- Home
- Entertainment
- Sandalwood
- ಬಿಳಿ ಗೌನಲ್ಲಿ ಮಿಂಚಿದ ರಾಧಿಕಾ ಪಂಡಿತ್... ನಿಮಗೆ ವಯಸ್ಸೇ ಆಗಲ್ವಾ ಕೇಳ್ತಿದ್ದಾರೆ ಫ್ಯಾನ್ಸ್
ಬಿಳಿ ಗೌನಲ್ಲಿ ಮಿಂಚಿದ ರಾಧಿಕಾ ಪಂಡಿತ್... ನಿಮಗೆ ವಯಸ್ಸೇ ಆಗಲ್ವಾ ಕೇಳ್ತಿದ್ದಾರೆ ಫ್ಯಾನ್ಸ್
ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳು ಪ್ರೀತಿಯ ಸುರಿಮಳೆ ಸುರಿಸಿದ್ದಾರೆ.

ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಾಧಿಕಾ ಪಂಡಿತ್ (Radhika Pandit) ಮದುವೆಯಾದ ಬಳಿಕ ಸಿನಿಮಾಗಳಿಂದ ದೂರವೇ ಉಳಿದಿದ್ದರು, ಸಿನಿಮಾ ಯಾಕೆ ಕ್ಯಾಮೆರಾಗಳಿಂದಲೇ ದೂರ ಉಳಿದಿದ್ದರು. ಆದರೆ ಇದೀಗ ವರ್ಷಗಳ ಬಳಿಕ ನಟಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ಮೂಲಕ ಚರ್ಚೆಯಲ್ಲಿದ್ದರು. ಎಷ್ಟೋ ವರ್ಷಗಳ ನಂತರ ರಾಧಿಕಾ ಪಂಡಿತ್ ಅವರನ್ನು ಈ ರೀತಿಯಾಗಿ ನೋಡಿ ಜನ ಖುಷಿ ಪಟ್ಟಿದ್ದರು.
ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ (social media)ತಮ್ಮ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದರು. ತಮ್ಮ ಫ್ಯಾಮಿಲಿ ಫೋಟೊಗಳನ್ನು, ಮಕ್ಕಳ ಜೊತೆಗಿನ ಫೋಟೊಗಳು, ಯಶ್ ಜೊತೆಗಿನ ಫೋಟೊ, ಟ್ರಾವೆಲ್ ಫೋಟೊ ಜೊತೆಗೆ ಹಬ್ಬಗಳ ಸಂಭ್ರಮದ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದರು.
ಇದೀಗ ರಾಧಿಕಾ ಪಂಡಿತ್ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಸುಂದರವಾದ ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಬಿಳಿ ಬಣ್ಣದ ಲೆಹೆಂಗಾ ಧರಿಸಿ ವಿವಿಧ ಪೋಸ್ ನೀಡಿರುವ ಸ್ಯಾಂಡಲ್ ವುಡ್ ಬ್ಯೂಟಿ ಅಪ್ಸರೆಯಂತೆ ಕಾಣುತ್ತಿದ್ದಾರೆ.
ಅಭಿಮಾನಿಗಳು ಸ್ಯಾಂಡಲ್ ವುಡ್ ಕ್ವೀನ್ (Sandalwood Queen), ಇವರೇ ನಿಜವಾದ ಸಂತೂರ್ ಮಮ್ಮಿ, ಭೂಮಿಯಲ್ಲಿರೋ ಅಪ್ಸರೆಯರು ಹೀಗೆ ಕಾಣಿಸೋದು, ನಮ್ಮ ಅತ್ತಿಗೆ ಅಂತಾ ಹೆಣ್ಣು ಈ ಜಗತ್ತಲ್ಲಿ ಹುಡುಕಿದರೂ ಸಿಗಲ್ಲ, ಅವರು ದೇವತೆ ನಮಗೆ. ಮೋಸ್ಟ್ ಬ್ಯೂಟಿಫುಲ್ ವುಮೆನ್, ಮೇಡಂ ನಿಮಗೆ ವಯಸ್ಸೇ ಆಗಲ್ವಾ ಅಂತಾನೂ ಕೇಳಿದ್ದಾರೆ.
ಇವರನ್ನ ನೋಡಿದ್ರೆ ಯಾರನ್ನು 40 ವರ್ಷ ಆಯ್ತು ಅಂತಾ ಹೇಳ್ತಾರಾ, ಎವರ್ ಗ್ರೀನ್ ಬ್ಯೂಟಿ ರಾಧಿಕಾ ಪಂಡಿತ್ ಎನ್ನುತ್ತಿದ್ದಾರೆ ಜನ. ಅಷ್ಟೇ ಅಲ್ಲ ರಾಧಿಕಾ ಪಂಡಿತ್ ಅವರನ್ನ ಮತ್ತೆ ಸಿನಿಮಾದಲ್ಲಿ ನೋಡಲು ಜನ ಕಾಯುತ್ತಿದ್ದು, ಆದಷ್ಟು ಬೇಗ ಗುಡ್ ನ್ಯೂಸ್ ಕೊಡಿ ಎನ್ನುತ್ತಿದ್ದಾರೆ. ಇನ್ನು ಯಾವಾಗ ರಾಧಿಕಾ ಪಂಡಿತ್ ಕಂ ಬ್ಯಾಕ್ ಮಾಡ್ತಾರೆ ಕಾದು ನೋಡಬೇಕು.