ಅಭಿಮಾನಿಯ ಐಷಾರಾಮಿ ಕಾರಿನ ಮೇಲೆ ಆಟೋಗ್ರಾಫ್ ಹಾಕಿದ ರಚಿತಾ ರಾಮ್; ಫೋಟೋ ವೈರಲ್!
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ರಚಿತಾ ರಾಮ್ ವಿಡಿಯೋ. ತಪ್ಪದೆ ಅಭಿಮಾನಿಗಳು ಭೇಟಿ ಮಾಡುವ ನಟಿ.....
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಕೈ ತುಂಬಾ ಸಿನಿಮಾಗಳಿದ್ದು ಸಖತ್ ಬ್ಯುಸಿಯಾಗಿದ್ದಾರೆ. ಆದರೂ ಅಭಿಮಾನಿಗಳಿಗೋಸ್ಕರ ಸಮಯ ಮಾಡಿಕೊಳ್ಳುತ್ತಾರೆ.
ಹೌದು! ಆದಷ್ಟು ಪ್ರತಿ ವೀಕೆಂಡ್ ಅಭಿಮಾನಿಗಳನ್ನು ರಾಜರಾಜೇಶ್ವರಿ ನಿವಾಸದ ಬಳಿ ರಚಿತಾ ರಾಮ್ ಭೇಟಿ ಮಾಡುತ್ತಾರೆ. ತಮ್ಮ ಸಮಯವನ್ನು ಅವರಿಗೆಂದು ಮೀಸಲಿಡುತ್ತಾರೆ.
ಪ್ರತಿ ವಾರದಂತೆ ಈವಾರವೂ ಅಭಿಮಾನಿಯೊಬ್ಬ ತಮ್ಮ ಬಿಳಿ ಬಣ್ಣದ ಐಷಾರಾಮಿ ಕಾರನ್ನು ತಂದು ರಚ್ಚು ಮನೆ ಮುಂದೆ ನಿಲ್ಲಿಸಿ ಗಂಟೆಗಟ್ಟಲೆ ಕಾದಿದ್ದಾನೆ.
ಅಭಿಮಾನಿ ಪ್ರೀತಿಗೆ ಸೋನು ರಚಿತಾ ರಾಮ್ ಕಾರಿನ ಬಾನೆಟ್ ಮೇಲೆ ಹಾಗೂ ಕಾರಿನ ಡ್ಯಾಷ್‌ಬೋರ್ಡ್ ಮೇಲೆ ತಮ್ಮ ಆಟೋಗ್ರಾಫ್ ಹಾಕಿದ್ದಾರೆ.
ವಾರ ವಾರವೂ ಹೀಗೆ ಅಭಿಮಾನಿಗಳು ತಮ್ಮ ಹೊಸ ಕಾರು, ಬೈಕ್ ಅಥವಾ ಆಟೋ ಮೇಲೆ ರಚ್ಚು ಫೋಟೋ ಹಾಕಿಸಿ ತಪ್ಪದೆ ಆಟೋಗ್ರಾಫ್ ಪಡೆಯುತ್ತಾರೆ. ಎಲ್ಲೆಡೆ ಈ ವಿಡಿಯೋ ವೈರಲ್ ಆಗುತ್ತದೆ.
ಸಾಮಾನ್ಯವಾಗಿ ಸ್ಟಾರ್ ನಗರ ಮನೆ ಮುಂದೆ ಹೀಗೆ ಜನರು ಸಾಲು ಸಾಲಾಗಿ ನಿಲ್ಲುತ್ತಾರೆ ಇದೇ ಮೊದಲು ನಾಯಕಿ ಮನೆ ಮುಂದೆ ಜನರು ಬರುತ್ತಿರುವುದು. ಹೀಗಾಗಿ ರಚಿತಾ ರಾಮ್‌ನ ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ.