ವಿಷ್ಣುವರ್ಧನ್ ಅಭಿಮಾನಿಗಳು ಮಿಸ್ ಮಾಡದೆ ನೋಡಲೇಬೇಕಾದ ಸಿನಿಮಾಗಳಿವು
ಡಾ. ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ ಅಂದರೆ ಡಿಸೆಂಬರ್ 30ಕ್ಕೆ 15 ವರ್ಷಗಳು ಕಳೆದಿವೆ. 15ನೇ ಪುಣ್ಯತಿಥಿಯ ಹಿನ್ನೆಲೆಯಲ್ಲಿ, ಸಾಹಸಸಿಂಹ ಅಭಿನಯಿಸಿರುವ ಸಿನಿಮಾಗಳಲ್ಲಿ ನೀವು ನೋಡಲೇಬೇಕಾದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ. ಇವು ಮತ್ತೆ ಮತ್ತೆ ಕಾಡುವಂತಹ ಸಿನಿಮಾಗಳು ಇವತ್ತೇ ನೋಡಿ…
ಸಾಹಸ ಸಿಂಹ
ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ, ಸಿನಿಮಾ ಪೂರ್ತಿಯಾಗಿ ಪೊಲೀಸ್ ಆಫೀಸರ್ ಆಗಿರುವಂತಹ ಪ್ರತಾಪ್ ಆಕ್ಷನ್ ಕಾಣಬಹುದು. ಒಂದು ಕೊಲೆ ಕೇಸ್ ಬಿಡಿಸುತ್ತಾ ಹೋಗಿ, ಕೊನೆಗೆ ಕುತೂಹಲಕಾರಿ ಘಟ್ಟ ತಲುಪುವಂತಹ ಕಥೆ ಈ ಸಿನಿಮಾದ್ದಾಗಿದೆ.
ಮುತ್ತಿನಹಾರ
ದೇಶ ಭಕ್ತಿಯನ್ನು ಸಾರುವಂತಹ ಅದ್ಭುತವಾದ ಕಥಾ ಹಂದರವನ್ನು ಹೊಂದಿರುವ ಚಿತ್ರ. ಭಾರತದ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣುವರ್ಧನ್ (Vishnuvardhan) ಮತ್ತು ನಾಯಕಿಯ ಪಾತ್ರದಲ್ಲಿ ಸುಹಾಸಿನಿ ಅಭಿನಯಿಸಿದ್ದಾರೆ. ಯುದ್ಧಭೂಮಿಯಲ್ಲಿ ನಡೆಯುವ ಹೋರಾಟ, ಸೈನಿಕರ ಮನದಲ್ಲುಂಟಾಗುವ ಗೊಂದಲಗಳನ್ನು ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.
ಸೂರ್ಯವಂಶ
ಈ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಬಂದಿದ್ದರೂ, ಕನ್ನಡದಲ್ಲೂ ಸೂಪರ್ ಹಿಟ್ ಆಗಿದ್ದಂತಹ ಸಿನಿಮಾ ಇದು. ವಿದ್ಯಾಭ್ಯಾಸವೇ ಇಲ್ಲದ ವ್ಯಕ್ತಿ, ತಂದೆಯನ್ನೇ ದೇವರೆಂದು ಪೂಜಿಸುವ ವ್ಯಕ್ತಿ, ನಂತರ ಶ್ರಮಪಟ್ಟು, ತನ್ನ ಹೆಂಡತಿಯನ್ನು ಡಿಸಿ ಮಾಡಿ, ತಾನು ಬಸ್ ಮಾಲೀಕನಾಗಿ, ಆಸ್ಪತ್ರೆಯನ್ನು ಕಟ್ಟಿಸಿ, ಕೊನೆಗೆ ತಂದೆಯ ಪ್ರೀತಿಯನ್ನು ಪಡೆಯುವ ಅದ್ಭುತವಾದ ಕಥೆ ಇದಾಗಿದೆ.
ಭೂತಯ್ಯನ ಮಗ ಅಯ್ಯು
ವಿಷ್ಣುವರ್ಧನ್, ಲೋಕೇಶ್ (Lokesh) ಹಾಗೂ ಎಂಪಿ ಶಂಕರ್ ಅಭಿನಯದ ಉತ್ತಮ ಚಿತ್ರ. ಅಯ್ಯುವಾಗಿ ಲೋಕೇಶ್ ಮತ್ತು ಗುಲ್ಲನಾಗಿ ವಿಷ್ಣುವರ್ಧನ್ ಅಭಿನಯ ಮನೋಜ್ಞವಾಗಿದೆ. ಶತ್ರುಗಳು ಹೇಗೆ ಸ್ನೇಹಿತರಾಗ್ತಾರೆ ಅನ್ನೋದು ಸಿನಿಮಾ ಕಥೆ.
