- Home
- Entertainment
- Sandalwood
- ರೋಮ್‌ನಲ್ಲಿ 'ಪ್ಯಾರ್‌ಗೆ ಆಗ್ಬಿಟ್ಟೈತೆ' ಪಾರುಲ್ ಯಾದವ್: ಸಂದೇಶ ತುಂಬಿದ ಫೋಟೋಶೂಟ್ ವೈರಲ್
ರೋಮ್‌ನಲ್ಲಿ 'ಪ್ಯಾರ್‌ಗೆ ಆಗ್ಬಿಟ್ಟೈತೆ' ಪಾರುಲ್ ಯಾದವ್: ಸಂದೇಶ ತುಂಬಿದ ಫೋಟೋಶೂಟ್ ವೈರಲ್
ಪಾರುಲ್ ಗ್ರೀಸ್‌ನ ಅನೇಕ ಪ್ರಾಚೀನ ತಾಣಗಳಿಗೆ ಭೇಟಿ ನೀಡಿದ್ದಾರೆ. ಪುರಾತನ ಚರ್ಚ್‌ಗಳು, ಟವರ್ ಆಫ್ ಪಿಸಾ, ಟ್ರೇವಿ ಕಾರಂಜಿ ಮೊದಲಾದೆಡೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ವಿಶ್ವ ಸಂಚಾರಿಯಾಗಿರುವ ಪಾರುಲ್ ಯಾದವ್ ಇದೀಗ ಗ್ರೀಸ್‌ನಲ್ಲಿದ್ದಾರೆ. ರೋಮ್‌ನ ಜಗತ್ಪ್ರಸಿದ್ಧ ಕೊಲೊಸಿಯಮ್‌ಗೆ ಭೇಟಿ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ.
ಕಣ್ಣಿಗೆ ಸೊಗಸಾಗಿ ಕಾಣುವ ಎಲ್ಲವೂ ಪರಿಪೂರ್ಣ ಸೌಂದರ್ಯ ಹೊಂದಿರುವುದಿಲ್ಲ. ಈ ನಾನು ನಿಂತಿರುವ ಈ ಕೊಲೊಸಿಯಮ್ ಅನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು,
ಅಷ್ಟು ಅದ್ಭುತವಾದ ವಾಸ್ತುಶಿಲ್ಪ ಇದರದ್ದು. ಆದರೆ ಈ ವಾಸ್ತುಶಿಲ್ಪದ ಅದ್ಭುತವು ಮಾನವ ಇತಿಹಾಸದಲ್ಲಿ ಕೆಲವು ಕೆಟ್ಟ ಅಪರಾಧಗಳಿಗೆ ನೆಲೆಯಾಗಿತ್ತು ಎಂದು ಹೇಳಿದ್ದಾರೆ.
ರೋಮನ್ ಚಕ್ರವರ್ತಿಗಳು ನಿರ್ಮಿಸಿದ ಗಣಿತಶಾಸ್ತ್ರದ ವಿನ್ಯಾಸದಲ್ಲಿರುವ ಈ ಆಪ್ತ ರಂಗಮಂದಿರ ಈಗ ಮ್ಯೂಸಿಯಂ ಆಗಿದೆ. ರೋಮನ್ನರ ಕಾಲದಲ್ಲಿ ಇದು ಬಹುದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿ ಹೆಸರಾಗಿತ್ತು. ಜ್ಯೂಯಿಶ್- ರೋಮನ್ ಯುದ್ಧದಲ್ಲಿ ಶತ್ರು ಸೈನಿಕರು ಈ ಸುಂದರ ರಂಗಮಂದಿರವನ್ನು ಧ್ವಂಸ ಮಾಡಿದ್ದರು.
ಇದರ ಜೊತೆಗೆ ಪಾರುಲ್ ಗ್ರೀಸ್‌ನ ಅನೇಕ ಪ್ರಾಚೀನ ತಾಣಗಳಿಗೆ ಭೇಟಿ ನೀಡಿದ್ದಾರೆ. ಪುರಾತನ ಚರ್ಚ್‌ಗಳು, ಟವರ್ ಆಫ್ ಪಿಸಾ, ಟ್ರೇವಿ ಕಾರಂಜಿ ಮೊದಲಾದೆಡೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

