ಮದುವೆ ಮುಗಿಯುತ್ತಿದ್ದಂತೆ ಹನಿಮೂನ್ ಗಾಗಿ ಬ್ಯಾಂಕಾಕ್ ಗೆ ಹಾರಿದ ರಾಣಾ- ರಕ್ಷಿತಾ
ನಟಿ ರಕ್ಷಿತಾ ಅವರ ಸಹೋದರ ರಾಣಾ ಮದುವೆ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು, ಇದೀಗ ನವ ಜೋಡಿ ಹನಿಮೂನ್ ಗಾಗಿ ಬ್ಯಾಂಕಾಕ್ ಗೆ ಹಾರಿದ್ದಾರೆ.

ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ನಟಿ ರಕ್ಷಿತಾ (Rakshitha Prem) ಅವರ ಸಹೋದರ ರಾಣಾ ಅವರ ವಿವಾಹವು ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು ʼಏಕ್ ಲವ್ ಯಾʼ ಸಿನಿಮಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟ ರಾಣಾ ರಕ್ಷಿತಾ ಅವರ ಕೈಹಿಡಿದಿದ್ದಾರೆ.
ರಾಣಾ (Raana) ಮದುವೆಯಾಗಿರುವ ಹುಡುಗಿ ಹೆಸರು ಕೂಡ ರಕ್ಷಿತಾ ಅನ್ನೋದು ವಿಶೇಷ. ರಾಣಾ - ರಕ್ಷಿತಾ ಇಬ್ಬರೂ ಪರಸ್ಪರ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಪ್ರೀತಿಗೆ ಹೊಸ ಅರ್ಥವನ್ನು ನೀಡಿದ್ದಾರೆ. ಈ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿದ್ದು, ಮದುವೆಗೆ ಚಿತ್ರರಂಗದ ಗಣ್ಯರು ಆಗಮಿಸಿ ಹರಸಿದ್ದರು.
ರಾಣಾ ಮದುವೆಯಾಗಿರುವ ರಕ್ಷಿತಾ ಕೇಸರ್ಕರ್ (Rakshitha Kesarkar) ಅವರು ಪ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆ ದಿನ ಸಹೋದರನ ಪತ್ನಿಯ ಬಗ್ಗೆ ಮಾತನಾಡಿದ್ದ ನಟಿ ರಕ್ಷಿತಾ “ರಕ್ಷಿತಾ ತುಂಬಾ ಒಳ್ಳೆಯ ಹುಡುಗಿ. ಅವರಿಬ್ಬರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ರಾಣಾ ತನ್ನ ವೃತ್ತಿ ಜೀವನದಲ್ಲಿ ಸೆಟಲ್ ಆಗಬೇಕು ಅಂತ ಆಕೆ ಕಾದಿದ್ದಾಳೆ. ಈಗ ಇಬ್ಬರು ಮದುವೆಯಾಗಿದ್ದಾರೆ ಎಂದಿದ್ದರು.
ರಾಣಾ ಕೂಡ ತಮ್ಮ ಮನದರಸಿಯ ಬಗ್ಗೆ ಮಾತನಾಡಿ 'ಮದುವೆಯಾಗುವ ಹುಡುಗಿ ಅಂದ್ರೆ ಹಾಗಿರಬೇಕು ಹೀಗಿರಬೇಕು ಎಂದು ಯೋಚಿಸಿದ್ದೆನೋ. ಆ ಗುಣಗಳೇಲ್ಲವೂ ನಾನು ಪ್ರೀತಿಸಿದ ಹುಡುಗಿ ರಕ್ಷಿತಾಳಲ್ಲಿತ್ತು, ಹಾಗಾಗಿ ನನ್ನ ಪ್ರೀತಿಯ ಪರೀಕ್ಷೆಯಲ್ಲಿ ರಕ್ಷಿತಾ ಪಾಸ್ ಆಗಿದ್ದಾಳೆ. ಹೆಚ್ಚು ದಿನ ನಮ್ಮ ಪ್ರೀತಿಯ ವಿಚಾರವನ್ನು ಮುಚ್ಚಿಟ್ಟಿರಲಿಲ್ಲ. ನಾನೇ ರಕ್ಷಿತಾಗೆ ಪ್ರಪೋಸ್ ಮಾಡಿದ್ದು, ಆಕೆ ತಮಗಾಗಿ ಇಷ್ಟು ವರ್ಷ ಕಾದಿರೋದಾಗಿ ತಿಳಿಸಿದ್ದರು.
ಇದೀಗ ಮದುವೆಯಾಗಿರುವ ನವ ಜೋಡಿ ಹನಿಮೂನ್ ಗಾಗಿ ಬಾಂಕಾಕ್ ಗೆ (Bangkok) ಹಾರಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ. ಇಬ್ಬರು ಜೊತೆಯಾಗಿರುವ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಕ್ಷಿತಾ. ಜೊತೆ ಹೆಲೋ ಹಸ್ಬಂಡ್ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ರಕ್ಷಿತಾ ಕೈಯಲ್ಲಿ ಮೆಹೆಂದಿ, ಕುತ್ತಿಗೆಯಲ್ಲಿ ತಾಳಿ ಇದ್ದು, ಸಖತ್ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ.
ಇನ್ನು ಸಿನಿಮಾದ ಬಗ್ಗೆ ಹೇಳೋದಾದರೆ ರಾಣಾ ಮುಂದೆ ತರುಣ್ ಸುಧೀರ್ (Tharun Sudhir) ನಿರ್ಮಾಣ ಮಾಡುತ್ತಿರುವ ಏಳು ಮಲೆಯ ಎಂಟೆದೆಯ ಹುಡುಗ, ಎದೆ ನಡುಗಿಸಿದ ಈ ಪ್ರೇಮ ಕಥೆಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಸಿನಿಮಾದಲ್ಲಿ ರಾಣಾಗೆ ನಾಯಕಿಯಾಗಿ ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ನಟಿಸಲಿದ್ದಾರೆ.