- Home
- Entertainment
- Sandalwood
- 25ನೇ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ರಕ್ತದಿಂದ ಬರೆದ ಪತ್ರ ಗಿಫ್ಟ್ ಕೊಟ್ಟ 'ನೆನಪಿರಲಿ' ಪ್ರೇಮ್!
25ನೇ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ರಕ್ತದಿಂದ ಬರೆದ ಪತ್ರ ಗಿಫ್ಟ್ ಕೊಟ್ಟ 'ನೆನಪಿರಲಿ' ಪ್ರೇಮ್!
ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಮತ್ತು ಜ್ಯೋತಿ ಅವರು ಮದುವೆಯಾಗಿ 25 ವರ್ಷಗಳಾಗಿವೆ. ಈ ಸವಿ ಗಳಿಗೆಯಂದು ಪ್ರೇಮ್ ಅವರು ಪತ್ನಿಗೆ ರಕ್ತದಲ್ಲಿ ಬರೆದಿರುವ ಪತ್ರವನ್ನು ನೀಡಿದ್ದಾರೆ. ಅದರ ವಿಡಿಯೋ ಅದನ್ನು ಪತ್ನಿ ಶೇರ್ ಮಾಡಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕೆ ರಕ್ತದಿಂದ ಬರೆದ ಪತ್ರ ಕೊಟ್ಟ 'ನೆನಪಿರಲಿ' ಪ್ರೇಮ್
ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಮತ್ತು ಜ್ಯೋತಿ ಅವರು ಮದುವೆಯಾಗಿ 25 ವರ್ಷಗಳಾಗಿವೆ. ನೋಡಲು ಇನ್ನೂ ಯಂಗ್ ಆಗಿ ಕಾಣ್ತಿರೋ ಪ್ರೇಮ್ ಅವರಿಗೆ ಈಗ 49 ವರ್ಷ ವಯಸ್ಸು. ನಿನ್ನೆ ಅಂದರೆ ಆಗಸ್ಟ್ 1ರಂದು ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಭೀಮನ ಅಮವಾಸ್ಯೆಯ ದಿನ ಜ್ಯೋತಿ ಅವರು ಪತಿಯ ಪಾದಪೂಜೆ ಮಾಡಿ ಅದರ ವಿಡಿಯೋ ಶೇರ್ ಮಾಡಿದ್ದರು. ಆದರೆ 25ನೇ ವಾರ್ಷಿಕೋತ್ಸವದ ಅಂಗವಾಗಿ ಪತ್ನಿಗೆ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ ಪ್ರೇಮ್. ಅದು ರಕ್ತದ ಮೂಲಕ ಬರೆದಿರುವ ಪತ್ರ.
ವಿವಾಹ ವಾರ್ಷಿಕೋತ್ಸವಕ್ಕೆ ರಕ್ತದಿಂದ ಬರೆದ ಪತ್ರ ಕೊಟ್ಟ 'ನೆನಪಿರಲಿ' ಪ್ರೇಮ್
ಈ ವಿಡಿಯೋ ಅನ್ನು ಜ್ಯೋತಿ ಅವರು ಶೇರ್ ಮಾಡಿಕೊಂಡಿದ್ದಾರೆ. ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಪ್ರೇಮ್ ಅವರು 25ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಶುಭಾಶಯ ಎಂದು ಹೇಳುತ್ತಲೇ ಗಿಫ್ಟ್ ಕೊಟ್ಟಿದ್ದಾರೆ. ಅದರಲ್ಲಿ ಪತ್ನಿಗೆ ಪ್ರೀತಿಯಲ್ಲಿ ಪತ್ರ ಬರೆಯಲಾಗಿದೆ. ಅದನ್ನು ವಿವರಿಸಿದ ಜ್ಯೋತಿ ಅವರು,ಇದನ್ನು ಪ್ರೇಮ್ ಅವರು ರಕ್ತದಿಂದ ಬರೆದಿರುವುದಾಗಿ ಹೇಳಿದರು. ನಂತರ ಪತ್ನಿಗೆ ಪ್ರೇಮ್ ಹೂವು ಮುಡಿಸಿದರು. ಬಳಿಕ ಪ್ರೇಮ್ ಅವರಿಗೆ ಪತ್ನಿ ಹೂವಿನ ಮಾಲೆ ಹಾಕಿದ್ದಾರೆ.
ಪತ್ರದ ಕುರಿತು ಪತ್ನಿ ಜ್ಯೋತಿ ಮಾಹಿತಿ
ಇನ್ನು ಪ್ರೇಮ್ ತಮ್ಮ ಪತ್ನಿಯ ತ್ಯಾಗವನ್ನು ಹಲವಾರು ಬಾರಿ ನೆನೆದಿರುವುದು ಇದೆ. ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ಪ್ರೇಮ್ ಅವರ ಪತ್ನಿ ಜ್ಯೋತಿ ಕೂಡ ಹಾಜರಿದ್ದು, ಈ ಸಂದರ್ಭದಲ್ಲಿ ಪತ್ನಿಯ ತ್ಯಾಗವನ್ನು ಅವರು ನೆನಪಿಸಿಕೊಂಡಿದ್ದರು.
