ಕಿಚ್ಚ ಹಾಫ್ ಸೆಂಚುರಿ; ಸ್ಪೆಷಲ್ ವಿಶ್ ಮಾಡಿದ ಪುತ್ರಿ ಸಾನ್ವಿ ಸುದೀಪ್!
ಅಭಿನಯ ಚಕ್ರವರ್ತಿಗೆ 50ರ ಸಂಭ್ರಮ. ನಿಮ್ಮನ್ನು ಪಡೆದ ನಾನೇ ಲಕ್ಕಿ ಎಂದ ಪುತ್ರಿ ಸಾನ್ವಿ...

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 50ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಫ್ ಸೆಂಚುರಿ ಬರ್ತಡೇ ಅದ್ಧೂರಿಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಿಚ್ಚ ಸುದೀಪ್ ಪುತ್ರಿ ತಂದೆಗೆ ಸ್ಪೆಷಲ್ ವಿಶ್ ಮಾಡಿದ್ದಾಳೆ. ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದಾಳೆ.
ಹ್ಯಾಪಿ 50ನೇಹುಟ್ಟುಹಬ್ಬ ನನ್ನ ಬೆಸ್ಟ್ ಫ್ರೆಂಡ್. ನಿಮ್ಮನ್ನು ಪಡೆಯಲು ನಾನು ತುಂಬಾ ಲಕ್ಕಿ. ಹೇಗೆ ಇಷ್ಟೊಂದು ಲಕ್ ಪಡೆದಿರುವೆ? ಲವ್ ಯು ಎಂದು ಸಾನ್ವಿ ಬರೆದುಕೊಂಡಿದ್ದಾರೆ.
ಬಾಲ್ಯದಿಂದ ಈಗಿನವರೆಗೂ ಸಾನ್ವಿ ತಂದೆ ಜೊತೆಗೆ ಫೋಟೋ ಹಾಕಿದ್ದಾರೆ. ಜೊತೆಗೆ ಮನೆಯಲ್ಲಿ ತಂದೆ ಜೊತೆ Pillow ಫೈಟ್ ವಿಡಿಯೋ ಶೇರ್ ಮಾಡಿದ್ದಾರೆ.
ಕಿಚ್ಚ 50ನೇ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿರುವ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ಸಾನ್ವಿ ಕೂಡ ಅದ್ಭುತ ಗಾಯಕಿ ಹಾಗೂ ಪೇಯಿಂಟಿಂಗ್ ಆರ್ಟಿಸ್ಟ್. ಈ ವರ್ಷ ಅತ್ತೆ ಮಗ ನಟನೆಯ ಜಿಮ್ಮಿ ಚಿತ್ರದಲ್ಲಿ ಹಾಡಿ ಗಾಯಕಿ ಆಗಿದ್ದಾರೆ. ಸಖತ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
'ಅಪ್ಪ ನಾನು ಸದಾ ಹೇಳುವ ಹಾಗೆ ನಿಮ್ಮ ಮೊದಲ ಅಭಿಮಾನಿ ನಾನು. ನಿಮ್ಮ ಕೆಲಸದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ನೆಚ್ಚಿನ ಸೂಪರ್ ಸ್ಟಾರ್ ನೀನು ಎಂದಿದ್ದಾರೆ ಸಾನ್ವಿ.