ರಾಯಲ್ ಲುಕ್ ಮೂಲಕ ಮೋಡಿ ಮಾಡಿದ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್… ಹೊಸ ಸಿನಿಮಾಗೆ ರೆಡಿನಾ?
ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೊ, ಟ್ರಾವೆಲ್ ಫೋಟೊಗಳ ಮೂಲಕ ಸದ್ದು ಮಾಡುವ ಸ್ಯಾಂಡಲ್’ವುಡ್ ಬೆಡಗಿ ರಾಧಿಕಾ ಪಂಡಿತ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಸಖತ್ ಖುಷಿ ಪಡ್ತಿದ್ದಾರೆ.
ಚಂದನವನದ ಸಿಂಡ್ರೆಲಾ ಅಂತಾನೆ ಜನಪ್ರಿಯತೆ ಪಡೆದಿರುವ ಕನ್ನಡಿಗರ ನೆಚ್ಚಿನ ನಟಿ ರಾಧಿಕಾ ಪಂಡಿತ್ (Radhika Pandit), ಮದುವೆ ಮಕ್ಕಳು ಆದ ನಂತರ ಸಿನಿಮಾಗಳಿಂದ ದೂರ ಉಳಿದು, ಮಕ್ಕಳ ಜೊತೆ ಫ್ಯಾಮಿಲಿ ಟೈಮ್ ಎಂಜಾಯ್ ಮಾಡ್ತಿದ್ದಾರೆ. ಅಭಿಮಾನಿಗಳು ಇವತ್ತಿಗೂ ಕೂಡ ಮೇಡಂ ಯಾವಾಗ ಕಂ ಬ್ಯಾಕ್ ಮಾಡ್ತೀರಾ ಅಂತ ಕೇಳ್ತಾನೆ ಇರ್ತಾರೆ.
ರಾಕಿಂಕ್ ಸ್ಟಾರ್ ಯಶ್ (Rocking Star Yash) ಜೊತೆ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ರಾಧಿಕಾ ಪಂಡಿತ್ 2019ರಲ್ಲಿ ಕೊನೆಯದಾಗಿ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಸಿನಿಮಾದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು, ಗಂಡನ ಸಕ್ಸಸ್ ಗೆ ಬೆನ್ನೆಲುಬಾಗಿ ನಿಂತರು, ಜೊತೆಗೆ ಮಕ್ಕಳ ಪಾಲನೆಯಲ್ಲಿ ತಮ್ಮನ್ನ ತೊಡಗಿಸಿಕೊಂಡರು.
ಇದೀಗ ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನ ಶೇರ್ ಮಾಡಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದ್ದು, ಅದರ ಜೊತೆ ಅಚ್ಚರಿಯನ್ನು ಸಹ ಮೂಡಿಸಿದೆ. ರಾಧಿಕಾ ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೊ ಮತ್ತು ಟ್ರಾವೆಲ್ ಫೋಟೊಗಳನ್ನೇ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಶೇರ್ ಮಾಡುತ್ತಿರುತ್ತಾರೆ. ತಮ್ಮದೇ ಫೋಟೊ ಶೂಟ್ ಮಾಡಿ ನಟಿ ಅಪ್ ಲೋಡ್ ಮಾಡಿದ್ದೇ ಕಡಿಮೆ.
ಇದೀಗ ರಾಧಿಕಾ ಪಂಡಿತ್ ಗ್ರ್ಯಾಂಡ್ ಆಗಿರುವ ಲೆಹೆಂಗಾ ಧರಿಸಿ, ಮೈತುಂಬಾ ಜ್ಯುವೆಲ್ಲರಿ ಧರಿಸಿ, ರಾಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಕೇಸರಿ ಬಣ್ಣದ ರೇಷ್ಮೆ ಸೀರೆಯುಟ್ಟು, ಕೆಂಪು ಬಣ್ಣದ ಗೌನ್ ತೊಟ್ಟು ಫೋಟೊ ಶೂಟ್ ಮಾಡಿಸಿದ್ದು, ಸ್ಯಾಂಡಲ್ ವುಡ್ ಮಸ್ತಾನಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ರಾಧಿಕಾ ಪಂಡಿತ್ ಹೊಸ ಫೋಟೊಗಳು (photoshoot) ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನೇ ನೀಡಿದೆ. ಕಾಮೆಂಟ್ ಗಳು, ಲೈಕ್ ಗಳ ಸುರಿಮಳೇಯೇ ಸುರಿದಿದೆ. ತುಂಬಾನೆ ಸುಂದರವಾಗಿ ಕಾಣಿಸ್ತೀರಾ, ಎಲ್ಲಾ ಉಡುಗೆಗಳು ನಿಮಗಾಗಿಯೇ ಮಾಡಿಸಿದಂತಿದೆ. ನಮ್ಮ ಮುದ್ದು ರಾಧೆ, ಎವರ್ ಗ್ರೀನ್ ಬ್ಯೂಟಿ, ಸೌಂದರ್ಯಕ್ಕೆ ಅರ್ಥವೇ ನೀವು ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಅಷ್ಟೇ ಅಲ್ಲ, ನೀವು ಯಾವಾಗ ಕಂ ಬ್ಯಾಕ್ ಮಾಡ್ತೀರಿ ಅಂತಾ ನಾವು ಕಾಯ್ತ ಇದ್ದೀವಿ, ನಿಮ್ಮನ್ನ ನೋಡೋದೆ ಕಣ್ಣಿಗೆ ಹಬ್ಬ, ಕನ್ನಡ ಚಿತ್ರರಂಗದ ಮುತ್ತು ನೀವು. ರಾಯಲ್ ಕ್ವೀನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟಲ್ಲಿ ಸ್ಯಾಂಡಲ್’ವುಡ್ ಕ್ವೀನ್ ನ್ನು ಬಹಳ ದಿನಗಳ ನಂತರ ನೋಡಿದ ಖುಷಿಯಲ್ಲಿದ್ದಾರೆ ಜನ.
ರಾಧಿಕಾ ಪಂಡಿತ್ ಹೊಸ ಫೋಟೊ ನೋಡಿ ನಟಿ ಮತ್ತೆ ಸ್ಯಾಂಡಲ್ ವುಡ್ ಗೆ (Sandalwood) ಬರ್ತಿದ್ದಾರ ಎನ್ನುವ ಗುಸು ಗುಸು ಕೂಡ ಆರಂಭವಾಗಿದೆ. ಆದ್ರೆ ನಿಜವಾಗಿ ರಾಧಿಕಾ ಪಂಡಿತ್ ಜ್ಯುವೆಲ್ಲರಿ ಜಾಹೀರಾತು ಒಂದಕ್ಕಾಗಿ ಈ ರೀತಿ ರೆಡಿಯಾಗಿದ್ದು, ಹಲವು ಸಮಯದ ನಂತರ ನಟಿ ಕ್ಯಾಮೆರಾ ಮುಂದೆ ಈ ರೀತಿಯಾಗಿ ಕಾಣಿಸಿಕೊಂಡಿದ್ದಾರೆ.