ಕೇಳಲೇ ಬೇಕು ವಾಣಿ ಜಯರಾಂ ಹಾಡಿರುವ ಈ 8 ಕನ್ನಡ ಹಾಡುಗಳು
10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ವಾಣಿ ಜಯರಾಂ. 19ಕ್ಕೂ ಹೆಚ್ಚು ಭಾಷೆಗಳಿಗೆ ಧ್ವನಿ ನೀಡಿದ ಗಾಯಕಿ....
ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿಜಯರಾಂ ಸುಮಾರು 19ಕ್ಕೂ ಹೆಚ್ಚು ಭಾಷೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಡು ಹಾಡಿದ್ದಾರೆ.
ಇವ ಯಾವ ಸೀಮೆ ಗಂಡು ಹಾಡು ತುಂಬಾನೇ ಫೇಮಸ್ ಆಗಿತ್ತು. ಶಿವರಾಜ್‌ಕುಮಾರ್ ಮತ್ತು ಸುಧಾರಾಣಿ ನಟಿಸಿರುವ ರಣರಂಗ ಚಿತ್ರದ ಹಾಡು ಇದಾಗಿದ್ದು. ಎಸ್‌ಪಿಬಿ ಮತ್ತು ವಾಣಿ ಅವರು ಹಾಡಿದ್ದಾರೆ.
1976ರಲ್ಲಿ ಬಿಡುಗಡೆಯಾದ ಬಯಲು ದಾರಿ ಚಿತ್ರದ ಕನಸಲು ನೀನೆ ಮನಸಲು ನೀನೆ ಅದ್ಭುತವಾಗಿದೆ. ಈ ಚಿತ್ರದಲ್ಲೂ ಎಸ್‌ಪಿಬಿ ಜೊತೆ ಹಾಡಿದ್ದಾರೆ.
1974ರಲ್ಲಿ ಬಿಡುಗಡೆಯದ ಎರಡು ಕನಸು ಚಿತ್ರದ 'ಎಂದೆಂದು ನಿನ್ನನು ಮರೆತು' ಹಾಡನ್ನು ಪಿಬಿ ಶ್ರೀನಿವಾಸ ಮತ್ತು ವಾಣಿ ಜಯರಾಂ ಹಾಡಿದ್ದಾರೆ.
ರಣದೀರ ಚಿತ್ರದಲ್ಲಿ 'ಏನ್ ಹುಡ್ಗಿರೋ ಅದ್ಯಾಕಿಂಗ್ ಆಡ್ತಿರೋ' ಹಾಡನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಮಾಸ್ಟರ್ ಮಂಜುನಾಥ್ ಜೊತೆ ಹಾಡಿದ್ದಾರೆ.
ರವಿಚಂದ್ರನ್ ಮತ್ತು ಜೂಲಿ ಅಭಿನಯಿಸಿರುವ ಪ್ರೇಮಲೋಕ ಚಿತ್ರದ ಬಾತ್‌ರೂಮಿನಲ್ಲಿ ಹಾಡನ್ನು ವಾಣಿ ಜಯರಾಮ್ ಹಾಡಿದ್ದಾರೆ. ಈ ಹಾಡು ಒಂದು ರೀತಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು.
2014ರಲ್ಲಿ ಬಿಡುಗಡೆಯಾದ ರಣರಂಗ ಚಿತ್ರದ ನಿನ್ನ ಕಣ್ಣುಗಳು ಹಾಡು ಹೆಚ್ಚು ಜನಪ್ರಿಯತೆ ಪಡೆಯಿತ್ತು. ಈ ಹಾಡನ್ನು ಎಸ್‌ಪಿಬಿ ಜೊತೆ ಹಾಡಿದ್ದಾರೆ. ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ.
ರಾಜ್‌ಕುಮಾರ್ ಮತ್ತು ಜಯಪ್ರದಾ ಅಭಿನಯಿಸಿರುವ ಕವಿರತ್ನ ಕಾಳಿದಾಸ ಚಿತ್ರದ ಓ ಪ್ರಿಯತಮಾ ಹಾಡು. ಡಾ. ರಾಜ್‌ಕುಮಾರ್ ಜೊತೆ ಈ ಹಾಡನ್ನು ಹಾಡಿದ್ದಾರೆ.
ನಾ ಬಿಡಲಾರೆ ಎಂದು ನಿನ್ನ ಹಾಡು ಕೂಡ ಜನಪ್ರಿಯತೆ ಪಡೆದಿದೆ. ಡಾ ರಾಜ್‌ಕುಮಾರ್ ಜೊತೆ ಈ ಹಾಡನ್ನು ಹಾಡಿದ್ದಾರೆ. ಆರತಿ, ಜಯಮಾಲ ಮತ್ತು ಅಣ್ಣಾವ್ರು ಅಭಿನಯಿಸಿದ್ದಾರೆ.