- Home
- Entertainment
- Sandalwood
- ಕೈಯಲ್ಲಿ ರೋಜಾ ಹಿಡಿದು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಕೋಟಿ ಬೆಡಗಿ ಮೋಕ್ಷಾ ಕುಶಲ್
ಕೈಯಲ್ಲಿ ರೋಜಾ ಹಿಡಿದು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಕೋಟಿ ಬೆಡಗಿ ಮೋಕ್ಷಾ ಕುಶಲ್
ಕೋಟಿ ಸಿನಿಮಾದಲ್ಲಿ ಧನಂಜಯ್ ಗೆ ನಾಯಕಿಯಾಗಿದ್ದ ಬೆಡಗಿ ಮೋಕ್ಷಾ ಕುಶಲ್ ಸಖತ್ ಬೋಲ್ಡ್ ಆವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಅವರ ಬೋಲ್ಡ್ ಲುಕ್ ನೋಡಿ.

ಕೋಟಿ ಸಿನಿಮಾದಲ್ಲಿ ಡಾಲಿ ಧನಂಜಯ್ ಗೆ (Dali Dhananjay) ನಾಯಕಿಯಾಗಿ ನಟಿಸಿದ ನಟಿ ಮೋಕ್ಷಾ ಕುಶಲ್ ನೆನಪಿದ್ದಾರಾ? ತಮ್ಮ ಮನೋಜ್ಞ ಅಭಿನಯದ ಮೂಲಕ ಮನಗೆದ್ದ ನಟಿಯ ಇದೀಗ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕಪ್ಪು ಬಣ್ಣದ ಡೀಪ್ ನೆಕ್ ಇರುವ, ನೆಟೆಡ್ ಗೌನ್ ಧರಿಸಿರುವ ಮೋಕ್ಷಾ ಕುಶಲ್ (Moksha Kushal), ಕೈಯಲ್ಲಿ ಗುಲಾಬಿ ಹೂವಿನ ಗುಚ್ಚ ಹಿಡಿದು, ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ತುಂಬಾನೆ ಚೆನ್ನಾಗಿ ಕಾಣಿಸ್ತೀರಾ. ಸೆಕ್ಸಿ, ಬೆಂಕಿ, ಕ್ಯೂಟ್, ಯಾಕಿಷ್ಟು ಚೆಂದಾ ನೀವು, ಆ ಕಿಲ್ಲರ್ ಕಣ್ಣುಗಳು… ಉಫ್… ಅಂದವಾದ ಫೋಟೊ, ಸ್ಟನ್ನಿಂಗ್, ಕೊಕೈನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಸಿನಿಮಾದಲ್ಲಿ ಸಿಂಪಲ್ ಆಗಿ ಕಾಣಿಸಿಕೊಳ್ಳುವ ನಟಿ ರಿಯಲ್ ಆಗಿ ಸಖತ್ ಬೋಲ್ಡ್ ಆಗಿದ್ದಾರೆ. ಇವರ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಹಲವಾರು ಬೋಲ್ಡ್ ಫೋಟೊಶೂಟ್ ಗಳನ್ನು ಸಹ ಕಾಣಬಹುದು. ಇವರನ್ನು ನೋಡಿದ್ರೆನೇ ಮೋಕ್ಷಾ ತುಂಬಾನೆ ಬಬ್ಲಿ ಬಿಂದಾಸ್ ಬೆಡಗಿ ಅನ್ನೋದು ಗೊತ್ತಾಗುತ್ತೆ.
ಆದಿ ಪುರಾಣ (Adi Purana) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೂರ್ಗ್ ಬ್ಯೂಟಿ ಮೋಕ್ಷಾ, ನಂತರ ನವರತ್ನ ಸಿನಿಮಾದಲ್ಲಿ ವೈಲ್ಡ್ ಲೈಫ್ ಫೋಟೊಗ್ರಾಫರ್ ಆಗಿ ಮಿಂಚಿದ್ದರು, ಬಳಿಕ ಡಾಲಿ ಧನಂಜಯ್ ನಾಯಕಿಯಾಗಿ ಕೋಟಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೇ ನಟಿ ಆಯನ ಸಿನಿಮಾದಲ್ಲೂ ನಟಿಸಿದ್ದಾರೆ. ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋದು ತಿಳಿದು ಬಂದಿಲ್ಲ.
ಮಾಡೆಲ್ ಆಗಿರುವ ಮೋಕ್ಷಾ ಹಲವು ಫ್ಯಾಷನ್ ಶೋ, ಈವೆಂಟ್ ಗಳಲ್ಲಿ ಕೂಡ ಭಾಗವಹಿಸಿದ್ದಾರೆ, ಜೊತೆಗೆ ಗೋದ್ರೇಜ್ ಸೋಪ್, ಸಂಗೀತಾ ಮೊಬೈಲ್, ಸಿರೋನಾ ಮೆನ್ಸ್ಟ್ರುವಲ್ ಕಪ್, ಕ್ರಾಸ್ ಬೀಟ್ ಸ್ಮಾರ್ಟ್ ವಾಚ್, ಟೈಟಾನ್ ವಾಚ್, ಸೀರೆ, ಜ್ಯುವೆಲ್ಲರಿಗಳಿಗೆ ಮಾಡೆಲ್ ಆಗಿ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ.