ಹೊಸ ವರ್ಷದಲ್ಲಿ ಹೊಸ ಬಿಸಿನೆಸ್ ಶುರು ಮಾಡಬೇಕಿದೆ: ಶರಣ್ಯಾ ಶೆಟ್ಟಿ
ನಾವು ಜಿಮ್‌ನಲ್ಲಿ ವರ್ಕೌಟ್ ಮಾಡಿ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ತೀವಿ. ಆದರೆ ನಮ್ಮ ಮನಸ್ಸಿಗೂ ವ್ಯಾಯಾಮ, ಶಿಸ್ತು ಬೇಕು. ಹೀಗಾಗಿ ಧ್ಯಾನ ಮಾಡಬೇಕು, ಸಕಾರಾತ್ಮಕ ಬದುಕು ರೂಪಿಸಿಕೊಳ್ಳಬೇಕು ಎಂಬೆಲ್ಲ ಗುರಿ ಇದೆ.
ಹೊಸ ವರ್ಷದಲ್ಲಿ ನನ್ನ ಬಹು ಮುಖ್ಯ ರೆಸೊಲ್ಯೂಶನ್ ಎಂದರೆ ದೇಹ ಮತ್ತು ಮನಸ್ಸಿನ ಫಿಟ್‌ನೆಸ್. ನಾವು ಜಿಮ್‌ನಲ್ಲಿ ವರ್ಕೌಟ್ ಮಾಡಿ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ತೀವಿ. ಆದರೆ ನಮ್ಮ ಮನಸ್ಸಿಗೂ ವ್ಯಾಯಾಮ, ಶಿಸ್ತು ಬೇಕು.
ಹೀಗಾಗಿ ಧ್ಯಾನ ಮಾಡಬೇಕು, ಸಕಾರಾತ್ಮಕ ಬದುಕು ರೂಪಿಸಿಕೊಳ್ಳಬೇಕು ಎಂಬೆಲ್ಲ ಗುರಿ ಇದೆ. ಇದಲ್ಲದೇ ಈ ವರ್ಷ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಬೇಕು. ಸಣ್ಣ ಸಣ್ಣ ಖುಷಿಗಳನ್ನೂ ಎಂಜಾಯ್ ಮಾಡಬೇಕು.
ಹೊಸ ವರ್ಷದಲ್ಲಿ ಬಿಸಿನೆಸ್ ಆರಂಭಿಸುವ ಗುರಿ ಇದೆ. ಅದರ ಕೆಲಸವನ್ನು ಈಗಾಗಲೇ ಶುರು ಮಾಡಿದ್ದೇನೆ. ಬದುಕಿನ ಆರ್ಥಿಕ ಸ್ಥಿರತೆಗಾಗಿ ಬಿಸಿನೆಸ್‌ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದೇನೆ.
ನನಗೆ ರಾಧಿಕಾ ಪಂಡಿತ್ ಥರ ನಟನೆಗೆ ಅವಕಾಶ ಇರುವ ಪಾತ್ರ ಮಾಡಲು ಇಷ್ಟ. ನಾನು ಒಪ್ಪಿಕೊಂಡ ಅಷ್ಟೂ ಸಿನಿಮಾಗಳಲ್ಲೂ ಡಿಫರೆಂಟ್ ಪಾತ್ರಗಳಿವೆ. ನನಗೆ ಹೀರೋಯಿನ್‌ಗಿಂತಲೂ ಆರ್ಟಿಸ್ಟ್ ಅನಿಸಿಕೊಳ್ಳಬೇಕು.
ನನ್ನ ಮೊದಲ ಚಿತ್ರ ರವಿಚಂದ್ರನ್ ಅವರ ‘ರವಿ ಬೋಪಣ್ಣ’. ಇದರಲ್ಲಿ ರವಿಚಂದ್ರನ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಗಟ್ಟಿಮೇಳ ಸೀರಿಯಲ್‌ನಲ್ಲಿ ಸಾಹಿತ್ಯ ಅಂತ ನೆಗೆಟಿವ್ ರೋಲ್, ಆಮೇಲೆ ‘ಸ್ಪೂಕಿ ಕಾಲೇಜ್’ ಸಿನಿಮಾದಲ್ಲಿ ಸೆಕೆಂಡ್ ಲೀಡ್.
ಗಟ್ಟಿಮೇಳ ಸೀರಿಯಲ್ ನೋಡಿ ಜನ ನನ್ನ ಗುರುತಿಸಲು ಶುರು ಮಾಡಿದರೋ ಆಗ ನಟನೆಯಲ್ಲಿ ಆಸಕ್ತಿ ಹೆಚ್ಚಾಯ್ತು. ಸಿನಿಮಾದಲ್ಲಿ ಅವಕಾಶ ಬಂದಾಗ ಓದಿನ ಜೊತೆಗೇ ನಟನೆಯನ್ನೂ ಕಂಟಿನ್ಯೂ ಮಾಡಿದೆ.