಾರ ಅವಾರ್ಡ್ ಕಾರ್ಯಕ್ರಮದಲ್ಲೂ ಜೊತೆಯಾಗಿ ಈ ಜೋಡಿ ಕಾಣಿಸಿಕೊಂಡಿದ್ದು, ಪ್ರಜ್ವಲ್ ತಮಗೆ ಸಿಕ್ಕಿದ ಪ್ರಶಸ್ತಿಯನ್ನು ತಮ್ಮ ಪತ್ನಿ ರಾಗಿಣಿಯ ಕೈಗೆ ನೀಡಿದ ಪ್ರಜ್ವಲ್, ಅಭಿಮಾನಿ ದೇವರುಗಳು ತಮಗೆ ನೀಡಿದಂತಹ ಪ್ರಶಸ್ತಿಯನ್ನು, ನನಗೆ ಆ ದೇವರು ನೀಡಿದ ಪ್ರಶಸ್ತಿಗೆ ನೀಡುತ್ತೇನೆ ಎಂದು ಹೇಳೋ ಮೂಲಕ ಪತ್ನಿಯ ಹಣೆಗೆ ಸಿಹಿ ಮುತ್ತನ್ನಿತ್ತರು.