ಗಾಜನೂರಿನಲ್ಲಿ ಪುನೀತ್ ರಾಜ್‌ಕುಮಾರ್; ದಿಢೀರ್ ಭೇಟಿಗೆ ಕಾರಣವಿದೆ!
ಸದಾ ಬಾಲ್ಯದ ದಿನಗಳನ್ನು ನೆನೆದು ಗಾಜನೂರಿನ ಬಗ್ಗೆ ಮಾತನಾಡುವ ಪುನೀತ್ ರಾಜ್‌ಕುಮಾರ್, ಕಳೆದ ಮೂರು ದಿನಗಳಿಂದ ಅಲ್ಲಿಯೇ ವಾಸವಿದ್ದಾರೆ. ಆದರೆ ಇದಕ್ಕೊಂದು ಕಾರಣವಿದೆ...
ಫೋಟೋಕೃಪೆ: ಲಕ್ಷ್ಮಣ ಗೋಪಾಲ್
ಕಳೆದ ಮೂರು ದಿನಗಳಿಂದ ಗಾಜನೂರಿನಲ್ಲಿ ವಾಸವಿರುವ ಪುನೀತ್ ರಾಜ್‌ಕುಮಾರ್.
ಅಣ್ಣಾವ್ರು ಆಡಿ ಬೆಳೆದ ಹಳ್ಳಿ ಮನೆಗೆ ಭೇಟಿ ನೀಡಿ, ಸುತ್ತಮುತ್ತ ಓಡಾಡಿದ್ದಾರೆ.
ಅದರೆ ಪುನೀತ್ ಬ್ಯುಸಿ ಶೆಡ್ಯೂಲ್‌ನಲ್ಲಿ ಗಾಜನೂರಿನಲ್ಲಿ ಸಮಯ ಕಳೆಯಲು ಕಾರಣವಿದೆ.
ವನ್ಯಜೀವಿಗಳ ಕುರಿತು ಮಾಡಲಾಗುತ್ತಿರುವ ಸಾಕ್ಷ್ಯ ಚಿತ್ರದ ಚಿತ್ರೀಕರಣಕ್ಕೆಂದು ಪುನೀತ್ ಗಾಜನೂರಿನಲ್ಲಿದ್ದಾರೆ.
ಪ್ರತಿ ಸಲ ಗಾಜನೂರಿಗೆ ಭೇಟಿ ಕೊಟ್ಟಾಗ ಪುನೀತ್ ಅತ್ತೆ ನಾಗಮ್ಮ (ರಾಜ್‌ಕುಮಾರ್ ತಂಗಿ) ಜೊತೆ ಸಮಯ ಕಳೆಯುತ್ತಾರೆ.
ಈ ಸಲವೂ ನಾಗಮ್ಮನವರನ್ನು ಭೇಟಿ ಮಾಡಿ ಮಾತನಾಡಿಸಿದ್ದಾರೆ.
ಯುವರತ್ನ ಸಿನಿಮಾ ಹಾಡುಗಳು ಬಿಡುಗಡೆಯಾಗಿದ್ದು, ಸಿನಿಮಾ ರಿಲೀಸ್‌ಗೆ ಚಿತ್ರತಂಡ ಹಾಗೂ ಅಭಿಮಾನಿಗಳು ಕಾಯುತ್ತಿದ್ದಾರೆ.