ಮನೆಯವರ ವಿರೋಧಿಸಿ ಮದುವೆ
ಪ್ರೇಮ್ ಮತ್ತು ಜ್ಯೋತಿ 3 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲದೇ ಮನೆಯಲ್ಲಿ ವಿರೋಧವಿದ್ದ ಕಾರಣ ಓಡಿ ಹೋಗಿ ವಿವಾಹವಾಗಿದ್ದರು. ಇದನ್ನು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಹೇಳಿಕೊಂಡಿದ್ದರು.
ಪ್ರತಿ ವರ್ಷವೂ ರೊಮಾಂಟಿಕ್ ಮೂಡ್ನಲ್ಲಿ ದಂಪತಿ
ಕಳೆದ ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪತ್ನಿಯೊಂದಿಗೆ ನೀರಿನಾಳಕ್ಕೆ ಇಳಿದು, ಕೈ ಕೈ ಹಿಡಿದು ಜ್ಯೋತಿಗೆ ಪ್ರಪೋಸ್ ಮಾಡಿ ಸಿಹಿಮುತ್ತನಿಟ್ಟಿದ್ದರು ಪ್ರೇಮ್. ಫೋಟೋಗಳ ಜತೆಗೆ ಕಿರು ವಿಡಿಯೋ ತುಣುಕನ್ನು ಶೇರ್ ಮಾಡಿರುವ ಪ್ರೇಮ್, ಭೂಮಿಯಿಂದ ಶುರುವಾದ ನಮ್ಮ ಪ್ರೀತಿ, ಆಕಾಶದಲ್ಲಿ ಹಾರಾಡಿ ಸಮುದ್ರದ ಆಳದಲ್ಲೂ ಅರಳುತ್ತಿದೆ ಎಂದು ಬರೆದುಕೊಂಡಿದ್ದರು.
ಪತ್ನಿಯ ತ್ಯಾಗ ನೆನೆಯುವ ಪ್ರೇಮ್
ಅಂದಹಾಗೆ, ಪ್ರೇಮ್ ಅವರು ಶಿಕ್ಷಣದ ನಂತರ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಸ್ ಲಿಮಿಟೆಡ್ ನಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಬಾಲ್ಯದಿಂದಲೂ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿತ್ತು ಎಂದು ಹೇಳಿಕೊಂಡಿರುವ ಪ್ರೇಮ್ ಅವರು, ವಾರಕ್ಕೆ ಕನಿಷ್ಠ ಮೂರು ನಾಲ್ಕು ಚಿತ್ರಗಳನ್ನು ನೋಡುತ್ತಿರುವುದಾಗಿ ಹೇಳುತ್ತಾರೆ. ಸಿನಿಮಾದ ಕುರಿತು ಸಾಕಷ್ಟು ಪುಸ್ತಕಗಳನ್ನೂ ಓದುತ್ತಿದ್ದರಂತೆ. ನಂತರ ಕಿರುತೆರೆಯಲ್ಲಿ ಅವರಿಗೆ ಅವಕಾಶ ಸಿಕ್ಕಿತು.
ಮನ್ವಂತರ ಸೀರಿಯಲ್ ಮೂಲಕ ಪದಾರ್ಪಣೆ
ಗೆಳೆಯರೊಬ್ಬರ ಸಲಹೆ ಮೇರೆಗೆ ಟಿ.ಎನ್.ಸೀತಾರಾಮ್ ರ ಮನ್ವಂತರ ಧಾರಾವಾಹಿಯಲ್ಲಿ ಸಹ ಕಲಾವಿದನಾಗಿ ನಟಿಸಿದರು. ಅದಾದ ಬಳಿಕ ಅರ್ಧ ಸತ್ಯ ಎಂಬ ಸೀರಿಯಲ್ ಒಂದು ಎಪಿಸೋಡ್ನಲ್ಲಿ ಕಾಣಿಸಿಕೊಂಡರು. 2004 ರಲ್ಲಿ ತೆರೆಕಂಡ `ಪ್ರಾಣ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿರಂಗ ಪ್ರವೇಶಿಸಿದರು.
ಸೀರಿಯಲ್ನಿಂದ ರೊಮಾಂಟಿಕ್ ಹೀರೋವರೆಗಿನ ಪಯಣ...
ಇದೀಗ ಪ್ರೇಮ್ ಅವರು ಕನ್ನಡ ಚಿತ್ರರಂಗದ ರೊಮಾಂಟಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ವೃತ್ತಿ ಜೀವನದ 25ನೇ ಸಿನಿಮಾ ಆಗಿ ಪ್ರೇಮಂ ಪೂಜ್ಯಂ ಬಿಡುಗಡೆ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

