- Home
- Entertainment
- Sandalwood
- ತಮಿಳು ನಿರ್ದೇಶಕ ಲೋಕೇಶ್ ಕನಗರಾಜ್ ಮೆಚ್ಚಿದ ಕತೆ 'ಲ್ಯಾಂಡ್ ಲಾರ್ಡ್': ನಟಿ ರಚಿತಾ ರಾಮ್
ತಮಿಳು ನಿರ್ದೇಶಕ ಲೋಕೇಶ್ ಕನಗರಾಜ್ ಮೆಚ್ಚಿದ ಕತೆ 'ಲ್ಯಾಂಡ್ ಲಾರ್ಡ್': ನಟಿ ರಚಿತಾ ರಾಮ್
ಜಾನಿ ಜಾನಿ ಯೆಸ್ ಪಪ್ಪ ಚಿತ್ರದ ನಂತರ ನಾನು ದುನಿಯಾ ವಿಜಯ್ ಅವರ ಜೊತೆಗೆ ನಟಿಸಿದ್ದೇನೆ. ಈ ಚಿತ್ರ ತಂಡದೊಟ್ಟಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ನಿಂಗವ್ವ ನನ್ನ ಪಾತ್ರದ ಹೆಸರು. ಎಲ್ಲರೂ ಚಿತ್ರ ನೋಡಿ, ಪ್ರೋತ್ಸಾಹ ನೀಡಿ ಎಂದರು ರಚಿತಾ ರಾಮ್.

ಲ್ಯಾಂಡ್ ಲಾರ್ಡ್ ಟೀಸರ್ ಬಿಡುಗಡೆ
ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಜಡೇಶ್ ಕೆ ಹಂಪಿ ನಿರ್ದೇಶನದ, ಕೆ.ವಿ. ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಕೆ.ಎಸ್ ನಿರ್ಮಾಣದ ಈ ಸಿನಿಮಾ ಜ.23ಕ್ಕೆ ಬಿಡುಗಡೆ ಆಗಲಿದೆ.
ಈ ಪಾತ್ರ ನಾನೇ ಮಾಡಬೇಕು
ರಚಿತಾ ರಾಮ್, ನಾನು ದರ್ಶನ್ ಹಾಗೂ ತಮಿಳು ನಿರ್ದೇಶಕ ಲೋಕೇಶ್ ಕನಗರಾಜು ಅವರಿಗೂ ಕತೆ ಹೇಳಿದ್ದೆ. ಅವರು ಒಳ್ಳೆಯ ಕತೆ ಅಂತ ಮೆಚ್ಚಿಕೊಂಡಿದ್ದರು. ನಾನು ಈ ಚಿತ್ರದ ಕಥೆ ಕೇಳುವಾಗಲೇ ಬಹಳ ಕುತೂಹಲ ಎನಿಸಿತು. ಕಥೆ ಕೇಳುತ್ತಿರುವಾಗಲೇ ಈ ಪಾತ್ರ ನಾನೇ ಮಾಡಬೇಕು ಅಂದುಕೊಂಡೆ.
ನಿಂಗವ್ವ ನನ್ನ ಪಾತ್ರದ ಹೆಸರು
ಜಾನಿ ಜಾನಿ ಯೆಸ್ ಪಪ್ಪ ಚಿತ್ರದ ನಂತರ ನಾನು ದುನಿಯಾ ವಿಜಯ್ ಅವರ ಜೊತೆಗೆ ನಟಿಸಿದ್ದೇನೆ. ಈ ಚಿತ್ರತಂಡದೊಟ್ಟಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ನಿಂಗವ್ವ ನನ್ನ ಪಾತ್ರದ ಹೆಸರು. ಎಲ್ಲರೂ ಚಿತ್ರ ನೋಡಿ, ಪ್ರೋತ್ಸಾಹ ನೀಡಿ ಎಂದರು.
ಒಳ್ಳೆಯ ಕಂಟೆಂಟ್ ಸಿನಿಮಾ
ದುನಿಯಾ ವಿಜಯ್, ಒಂದು ಒಳ್ಳೆಯ ಕಂಟೆಂಟ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆಂಬ ಖುಷಿ ಇದೆ. ನಾನು ಹಾಗೂ ರಚಿತಾ ರಾಮ್ ಅವರು ಒಂದೇ ಬಡಾವಣೆಯವರು. ಮೊದಲಿನಿಂದಲೂ ಸ್ನೇಹಿತರು. ಅವರ ಜೊತೆಗೆ ಅಭಿನಯಿಸಿದ್ದು ಖುಷಿ ಕೊಟ್ಟಿದೆ. ಜೊತೆಗೆ, ತೆರೆಯ ಮೇಲೆ ಅಷ್ಟೇ ಅಲ್ಲ.
ಉಮಾಶ್ರೀ ಅವರೊಂದಿಗೆ ನಟಿಸಿದ್ದು ಬಹಳ ಸಂತೋಷ
ನಿಜಜೀವನದಲ್ಲೂ ನನ್ನನ್ನು ತಾಯಿಯ ತರಹ ಪ್ರೀತಿ ಮಾಡುವ ಹಿರಿಯ ನಟಿ ಉಮಾಶ್ರೀ ಅವರೊಂದಿಗೆ ನಟಿಸಿದ್ದು ಬಹಳ ಸಂತೋಷವಾಗಿದೆ. ನನ್ನ ಮಗಳು ರಿತನ್ಯ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾಳೆ.
ಜನವರಿ 23 ರಂದು ತೆರೆಗೆ
ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ತಂತ್ರಜ್ಞರ ಕಾರ್ಯವೈಖರಿಯೂ ಚೆನ್ನಾಗಿದೆ. ನಮ್ಮ ಚಿತ್ರ ಜನವರಿ 23 ರಂದು ತೆರೆಗೆ ಬರಲಿದೆ. ಚಿತ್ರ ನಿಮ್ಮೆಲ್ಲರಿಗೂ ಮೆಚ್ಚುಗೆಯಾಗುವ ಭರವಸೆಯಿದೆ' ಎಂದರು. ಇನ್ನು ಉಮಾಶ್ರೀ, ರಿತನ್ಯಾ, ಮಿತ್ರ, ಶಿಶಿರ್, ಅಭಿಷೇಕ್ ದಾಸ್, ಛಾಯಾಗ್ರಾಹಕ ಸ್ವಾಮಿ ಜೆ ಗೌಡ, ಸಂಭಾಷಣಾಕಾರ ಮಾಸ್ತಿ, ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.