ಹೊಸ ವರ್ಷದಲ್ಲಿ ಹೊಸ ಅತಿಥಿ, ಹೊಸ ಸಂಭ್ರಮ: ವಸಿಷ್ಠ ಸಿಂಹ
ನಮ್ಮ ಬದುಕು, ಬದುಕಿನ ಬಗೆಗಿನ ದೃಷ್ಟಿಕೋನ ಎಲ್ಲಾ ಬದಲಾಗುತ್ತದೆ. ನಾವು ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸುತ್ತೇವೆ. ಆದರೆ ಈ ಬಾರಿ ಕ್ಯಾಲೆಂಡರ್‌ನ ಹೊಸ ವರ್ಷವೂ ಈ ಕಾರಣಕ್ಕೆ ಬಹಳ ಸ್ಪೆಷಲ್ ಆಗಿದೆ.
ಹೊಸ ವರ್ಷದ ಆರಂಭದಲ್ಲೇ ನಮ್ಮ ಮನೆಗೆ ನಮ್ಮ ಪ್ರೀತಿಯ ಕುಡಿಯ ಆಗಮನವಾಗಲಿದೆ. ಜನವರಿ ತಿಂಗಳ ಕೊನೆಯಲ್ಲಿ ನಮ್ಮ ಮಗುವಿನ ಆಗಮನವಾಗಲಿದೆ. ಮಗು ಬಂದಮೇಲೆ ಅದಕ್ಕಾಗಿ ನಾವು ರೆಸೊಲ್ಯೂಶನ್ ತೆಗೆದುಕೊಳ್ಳಲೇ ಬೇಕಾಗುತ್ತದೆ.
ನಮ್ಮ ಬದುಕು, ಬದುಕಿನ ಬಗೆಗಿನ ದೃಷ್ಟಿಕೋನ ಎಲ್ಲಾ ಬದಲಾಗುತ್ತದೆ. ನಾವು ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸುತ್ತೇವೆ. ಆದರೆ ಈ ಬಾರಿ ಕ್ಯಾಲೆಂಡರ್‌ನ ಹೊಸ ವರ್ಷವೂ ಈ ಕಾರಣಕ್ಕೆ ಬಹಳ ಸ್ಪೆಷಲ್ ಆಗಿದೆ.
ನನ್ನ ಸಂಗಾತಿ ಹರಿಪ್ರಿಯಾ ಹಣ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಿದ್ದಾಳೆ. ಅವಳಿಗೆ ಇದೆಲ್ಲ ಸಲೀಸು. ನಾನು ದುಡಿದು ಅವಳ ಕೈಯಲ್ಲಿ ದುಡ್ಡಿಟ್ಟು ನಿರಾಳನಾಗಿರುತ್ತೇನೆ. ಅವಳೇ ವ್ಯವಹಾರ, ಕುಟುಂಬದ ದೇಖಾರೇಖಿ ನೋಡಿಕೊಳ್ತಾಳೆ.
ನನ್ನ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಎರಡು ತಿಂಗಳು ಬ್ರೇಕ್ ತೆಗೆದುಕೊಂಡಿದ್ದೇನೆ. ‘ತಲ್ವಾರ್ ಪೇಟೆ’ ಕನ್ನಡ ಸಿನಿಮಾ, ಇದರ ಜೊತೆಗೆ ತೆಲುಗು, ತಮಿಳು ಸಿನಿಮಾಗಳ ಒಂದಿಷ್ಟು ಕೆಲಸ ಪೆಂಡಿಂಗ್ ಇದೆ. ಅದನ್ನೆಲ್ಲ ಶೀಘ್ರ ಮುಗಿಸಬೇಕು. ಬ್ರೇಕ್ ಬಳಿಕ ಹೊಸ ಸಿನಿಮಾಗಳ ಕೆಲಸ ಶುರು ಹಚ್ಚಿಕೊಳ್ಳುತ್ತೇನೆ.
ಗಮನಾರ್ಹ ಅಭಿನಯಕ್ಕಾಗಿ ಹೆಸರುವಾಸಿಯಾದ ವಸಿಷ್ಟ ಅವರು ತೀವ್ರ ಮತ್ತು ಸೂಕ್ಷ್ಮ ಪಾತ್ರಗಳ ನಡುವೆ ಸಲೀಸಾಗಿ ಪರಿವರ್ತನೆ ಮಾಡುವ ಸಾಮರ್ಥ್ಯಕ್ಕಾಗಿ ಮನ್ನಣೆಯನ್ನು ಗಳಿಸಿದ್ದಾರೆ.
ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವಸಿಷ್ಠ ಸಿಂಹ, ರಾಜಾಹುಲಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 6ನೇ ಮೈಲಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.