ಗಂಧದ ಗುಡಿ
ವಿಷ್ಣುವರ್ಧನ್ ಹಾಗೂ ರಾಜ್ ಕುಮಾರ್ (Dr Rajkumar) ನಟಿಸಿದ ಸಿನಿಮಾ ಇದು. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು, ನೀವು ಮಿಸ್ ಮಾಡದೇ ನೋಡಲೇಬೇಕಾದ ಸಿನಿಮಾ ಇದು.
ಬಂಧನ
ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಸುಂದರವಾದ ಆದರೆ ಟ್ರಾಜಿಕ್ ಲವ್ ಸ್ಟೋರಿ ಇರುವಂತಹ ಸಿನಿಮಾ. ವಿಷ್ಣುವರ್ಧನ್ ವೈದ್ಯರಾಗಿ ನಟಿಸಿದ್ದು, ಕೊನೆಗೆ ಸಾವನ್ನಪ್ಪುತ್ತಿರುವ ಕಥೆ ತುಂಬಾನೆ ಅದ್ಭುತವಾಗಿದೆ.
ಆಪ್ತಮಿತ್ರ
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡಿದಂತಹ ಹಾರರ್ ಥ್ರಿಲ್ಲರ್ (Horror Thriller)ಸಿನಿಮಾ ಇದು. ವಿಷ್ಣುವರ್ಧ ಅಮೋಘ ಅಭಿನಯ. ಸೌಂದರ್ಯ ನಟನೆ. ವಾವ್ ಅದ್ಭುತವಾದ ಚಿತ್ರ. ಈ ಚಿತ್ರವನ್ನು ನೀವು ಮಿಸ್ ಮಾಡಿದೇ ನೋಡ್ಲೇಬೇಕು.
ಆಪ್ತರಕ್ಷಕ
ವಿಷ್ಣುವರ್ಧನ್ ಕೊನೆಯ ಸಿನಿಮಾ ಇದು. ಆಪ್ತಮಿತ್ರ ಸಿನಿಮಾದ ಮುಂದುವರೆದ ಭಾಗ. ಆಪ್ತಮಿತ್ರ ಸಿನಿಮಾದ ಒಂದೆಳೆಯನ್ನು ಹಿಡಿದುಕೊಂಡು ತಯಾರಾದಂತಹ ಹಾರರ್ ಥ್ರಿಲ್ಲರ್ ಕಥೆ ಇದು. ಕುತೂಹಲ ಮೂಡಿಸುವ ಈ ಸಿನಿಮಾ, ಮುಂದೇನಾಗುತ್ತೆ ಎಂದು ನಿಮ್ಮನ್ನು ಕಾಯುವಂತೆ ಮಾಡುತ್ತೆ.
ಕರ್ಣ
ಫುಟ್ ಬಾಲ್ ಆಟಗಾರನಾಗಿ ಗುರುತಿಸಿಕೊಳ್ಳಲು ಹೊರಟ ಕರ್ಣ, ಕೊನೆಗೆ ಮನೆಯ ಕಷ್ಟಕ್ಕೆ ಬೆನ್ನೆಲುಬಾಗಲು ಕಿಡ್ನಿಯನ್ನೇ ಕೊಡುವಂತಹ ಕಥೆ ಇದಾಗಿದ್ದು. ದಾನಶೂರ ಕರ್ಣನಂತೆ ವಿಷ್ಣುವರ್ಧನ್ ಕಾಣಿಸುತ್ತಾರೆ.
ನಾಗರಹಾವು
ಪುಟ್ಟಣ್ಣ ಕಣಗಾಲ್ (Puttanna Kanagal)ಅವರ ಈ ಸಿನಿಮಾ ಇವತ್ತಿಗೂ ಜನಪ್ರಿಯವಾಗಿರೋದಕ್ಕೆ ಕಾರಣ ರಾಮಾಚಾರಿಯಾಗಿ ವಿಷ್ಣುವರ್ಧನ್ ಅಭಿನಯ. ಆ ದ್ವೇಷ, ರೋಷ, ಚಾಮಯ್ಯ ಮೇಷ್ಟ್ರು ಜೊತೆಗಿನ ಸಂಬಂಧ, ಅಲಮೇಲು ಜೊತೆಗಿನ ಪ್ರೀತಿ, ಮಾರ್ಗರೇಟ್ ಪ್ರೇಮ. 1972 ರಲ್ಲಿ ಹೊಸತನದ ಕಿಚ್ಚು ಹಚ್ಚಿದ ಸಿನಿಮಾ ಇದು.